ಹೈಬ್ರಿಡ್ ವೇರಿಯಂಟ್‌ನಲ್ಲಿ ಮತ್ತೆ ಬ್ರೆಝಾ ಮಾರುಕಟ್ಟೆಗೆ: ಇನ್ನು ಇದರ ಮೈಲೇಜ್‌ಗೆ ಸಾಟಿಯೇ ಇಲ್ಲ!
ಮಾರುತಿ ಸುಜುಕಿಯು ಈ ಹಿಂದೆಂದಿಗಿಂತಲೂ ಅತೀ ಹೆಚ್ಚು ಎಸ್‌ಯುವಿಗಳನ್ನು ಮಾರಾಟ ಮಾಡಿದ ವರ್ಷ 2023. ಕೇವಲ ಡಿಸೆಂಬರ್ ತಿಂಗಳು ಮಾತ್ರವೇ ಸುಮಾರು ಹದಿಮೂರು ಸಾವಿರ ಎಸ್‌ಯುವಿಗಳನ್ನು ಮಾರಾಟ ಮಾಡುವ ಮೂಲಕ ಕಳೆದ ವರ್ಷವನ್ನು ಕಂಪನಿ ಭರ್ಜರಿಯಾಗಿಯೇ ಮುಗಿಸಿತ್ತು. ಇದೀಗ ಈ ವರ್ಷಕ್ಕೆ ಮಾರುತಿ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ.
ಹೌದು, 2024 ರಲ್ಲೂ ಮಾರುತಿ ಸುಜುಕಿ ಕಂಪನಿ ತನ್ನ ಎಸ್‌ಯುವಿಗಳ ಮಾರಾಟವನ್ನು ಹೆಚ್ಚು ಮಾಡಲು ಭರ್ಜರಿ ಪ್ಲಾನ್ ಒಂದನ್ನು ರೂಪಿಸಿದೆ. ಈ ಪ್ಲಾನ್ ಪ್ರಕಾರ ಮಾರುತಿ ಸುಜುಕಿಯ ಪ್ರಸಿದ್ದ ಎಸ್‌ಯುವಿ ಮಾಡೆಲ್ ಆದ ಮಾರುತಿ ಸುಜುಕಿ ಬ್ರೇಝಾ ದ ಮೈಲ್ಡ್ ಹೈಬ್ರಿಡ್ ವರ್ಷನ್ ಅನ್ನು ಮತ್ತೆ ಮಾಡುಕಟ್ಟೆಗೆ ರೀಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ.

ಮಾರುತಿ ಸುಜುಕಿ ಬ್ರೇಝಾ ಆರಂಭದಲ್ಲಿ ಮೈಲ್ಡ್ ಹೈಬ್ರಿಡ್ ವರ್ಷನ್‌ನಲ್ಲೂ ಲಭ್ಯವಿತ್ತು. ಆದರೆ ಕೆಲವು ತಿಂಗಳುಗಳ ಹಿಂದೆ ಮೈಲ್ಡ್ ಹೈಬ್ರಿಡ್ ವರ್ಷನ್ ಅನ್ನು ಸ್ಥಗಿತಗೊಳಿಸಿದ್ದರು. ಇದರಿಂದ ಮಾರುತಿ ಸುಜುಕಿ ಬ್ರೇಝಾ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೆ ಮತ್ತೆ ಈ ಸುದ್ದಿ ಕೇಳಿದುದರಿಂದ ಸಂತೋಷಗೊಂಡಿರುವ ಅಭಿಮಾನಿಗಳು ಇದು ಯಾವಾಗ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಕಾದು ಕುಳಿತಿದ್ದಾರೆ.
ಈ ಹಿಂದೆ 2023ರಲ್ಲಿ ಮಾರುತಿ ಸುಜುಕಿಯು ಈ ಕಾರಿನಲ್ಲಿ ಸ್ಟಾಂಡರ್ಡ್ ಆಗಿಯೇ 48V ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಅನ್ನು ತನ್ನ ಎಲ್ಲಾ ವೇರಿಯಂಟ್‌ನಲ್ಲೂ ನೀಡುತ್ತಿತ್ತು. ಆದರೆ ಈ ಬಾರಿಯಿಂದ ಈ ಮೈಲ್ಡ್ ಹೈಬ್ರಿಡ್ ಫೀಚರ್ ಅನ್ನು ನೀಡುವ ಯೋಜನೆ ಇದೆಯಾದರೂ, ಟಾಪ್ ವೇರಿಯಂಟ್‌ಗಳಲ್ಲಿ ಮಾತ್ರ ಕಂಪನಿ ಇದನ್ನು ನೀಡಲಿದೆ ಎಂದು ತಿಳಿದು ಬಂದಿದೆ.

ಇನ್ನು ಈ ಕಾರಿನ ಕುರಿತಾದ ಇತರ (Maruti Suzuki Brezza) ಮಾಹಿತಿಗಳನ್ನು ಹೇಳುವುದಾದರೆ, ಮಾರುತಿ ಸುಜುಕಿ ಭಾರತದ ಮಾರುಕಟ್ಟೆಯಲ್ಲಿ 2016ರಲ್ಲಿ ಈ ಕಾರನ್ನು ವಿಟಾರಾ ಬ್ರೆಝಾ (Vitara Brezza) ಹೆಸರಿನಲ್ಲಿ ಲಾಂಚ್ ಮಾಡಿತ್ತು. ಕಾಲಾಂತರದಲ್ಲಿ ಹೆಸರನ್ನು ಬದಲಾಯಿಸಿ, 'ಬ್ರೆಝಾ' ಎಂಬುದನ್ನು ಉಳಿಸಿಕೊಂಡಿತು. ಬಿಡುಗಡೆಗೊಂಡ ದಿನದಿಂದಲೂ ಇದಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಈವರೆಗೆ 10 ಲಕ್ಷ ಯುನಿಟ್ ಕಾರನ್ನು ಮಾರಾಟಗೊಳಿಸಿದ ಮೈಲಿಗಲ್ಲನ್ನು ಸಾಧಿಸಿದೆ.
5 ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, ಎಲ್ಎಕ್ಸ್ಐ, ವಿಎಕ್ಸ್ಐ ಸೇರಿದಂತೆ 4 ರೂಪಾಂತರ, ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಎಕ್ಸುಬರಂಟ್ ಬ್ಲೂ, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಒಳಗೊಂಡಂತೆ 6 - ಮೊನೊಟೊನ್, 3 - ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

ಇನ್ನು ಮುಂದೆ ಮಾರುತಿ ಸುಜುಕಿ ಬ್ರೆಝಾದಲ್ಲಿ 48V ಮೈಲ್ಡ್ ಹೈಬ್ರಿಡ್ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ಲಬ್ಯವಾಗಲಿದೆ. ಈ ಕಾರು 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಸಿಎನ್‌ಜಿ ಪವರ್ ಟ್ರೈನ್ ಪಡೆದಿರುವ ಕಾರು, ಇದೇ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಆದರೆ, 88 PS ಪವರ್, 121.5 Nm ಪೀಕ್ ಟಾರ್ಕ್ ಉತ್ಪಾದಿಸಲು ಶಕ್ತವಾಗಿದೆ.
ಈ ಮಾರುತಿ ಸುಜುಕಿ ಬ್ರೆಝಾ ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, 4 - ಸ್ಪೀಕರ್ ಸೌಂಡ್ ಸಿಸ್ಟಮ್, ಸಿಂಗಲ್-ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಹೆಡ್ಸ್-ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications