ಮಾರುತಿ ಸುಜುಕಿ ಬ್ರೆಝಾ: ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ ನಿಲ್ಲುವ ಟಾಪ್ ವೈಶಿಷ್ಟ್ಯಗಳಿವು!
ಭಾರತೀಯ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಮಾರುತಿ ಸುಜುಕಿ ಬ್ರೆಝಾ, 2016 ರಲ್ಲಿ ಬಿಡುಗಡೆಯಾದಾಗಿನಿಂದ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ. ಒಂದು ಕಾಲದಲ್ಲಿ ತನ್ನ ವಿಭಾಗದ ರಾಜನಾಗಿತ್ತು, ಮಾರಾಟ ಪಟ್ಟಿಯಲ್ಲಿ ನಿರಂತರವಾಗಿ ಅಗ್ರಸ್ಥಾನದಲ್ಲಿ ಮುಂದುವರೆಯುತ್ತಿತ್ತು. ಪ್ರತಿಸ್ಪರ್ಧಿಗಳು ಹೆಚ್ಚಾಗುತ್ತಿದ್ದ ಕಾರಣ ಬ್ರೆಝಾ 2022 ರಲ್ಲಿ ನವೀಕರಣವನ್ನು ಪಡೆದು ಬಿಡುಗಡೆಯಾಯಿತು. ಪ್ರಸ್ತುತ ಭಾರೀ ಪೈಪೋಟಿಯ ನಡುವೆಯೂ ಬ್ರೆಝಾ ತನ್ನದೇ ಆದ ಸಾಮರ್ಥ್ಯಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಒಂದು ಬಲವಾದ ಆಯ್ಕೆಯಾಗಿ ಉಳಿದಿದೆ. ಈ ಬಗ್ಗೆ ಆಳವಾಗಿ ಪರಿಶೀಲಿಸಿ ಬ್ರೆಝಾ ಕುರಿತ ಹೆಚ್ಚಿನ ಮಾಹಿತಿ ಇಲ್ಲಿ ತಿಳಿಯೋಣ.
ಬಾಕ್ಸಿ ಡಿಸೈನ್: ಬ್ರೆಝಾಗೆ ಪ್ರತಿಸ್ಪರ್ಧಿಗಳಾದ ಟಾಟಾ ನೆಕ್ಸಾನ್, ಮಹೀಂದ್ರಾ XUV300 ಮತ್ತು ಕಿಯಾ ಸಾನೆಟ್‌ನಂತಹ ಕಾರುಗಳು ಇಳಿಜಾರಿನ ರೂಫ್‌ನೊಂದಿಗೆ ಹೆಚ್ಚು ಸ್ಪೋರ್ಟಿ ಲುಕ್ ಪಡೆದು ಭಿನ್ನವಾಗಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಆದರೆ ಮಾರುತಿ ಬ್ರೆಝಾ ತನ್ನ ಹಳೆಯ ಕ್ಲಾಸಿಕ್ ಬಾಕ್ಸ್ SUV ಸಿಲೂಯೆಟ್ ಲುಕ್ ಅನ್ನು ಹಾಗೇ ಉಳಿಸಿಕೊಂಡಿದೆ. LED ಟೈಲ್‌ಲೈಟ್‌ಗಳು ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳ ಆಯ್ಕೆಯನ್ನು ಹೊಂದಿದೆ.

CNG ಆಯ್ಕೆ: ಕಂಪನಿಯು CNG ಆಯ್ಕೆಯನ್ನು ನೀಡುವ ಮೊದಲ ಮಾದರಿಯಾಗಿ ಬ್ರೆಝಾವನ್ನು ಪರಿಚಯಿಸಿದ್ದು, ಸಬ್‌ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಗಮನಾರ್ಹ ಪ್ರಯೋಜನವನ್ನು ಪಡೆದುಕೊಂಡಿದೆ. ಟಾಟಾ ನೆಕ್ಸಾನ್‌ನಂತಹ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಸಹ ಸಿಎನ್‌ಜಿ ಆಯ್ಕೆ ನೀಡುತ್ತವೆ, ಆದ್ರೆ ಮಾರುತಿ ಮೇಲುಗೈ ಹೊಂದಿದೆ. LXi, VXi, ಮತ್ತು ZXi ವೇರಿಯೆಂಟ್‌ಗಳಲ್ಲಿ Brezza CNG ಬರುತ್ತದೆ. ಬೆಲೆ ರೂ. 9.24 ಲಕ್ಷದಿಂದ ರೂ. 12.15 ಲಕ್ಷದವರೆಗೆ ಇದೆ.
ಮೈಲೇಜ್: ಬ್ರೆಝಾ ಮ್ಯಾನುಯಲ್ ಟ್ರಾನ್ಸ್‌ಮಿಷನ್ 20.15 kmpl ವರೆಗಿನ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇದರ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ನವೀಕರಿಸಿದ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿಸಲ್ಪಟ್ಟಿದೆ. ಇದು ಮಾರುತಿ ಸುಜುಕಿಯ ಸ್ಮಾರ್ಟ್-ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ.

ಬ್ರೆಝಾದ ಆಟೋಮ್ಯಾಟಿಕ್ ರೂಪಾಂತರಗಳು 19.8 kmpl ಮೈಲೇಜ್ ನೀಡುವುದಾಗಿ ಮಾರುತಿ ಹೇಳಿಕೊಂಡಿದೆ. ಪ್ರತಿಸ್ಪರ್ಧಿಗಳಾದ ಟಾಟಾ ನೆಕ್ಸಾನ್ AMT 17.18 kmpl ಮತ್ತು ಅದರ DCT 17.01 kmpl ನಷ್ಟು ಮೈಲೇಜ್ ನೀಡುತ್ತವೆ. ಮಹೀಂದ್ರಾ XUV 3XO 18.2 kmpl ಮೈಲೇಜ್ ನೀಡುತ್ತದೆ, ಹಾಗೆಯೇ Kia Sonet ಮತ್ತು ಹುಂಡೈ ವೆನ್ಯೂ ಕ್ರಮವಾಗಿ 18.4 kmpl ಮತ್ತು 18.3 kmpl ಮೈಲೇಜ್ ನೀಡುತ್ತವೆ.
ಹೆಡ್ಸ್ ಅಪ್ ಡಿಸ್ಪ್ಲೇ: ಸಬ್-4m SUV ವಿಭಾಗದಲ್ಲಿ ಬ್ರೆಝಾದಲ್ಲಿ ಹೆಡ್ಸ್-ಅಪ್ ಡಿಸ್ಪ್ಲೇ (HUD) ನೊಂದಿಗೆ ಬರುತ್ತದೆ. ಇದು ಡ್ರೈವಿಂಗ್ ಮಾಹಿತಿಯನ್ನು ನೇರವಾಗಿ ವಿಂಡ್‌ಶೀಲ್ಡ್ ಮುಂದೆಯೇ ನೀಡುತ್ತದೆ. HUD ಪ್ರಸ್ತುತ ವೇಗ, ಇಂಧನ ಮಟ್ಟ, ಗೇರ್ ಆಯ್ಕೆ (ಸ್ವಯಂಚಾಲಿತ ಮಾದರಿಗಳಿಗೆ), ಸಮಯ ಮತ್ತು ಮೈಲೇಜ್‌ನಂತಹ ಅಗತ್ಯ ವಿವರಗಳನ್ನು ಪ್ರದರ್ಶಿಸುತ್ತದೆ.

ಎಂಜಿನ್: ಮಾರುತಿ ಬ್ರೆಝಾ ಸಿಂಗಲ್ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಹೊಂದಿದೆ. ಈ ನಾಲ್ಕು-ಸಿಲಿಂಡರ್ ಎಂಜಿನ್ ಉತ್ತಮ ಪರ್ಫಾಮೆನ್ಸ್ ಮತ್ತು ಬೆಸ್ಟ್ ಮೈಲೇಜ್ ನೀಡುತ್ತದೆ. ಇದು 102 bhp ಪವರ್ ಮತ್ತು 137 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಬ್ರೆಜ್ಜಾವನ್ನು ಸಬ್‌ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಬೆಸ್ಟ್ ಆಯ್ಕೆಯನ್ನಾಗಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications