ಬೈಕ್‌ಗಳು ಈ ಪ್ರಮಾಣದಲ್ಲಿ ಮೈಲೇಜ್ ನೀಡುವುದಿಲ್ಲ: ಮಾರುತಿ ಬ್ರೆಝಾಗಾಗಿ ಮುಗಿಬಿದ್ದ ಗ್ರಾಹಕರು, ಬೆಲೆ ಎಷ್ಟು?
ದೇಶದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಮನೆ ಮಾತಾಗಿದೆ. ನೆಕ್ಸಾ ಮತ್ತು ಅರೆನಾ ಡೀಲರ್‌ಶಿಪ್ ಮೂಲಕ ಆಲ್ಟೊ, ಸೆಲೆರಿಯೊ, ಬಲೆನೊ, ವ್ಯಾಗನ್ಆರ್, ಇಗ್ನಿಸ್, ಜಿಮ್ನಿ ಸೇರಿದಂತೆ ಹಲವು ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಇವು ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯವನ್ನು ಹೊಂದಿರುವುದರಿಂದ ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯ ಬ್ರೆಝಾ (Brezza) ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಭಾರೀ ಬೇಡಿಕೆಯಿದ್ದು, ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.
ಕಳೆದ ತಿಂಗಳು (ಮೇ 2024) 14,186 ಯುನಿಟ್ 'ಮಾರುತಿ ಸುಜುಕಿ ಬ್ರೆಝಾ' ಕಾರುಗಳು ಮಾರಲಾಗಿದೆ. 2023ರ ಇದೇ ಅವಧಿಗೆ ಹೋಲಿಸಿದರೆ (13,398 ಯುನಿಟ್) ಮಾರಾಟ ಪ್ರಮಾಣವು ಶೇಕಡ 5.88% ಬೆಳವಣಿಗೆಯನ್ನು ಕಂಡಿದೆ. ದೇಶೀಯವಾಗಿ ಲಭ್ಯವಿರುವ ನೂತನ ಬ್ರೆಝಾ ಕಾರು ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಈ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎಸ್‌ಯುವಿಯು ಆಕರ್ಷಕವಾದ ವಿನ್ಯಾಸ (ಡಿಸೈನ್)ವನ್ನು ಪಡೆದಿದೆ. ಎಲ್ಎಕ್ಸ್ಐ, ವಿಎಕ್ಸ್ಐ,ಝಡ್ಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯಲ್ಲಿ ಸಿಗಲಿದ್ದು, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್, ಪರ್ಲ್ ಮಿಡ್ನೈಟ್ ಬ್ಲಾಕ್ ಒಳಗೊಂಡಂತೆ ಹಲವು ಬಣ್ಣಗಳನ್ನು ಕೂಡ ಹೊಂದಿದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
ಹೊಸ ಕಾರು 2 ಪವರ್‌ಟ್ರೇನ್‌ನೊಂದಿಗೆ ದೊರೆಯುತ್ತದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 137 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಸಿಎನ್‌ಜಿ ಚಾಲಿತ ಮಾದರಿಯು ಇದೇ ಎಂಜಿನ್‌ನ್ನು ಒಳಗೊಂಡಿದೆ. ಆದರೆ 88 ಪಿಎಸ್ ಪವರ್ ಹಾಗೂ 121.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಲಷ್ಟೇ ಶಕ್ತವಾಗಿದೆ.

ಬ್ರೆಝಾ ಎಸ್‌ಯುವಿಯು ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 17.38 - 19.89 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 25.51 ಕೆಎಂ/ಕೆಜಿ ವರೆಗೆ ಮೈಲೇಜ್ ನೀಡುತ್ತವೆ.
ನೂತನ ಮಾರುತಿ ಸುಜುಕಿ ಬ್ರೆಝಾ ಕಾರು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 6-ಸ್ಪೀಕರ್ ಸೆಟಪ್, ಪ್ಯಾಡಲ್ ಶಿಫ್ಟರ್ಸ್, ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರವಾಸದ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 328 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಪಡೆದಿದೆ.

ಬ್ರೆಝಾ ಎಸ್‌ಯುವಿಯು ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. 6-ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಹೋಲ್ಡ್ ಅಸಿಸ್ಟ್, ಸೀಟ್ ಬೆಲ್ಟ್ ರಿಮೈಂಡರ್ಸ್, ರೇರ್ ಪಾರ್ಕಿಂಗ್ ಸೇನಾರ್ಸ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಕಾರಿಗೆ ಕಿಯಾ ಸೋನೆಟ್, ರೆನಾಲ್ಟ್ ಕಿಗರ್, ನಿಸ್ಸಾನ್ ಮ್ಯಾಗ್ನೈಟ್, ಹುಂಡೈ ವೆನ್ಯೂ ಮತ್ತು ಟಾಟಾ ನೆಕ್ಸಾನ್ ದೊಡ್ಡ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications