ಲಕ್ಷ ಲಕ್ಷ ಕೊಟ್ರು ಸಿಗುತ್ತಿಲ್ಲ ಈ ಮಾರುತಿ ಕಾರು : 20 ಸಾವಿರಕ್ಕೂ ಹೆಚ್ಚು ಆರ್ಡರ್ ಬಾಕಿ!
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಹಲವು ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರುಗಳಿಗಾಗಿ ತಿಂಗಳಿನಿಂದ ತಿಂಗಳಿಗೆ ಬೃಹತ್ ಬುಕಿಂಗ್ ಅನ್ನು ದಾಖಲಿಸುತ್ತಲೇ ಇದೆ. 2024ರ ಮೇ ತಿಂಗಳ ಹೊತ್ತಿಗೆ, ವಾಹನ ತಯಾರಕರು ಇನ್ನೂ ಸುಮಾರು 2.2 ಲಕ್ಷ ಯುನಿಟ್‌ಗಳನ್ನು ವಿತರಿಸಬೇಕಾಗಿದೆ.
ವಿತರಿಸಬೇಕಾದ ಮಾದರಿಗಳಲ್ಲಿ ಇದು ಎರ್ಟಿಗಾ, ಬ್ರೆಝಾ, ಡಿಜೈರ್ ಮತ್ತು ವ್ಯಾಗನ್ ಆರ್‌ನಂತಹ ಕಾರುಗಳು ಒಳಗೊಂಡಿದೆ. ಒಟ್ಟು 2.2 ಲಕ್ಷ ಬುಕಿಂಗ್‌ಗಳಲ್ಲಿ, ಮಾರುತಿ ಬ್ರೆಝಾ ಎಸ್‍ಯುವಿಗೆ 20,00020,000 ಬಾಕಿ ಆರ್ಡರ್‌ಗಳನ್ನು ಹೊಂದಿದೆ. ಈ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಜನಪ್ರಿಯ ಮಾದರಿ ಮತ್ತು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಬ್-4ಮೀಟರ್ ಎಸ್‍ಯುವಿಗಳಲ್ಲಿ ಒಂದಾಗಿದೆ.

ಮಾರುತಿ ಸುಜುಕಿ ಬ್ರೆಝಾ ವಿನ್ಯಾಸದ ದೃಷ್ಟಿಯಿಂದಲೂ ಅತ್ಯಾಧುನಿಕವಾಗಿದ್ದು, 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಸಿಜ್ಲಿಂಗ್ ರೆಡ್, ಬ್ರೇವ್ ಖಾಖಿ, ಪರ್ಲ್ ಮಿಡ್ನೈಟ್ ಬ್ಲಾಕ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದ್ದು, FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ.
ಮಾರುತಿ ಸುಜುಕಿ ಬ್ರೆಝಾ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್ಸ್, ಸಿಂಗಲ್ ಪೇನ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 360 - ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.

ಈ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯಲ್ಲಿ 1.5-ಲೀಟರ್, 4-ಸಿಲಿಂಡರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 99.2 bhp ಮತ್ತು 136 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಮರ್ಥ್ಯವನ್ನು ಹೊಂದಿದೆ. ಇನ್ನು ಮತ್ತೊಂದೆಡೆ, CNG ರೂಪಾಂತರವು 86.63 bhp ಮತ್ತು 121.5 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಗೇರ್‌ಬಾಕ್ಸ್ ಆಯ್ಕೆಗಳ ವಿಷಯದಲ್ಲಿ, ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಮಾರುತಿ ಸುಜುಕಿ ಬ್ರೆಝಾ ಆಯ್ಕೆಗಳನ್ನು ನೀಡಲಾಗುತ್ತಿದೆ. ಆದರೆ ಮಾರುತಿ ಸುಜುಕಿ ಬ್ರೆಝಾ ಎಸ್‍ಯುವಿಯ ಸಿಎನ್‌ಜಿ ರೂಪಾಂತರಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಈ ಕಾರು ತಯಾರಕ ತನ್ನ ಎಸ್-ಸಿಎನ್ ಜಿ ವಾಹನಗಳನ್ನು ಅತ್ಯುತ್ತಮ ಕಾರ್ಯಕ್ಷಮತೆ, ಸುರಕ್ಷತೆ, ಎಂಜಿನ್ ಬಾಳಿಕೆ, ಅನುಕೂಲತೆ ಮತ್ತು ಮೈಲೇಜ್ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಮಾರುತಿ ಬ್ರೆಝಾ ಎಸ್‌ಯುವಿ ಮುಂಭಾಗದಲ್ಲಿ ನವೀಕೃತ ಫ್ಲಾಟ್-ಲುಕಿಂಗ್ ಕ್ಲಾಮ್‌ಶೆಲ್ ಬಾನೆಟ್ ನೀಡಲಾಗಿದ್ದು, ಸ್ಕ್ವಾರಿಶ್ ಡ್ಯುಯಲ್-ಎಲ್‌ಇಡಿ ಹೆಡ್‌ಲ್ಯಾಂಪ್ ವಿನ್ಯಾಸವು ಇದೀಗ ಗನ್‌ಮೆಟಲ್ ಶೆಡ್ ಹೊಂದಿರುವ ಗ್ರಿಲ್‌ನೊಂದಿಗೆ ಅಂದವಾಗಿ ವಿಲೀನಗೊಳಿಸಲಾಗಿದೆ. ಹಾಗೆಯೇ ಕಾಂಟ್ರಾಸ್ಟ್ ಬ್ಲ್ಯಾಕ್ ಕ್ಲಾಡಿಂಗ್ ಉತ್ತಮವಾಗಿದೆ.
ಟೈಲ್ ಲ್ಯಾಂಪ್ ಉತ್ತಮ ಹೊರನೋಟ ಹೊಂದಿದ್ದು, ಲೈಸೆನ್ಸ್ ಪ್ಲೇಟ್‌ನ ಮೇಲ್ಭಾಗದ ಮಧ್ಯದಲ್ಲಿ ಬ್ರೆಜ್ಜಾ ಬ್ಯಾಡ್ಜಿಂಗ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನ ಬೆಸ್ ವೆರಿಯೆಂಟ್‌ಗಳಲ್ಲಿ ಫ್ಲೋಟಿಂಗ್ ರೂಫ್ ಎಫೆಕ್ಟ್‌ನೊಂದಿಗೆ ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಶೇಡ್‌ಗಳೊಂದಿಗೆ ಕಾರಿನ ಉದ್ದಳತೆ ಹೆಚ್ಚು ಕಾಣುವಂತೆ ಮಾಡುತ್ತವೆ. ಹೊಸ ಎಸ್‍ಯುವಿಯ ಇಂಟಿರಿಯರ್ ಕೂಡ ಇದೀಗ ಹೊಸ ತಾಂತ್ರಿಕ ಅಂಶಗಳಿಂದ ಕೂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications