34 Km ಮೈಲೇಜ್.. 5-ಸೀಟರ್, ಈ ಪ್ರಖ್ಯಾತ ಮಾರುತಿ ಕಾರನ್ನು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು.. EMI ಏನು?
ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಸೆಲರಿಯೊ (Celerio) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ನೀವು ಈ ನವೆಂಬರ್‌ನಲ್ಲಿ ಹೊಸ ಕಾರನ್ನು ಖರೀದಿ ಮಾಡಲು ಆಲೊಚಿಸಿದ್ದೀರಾ.. ಹಾಗಾದರೆ, ನಿಮ್ಮ ಪುಟ್ಟ ಕುಟುಂಬಕ್ಕೆ ಸೆಲರಿಯೊ ಹ್ಯಾಚ್‌ಬ್ಯಾಕ್ ಹೆಚ್ಚು ಸೂಕ್ತವಾಗಲಿದೆ. ನಾವಿಲ್ಲಿ ಈ ನೂತನ ಕಾರಿನ ಆನ್-ರೋಡ್ ಬೆಲೆ (On-Road Price) ಮೈಲೇಜ್ (Mileage) ಹಾಗೂ ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೇವೆ.
ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಸೆಲರಿಯೊ (Maruti Suzuki Celerio) ಹ್ಯಾಚ್‌ಬ್ಯಾಕ್ ಹತ್ತಾರು ರೂಪಾಂತರಗಳಲ್ಲಿ (ವೇರಿಯೆಂಟ್) ಖರೀದಿಗೆ ಲಭ್ಯವಿದೆ. ಇದರ ಎಲ್ಎಕ್ಸ್ಐ (ಪೆಟ್ರೋಲ್) ರೂ.5.37 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಇದನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಮಾಡಿ ಖರೀದಿ ಮಾಡಿದರೆ, ರೂ.3.37 ಲಕ್ಷ ಸಾಲವಿರುತ್ತದೆ. ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.7,117 ಇಎಂಎಂ ಕಟ್ಟಬೇಕು.

ಈ ಸೆಲರಿಯೊ ಕಾರಿನ ಜಡ್ಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.6.12 ಲಕ್ಷ ಆನ್-ರೋಡ್ ದರವನ್ನು ಒಳಗೊಂಡಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಈ ಕಾರನ್ನು ಮನೆಗೆ ತಂದರೆ, ರೂ.4.12 ಲಕ್ಷ ಸಾಲ ಬಾಕಿ ಉಳಿಯುತ್ತದೆ. ಅದಕ್ಕೆ 9.8% ಬಡ್ಡಿ ಹಾಕಿ 5 ವರ್ಷದ ಅವಧಿಗೆ ಮಾಸಿಕ ರೂ.8,703 ಇಎಂಐ ಪಾವತಿಸಬೇಕು.
ಮಾರುತಿ ಸೆಲರಿಯೊ ಹ್ಯಾಚ್‌ಬ್ಯಾಕ್‌ನ ವಿಎಕ್ಸ್ಐ (ಪೆಟ್ರೋಲ್) ರೂ.5.83 ಲಕ್ಷ ಆನ್-ರೋಡ್ ಬೆಲೆಯನ್ನು ಪಡೆದಿದೆ. ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿಸಿ ಈ ಕಾರನ್ನು ತೆಗೆದುಕೊಂಡರೆ, ರೂ.3.83 ಲಕ್ಷ ಸಾಲವಿರುತ್ತದೆ. ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.8,111 ಇಎಂಐ ಕಟ್ಟಬೇಕು.

ನೂತನ ಮಾರುತಿ ಸುಜುಕಿ ಸೆಲರಿಯೊ ಕಾರಿನ ವಿಎಕ್ಸ್ಐ (ಸಿಎನ್‌ಜಿ) ರೂ.6.74 ಲಕ್ಷ ಆನ್-ರೋಡ್ ದರವನ್ನು ಹೊಂದಿದೆ. ಈ ಕಾರನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.4.74 ಲಕ್ಷ ಸಾಲ ಬಾಕಿಯಿರುತ್ತದೆ. 9.8% ಬಡ್ಡಿ ಹಾಕಿ 5 ವರ್ಷದ ಅವಧಿಗೆ ಮಾಸಿಕ ರೂ.10,014 ಇಎಂಐ ಪಾವತಿ ಮಾಡಬೇಕು.
ಈ ಮಾರುತಿ ಸೆಲರಿಯೊ ಹ್ಯಾಚ್‌ಬ್ಯಾಕ್‌ನ ಜಡ್ಎಕ್ಸ್ಐ ಪ್ಲಸ್ (ಪೆಟ್ರೋಲ್) ರೂಪಾಂತರ, ರೂ.6.59 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಇದನ್ನು ರೂ.2 ಲಕ್ಷ ಡೌನ್ ಪೇಮೆಂಟ್ ಪಾವತಿ ಮಾಡಿ ಖರೀದಿಸಿದರೆ, ರೂ.4.59 ಲಕ್ಷ ಸಾಲವಿರುತ್ತದೆ. ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.9,718 ಇಎಂಐ ಕಟ್ಟಬೇಕು.

ನೂತನ ಸೆಲರಿಯೊ ಕಾರು 1-ಲೀಟರ್ ಪೆಟ್ರೋಲ್ & ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, 25.24 ರಿಂದ 34.43 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಈ ಕಾರಿನಲ್ಲಿ 5 ಮಂದಿ ಓಡಾಟ ನಡೆಸಬಹುದು. ಜೊತೆಗೆ 313 ಲೀಟರ್‌ನ ಬೂಟ್ ಸ್ಪೇಸ್‌ನ್ನು ಪಡೆದಿದೆ.
ಮಾರುತಿ ಸುಜುಕಿ ಸೆಲರಿಯೊ ಹ್ಯಾಚ್‌ಬ್ಯಾಕ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (7-ಇಂಚು), ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ ಮತ್ತು ಮ್ಯಾನುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರು ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಎಬಿಎಸ್(ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ಈ ಕಾರಿನ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ನಗರದಿಂದ ನಗರಕ್ಕೆ ಬೇರೆಯಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications