ಮಧ್ಯಮ ವರ್ಗದವರ ನೆಚ್ಚಿನ ಮಾರುತಿ ಸೆಲೆರಿಯೊ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ತನ್ನ ಆಯ್ದ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ. ಮಾರುತಿ ಸುಜುಕಿ ತನ್ನ ಕಾರುಗಳ ಮೇಲೆ ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ನೀಡಲಾಗಿದೆ.

ಮಾರುತಿ ತನ್ನ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರಿನ ಮೇಲೆ ಎಎಮ್‌ಟಿ ಆವೃತ್ತಿಯ ಬೆಲೆಯು ರೂ.61,000 ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದು, ಆದರೆ ಮ್ಯಾನುಯಲ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ಕ್ರಮವಾಗಿ, ರೂ 56,000 ಮತ್ತು ರೂ 39,000 ವರೆಗೆ ರಿಯಾಯಿತಿಗಳನ್ನು ಪಡೆಯುತ್ತವೆ. ಪ್ರಸ್ತುತ ಸೆಲೆರಿಯೊ ಬೆಲೆಯು 5.37 ಲಕ್ಷ-7.10 ಲಕ್ಷ ರೂ. ಆಗಿದೆ.

Maruti Suzuki Celerio

ಮಾರುತಿ ಸೆಲೆರಿಯೊ ಸ್ಲೀಕರ್ ವಿನ್ಯಾಸ, ಹೆಚ್ಚು ಪರಿಣಾಮಕಾರಿ ಎಂಜಿನ್ ಆಯ್ಕೆಗಳು, ಉತ್ತಮ ಕ್ಯಾಬಿನ್ ಸ್ಥಳ ಮತ್ತು ಅದರ ಹಿಂದಿನದಕ್ಕಿಂತ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ. ಮಾರುತಿ ಸೆಲೆರಿಯೊದಲ್ಲಿ 1.0 ಲೀಟರ್ ಕೆ 10ಸಿ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 66 ಬಿ‌ಹೆಚ್‌ಪಿ ಪವರ್ ಹಾಗೂ 89 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಹೊಸ ಸೆಲೆರಿಯೊ ಐದು ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ನೊಂದಿಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಪಡೆಯುತ್ತದೆ. ಈ ಮಾರುತಿ ಸೆಲೆರಿಯೊ ಕಾರು ಸಿಎನ್‌ಜಿ ಆಯ್ಕೆಯಲ್ಲಿಯು ಸಹ ಲಭ್ಯವಿದೆ. ಇದು 56.7 ಬಿಹೆಚ್‍ಪಿ ಪವರ್ ಮತ್ತು 82.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮ್ಯಾನ್ಯುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಮಾತ್ರ ಬರುತ್ತದೆ.

Maruti Suzuki Celerio

ಸೆಲೆರಿಯೊ ಸಹ ಸ್ವಿಫ್ಟ್ ಹಾಗೂ ಬಲೆನೊ ಕಾರುಗಳಂತೆ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರಂ ಅನ್ನು ಆಧರಿಸಿದೆ.ಈ ಸೆಲೆರಿಯೊ ಕಾರಿನಲ್ಲಿ ಸುರಕ್ಷತಾ ಫೀಚರ್ ಗಳಿಗೆ ಹೆಚ್ಚು ಆದ್ಯತೆ ನೀಡಿದೆ. ಹೊಸ ಸೆಲೆರಿಯೊ ಕಾರಿನಲ್ಲಿ ಡ್ರೈವರ್ ಹಾಗೂ ಫ್ರಂಟ್ ಸೀಟ್ ಪ್ಯಾಸೆಂಜರ್ ಏರ್‌ಬ್ಯಾಗ್‌, ಸೀಟ್ ಬೆಲ್ಟ್ ರಿಮೈಂಡರ್, ಎಬಿಎಸ್-ಇಬಿಡಿ, ಇಂಜಿನ್ ಇಮೊಬಿಲೈಜರ್ ಮತ್ತು ಹಿಂಭಾಗದ ಡೋರುಗಳು ಚೈಲ್ಡ್ ಪ್ರೂಫ್ ಲಾಕ್ ಹೊಂದಿದೆ.

ಇದರೊಂದಿಗೆ ಸ್ಪೀಡ್ ಅಲರ್ಟ್ ಸಿಸ್ಟಂ, ಹಿಲ್ ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ.ಈ ಮಾರುತಿ ಸೆಲೆರಿಯೊ ಕಾರು ಒಟ್ಟು ಏಳು ವೆರಿಯೆಂಟ್‌‌ಗಳೊಂದಿಗೆ ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

Maruti Suzuki Celerio

ಮಾರುತಿ ಸುಜುಕಿ ಸೆಲೆರಿಯೊ ಕಾರಿನಲ್ಲಿ ಆಕರ್ಷಕವಾದ ಗ್ರಿಲ್, ರಿಫ್ರೆಶ್‌ ಫ್ರಂಟ್ ಫಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರವಾದ ಹೆಡ್‌ಲ್ಯಾಂಪ್‌ಗಳು, ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದುವ ಸಿಗ್ನೇಚರ್ ಲೋಗೋ ಹೊಂದಿದೆ. ಈ ಸೆಲೆರಿಯೊ ಕಾರಿನ ಲೋ ಟ್ರಿಮ್‌ಗಳು ಸಾಧಾರಣ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದೆ.

ಟಾಪ್ ರೂಪಾಂತರಗಳು ಬ್ಲ್ಯಾಕ್ ಬಣ್ಣದ 15-ಇಂಚಿನ ಅಲಾಯ್ ವ್ಹೀಲ್ ಜೋಡಣೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಇಂಟಿರಿಯರ್ ಅನ್ನು ಹೊಂದಿದೆ. ಇಂಟಿರಿಯರ್ ನಲ್ಲಿ ಹೊಸ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಕಾಲ್ ಹಾಗೂ ಮ್ಯೂಸಿಕ್ ಅಸಿಸ್ಟ್‌ ಹೊಂದಿರುವ ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್, ಸಿಂಗಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸರ್ಕ್ಯುಲರ್ ಡಿಜಿಟಲ್ ಸ್ಕ್ರೀನ್ ಅನ್ನು ಒಳಗೊಂಡಿದೆ.

ಈ ಕಾರಿನ ಹೆಡ್‌ಲೈಟ್‌ ವಿನ್ಯಾಸವನ್ನು ಅಪ್ ಡೇಟ್ ಮಾಡಲಾಗಿದೆ. ಇದರ ಜೊತೆಗೆ ಈ ಕಾರು ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕ ಹೊಂದಿರುವ ಸ್ಮಾರ್ಟ್‌ಪ್ಲೇ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನಂತಹ ಹಲವಾರು ಹೊಸ ಹಾಗೂ ಅಪ್ ಡೇಟ್ ಮಾಡಲಾದ ಫೀಚರ್ ಗಳನ್ನು ಕೂಡ ಪಡೆದುಕೊಂಡಿದೆ. ಇದರ ಹೊರತಾಗಿ ಈ ಸೆಲೆರಿಯೊದಲ್ಲಿ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್ ಜೊತೆಗೆ ಪುಶ್ ಸ್ಟಾರ್ಟ್/ಸ್ಟಾಪ್ ಬಟನ್ ಫೀಚರ್ ಸಹ ನೀಡಿದೆ.

Article Published On: Sunday, March 17, 2024, 14:00 [IST]
English summary
Maruti suzuki celerio discounts in march 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+