ದಸರಾ, ದೀಪಾವಳಿಗೆ ದೊಡ್ಡ ಸಿಹಿಸುದ್ದಿ: ಈ ಜನಪ್ರಿಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
ದೇಶಾದ್ಯಂತ ಅತಿಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟಗೊಳಿಸುವ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಹೊರಹೊಮ್ಮಿದೆ. ಈ ನಡುವೆ ಮಾರುತಿ ಸುಜುಕಿ ಕಂಪನಿಯು ದಸರಾ ಹಬ್ಬಕ್ಕೆ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಿಸಿದೆ. ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಹೊಚ್ಚ ಹೊಸ ಕಾರು ಖರೀದಿಸಬೇಕು ಎಂದುಕೊಂಡಿರುವ ಗ್ರಾಹಕರಿಗೆ ದೊಡ್ಡ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಈ ಅಕ್ಟೋಬರ್‌ನಲ್ಲಿ ಮಾರುತಿ ಸುಜುಕಿ ನೆಕ್ಸಾ (Maruti Suzuki Nexa) ಡೀಲರ್‌ಶಿಪ್ ಮೂಲಕ ಮಾರಾಟ ಮಾಡಲಾಗುವ ಜನಪ್ರಿಯ ಇಗ್ನಿಸ್, ಬಲೆನೊ, ಫ್ರಾಂಕ್ಸ್, ಸಿಯಾಜ್, ಗ್ರ್ಯಾಂಡ್ ವಿಟಾರಾ, ಎಕ್ಸ್ಎಲ್6 ಜಿಮ್ನಿ ಹಾಗೂ ಇನ್ವಿಕ್ಟೋ ಕಾರುಗಳು ಭಾರಿ ರಿಯಾಯಿತಿ ಪ್ರಯೋಜನಗಳನ್ನು ಪಡೆದಿವೆ.
ಇದರಲ್ಲಿ ಮಾರುತಿ ಸುಜುಕಿ ಸಿಯಾಜ್ (Maruti Suzuki Ciaz) ಕಾರಿನ ಡಿಸ್ಕೌಂಟ್ ಬಗ್ಗೆ ಮಾಹಿತಿಯನ್ನು ನೋಡೋಣ. ಈ ಮಾರುತಿ ಸುಜುಕಿ ಸಿಯಾಜ್ ಜನಪ್ರಿಯ ಸೆಡಾನ್ ಆಗಿದೆ. ಈ ಕಾರಿನ ಎಲ್ಲ ರೂಪಾಂತರಗಳು ರೂ.46,000ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಹೊಸ ಸಿಯಾಜ್ ರೂ.9.40 ಲಕ್ಷದಿಂದ ರೂ.12.29 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ.

1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, 20.04 ರಿಂದ 20.65 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಸಿಯಾಜ್ ಸೆಡಾನ್ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, ಸೆಲೆಸ್ಟಿಯಲ್ ಬ್ಲೂ, ಡಿಗ್ನಿಟಿ ಬ್ರೌನ್, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಗ್ರ್ಯಾಂಡ್ಯೂರ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.
ಪ್ರವಾಸ ಅಥವಾ ದೂರದ ಊರುಗಳಿಗೆ ಹೋಗುವ ಸಂದರ್ಭದಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 510 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಒಳಗೊಂಡಿದೆ. ಈ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 105 ಪಿಎಸ್ ಪವರ್ ಮತ್ತು ಹಾಗೂ 138 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 4-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್‌ನ್ನು ಹೊಂದಿದೆ.

ಮೈಲೇಜ್ ವಿಚಾರವಾಗಿ ಹೇಳುವುದಾದರೆ, 20.04 ರಿಂದ 20.65 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಈ ಮಾರುತಿ ಸುಜುಕಿ ಸಿಯಾಜ್ ಸೆಡಾನ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ) ಅನ್ನು ಪಡೆದಿದೆ. ಈ ಮಾರುತಿ ಸುಜುಕಿ ಸಿಯಾಜ್ ಕಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಸ್ಕೋಡಾ ಸ್ಲಾವಿಯಾ ಹಾಗೂ ಪೋಕ್ಸ್‌ವ್ಯಾಗನ್ ವರ್ಟಸ್ ಕಾರುಗಳು ಪೈಪೋಟಿ ನೀಡುತ್ತದೆ. ಮಾರುತಿ ಸಿಯಾಜ್ ಹೆಚ್ಚು ಕ್ಲಾಸಿಕ್ ಲುಕ್ ಅನ್ನು ಹೊಂದಿರುವ ಕಾರ್ ಆಗಿದೆ.

ಬೆಂಗಳೂರಿನ ಡಿಸ್ಕೌಂಟ್ ಆಫರ್ ಬಗ್ಗೆ ಮಾತ್ರ ವಿವರಿಸಿದ್ದೇವೆ. ಈ ರಿಯಾಯಿತಿ ಪ್ರಯೋಜನಗಳು ಅಕ್ಟೋಬರ್ 31ರವರೆಗೆ ಮಾತ್ರ ಮಾನ್ಯವಾಗಿರಲಿವೆ. ರೂಪಾಂತರಗಳನ್ನು ಅವಲಂಭಿಸಿ ನಗರದಿಂದ ನಗರಕ್ಕೆ ಆಫರ್‌ಗಳು ಬೇರೆಯಾಗಿರಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಮಾರುತಿ ಸುಜುಕಿಯ ಶೋರೂಂಗೆ ಭೇಟಿ ನೀಡಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








