Maruti: ಹೊಸ ಮಾರುತಿ ಡಿಜೈರ್ ಸಿಎನ್‌ಜಿ: ಸನ್‌ರೂಫ್, 6 ಏರ್ ಬ್ಯಾಗ್, 33.73 ಕಿ.ಮೀ ಮೈಲೇಜ್!
ಮಾರುತಿ ಸುಜುಕಿ (Maruti Suzuki)ಯಿಂದ ಹೊಸ ಕಾರು ಬರುತ್ತಿದೆಯೆಂದರೆ ಗ್ರಾಹಕರಲ್ಲಿ ಏನೋ ಆನಂದ, ಸುರಕ್ಷತೆಯನ್ನು ಹೊರತುಪಡಿಸಿದರೆ ಮಾರುತಿ ಕಾರುಗಳು ಎಲ್ಲಾ ವಿಷಯಗಳಲ್ಲೂ ಬೆಸ್ಟ್ ಎಂದು ಹೇಳಬಹುದು. ಅಗ್ಗದ ಬೆಲೆಗೆ ಪ್ರೀಮಿಯಂ ಕಾರುಗಳನ್ನು ನೀಡುವ ಏಕೈಕ ಬ್ರಾಂಡ್ ಆಗಿಯು ಮಾರುತಿ ಜನಪ್ರಿಯತೆ ಪಡೆದಿದೆ. ಈ ಕಂಪನಿಯಿಂದ ಇತ್ತೀಚೆಗೆ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿರುವ ಮಾರುತಿ ಡೈಜೈರ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಸದ್ಯ ಕಂಪನಿ ಈ ಕಾರನ್ನು ಅನಾವರಣಗೊಳಿಸಿದ್ದು, ನವೆಂಬರ್ 11 ರಂದು ಬಿಡುಗಡೆ ಮಾಡಲಿದೆ. ಅದೇ ದಿನ ಡಿಜೈರ್ ಸಿಎನ್‌ಜಿ ಆಯ್ಕೆಯನ್ನು ಕೂಡ ಪರಿಚಯಿಸಲಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ತಲೆಮಾರಿನ ಮಾರುತಿ ಸುಜುಕಿ ಡಿಜೈರ್ ಅನ್ನು ಈ ವಾರದ ಆರಂಭದಲ್ಲಿ ಅನಾವರಣಗೊಳಿಸಲಾಯಿತು. ಮಾರುತಿ ತನ್ನ ಹೊಸ ಕಾರುಗಳ ಬಿಡುಗಡೆಯಲ್ಲಿ ಪ್ರಮುಖವಾಗಿ ಸಿಎನ್‌ಜಿಯನ್ನು ಕೂಡ ಪರಿಚಯಿಸುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿಯೇ ಡಿಜೈರ್ ಸಿಎನ್‌ಜಿ 11 ರಂದು ಎಂಟ್ರಿಕೊಡಲಿದ್ದು, ಈ ಕಾರಿಗೆ ಪೈಪೋಟಿ ನೀಡಲು ಈಗಾಗಲೇ ಮಾರುಕಟ್ಟೆಯಲ್ಲಿ ಟಾಟಾ ಟಿಗೋರ್ ಐಸಿಎನ್‌ಜಿ ಮತ್ತು ಹ್ಯುಂಡೈ ಔರಾ ಸಿಎನ್‌ಜಿ ಕಾರುಗಳು ಕಾದು ಕುಳಿತಿವೆ.

ನೇರವಾಗಿ ವಿಷಯಕ್ಕೆ ಬಂದರೆ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್ ನವೆಂಬರ್ 11 ರಂದು ಮಾರಾಟಕ್ಕೆ ಬರಲಿದೆ. ಬಿಡುಗಡೆಯ ಸಮಯದಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್ ಟ್ರೇನ್‌ಗಳೊಂದಿಗೆ ಸಿಗಲಿದೆ. ಡಿಜೈರ್ ಸಿಎನ್‌ಜಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68 ಬಿಹೆಚ್ ಪವರ್ ಮತ್ತು 101.8 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್ ನೊಂದಿಗೆ 5 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಿಗಲಿದೆ.
ಮಾರುತಿ ಸುಜುಕಿ ಪ್ರಕಾರ, ಹೊಸ ಡಿಜೈರ್ ಸಿಎನ್‌ಜಿ ಪ್ರತಿ ಕೆ.ಜಿಗೆ ಬರೋಬ್ಬರಿ 33.73 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ವರದಿಗಳು ಹೇಳುತ್ತಿವೆ. ಹೊಸ ಡಿಜೈರ್ ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಮತ್ತು ಝಡ್ಎಕ್ಸ್ಐ+ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಸಿಗಲಿದ್ದು, ಇದರಲ್ಲಿ ಸಿಎನ್‌ಜಿ ಆವೃತ್ತಿಯನ್ನು ಮಿಡ್-ಸ್ಪೆಕ್ ವಿಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಟ್ರಿಮ್‌ಗಳಲ್ಲಿ ಬರಲಿದೆ.

ವಿಶೇಷತೆಗಳು: ಸುರಕ್ಷತೆಗೆ ಸಂಬಂಧಿಸಿದಂತೆ ಹೊಸ ತಲೆಮಾರಿನ ಮಾರುತಿ ಡಿಜೈರ್ ಕಾರಿನಲ್ಲಿ ಆರು ಏರ್ ಬ್ಯಾಗ್‌ಗಳು, ಹಿಲ್-ಹೋಲ್ಡ್ ಅಸಿಸ್ಟ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಎರಡನ್ನೂ ಒಳಗೊಂಡಿದೆ.
ಹೊಸ ಮಾರುತಿ ಸುಜುಕಿ ಡಿಜೈರ್ ಎಲೆಕ್ಟ್ರಿಕ್ ಸನ್‌ರೂಫ್ ಮತ್ತು 360 ಡಿಗ್ರಿ ಪಾರ್ಕಿಂಗ್ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಸ್ವಯಂಚಾಲಿತ ಹೆಡ್ ಲ್ಯಾಂಪ್‌ಗಳು ಮತ್ತು ಹಿಂಭಾಗದ ಎಸಿ ವೆಂಟ್ ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಬುಕಿಂಗ್ ಪ್ರಾರಂಭ: ಹೊಸ ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ ಹೊರತುಪಡಿಸಿ ಪೆಟ್ರೋಲ್ ಆವೃತ್ತಿಯ ಬುಕಿಂಗ್ ನವೆಂಬರ್ 4 ರಿಂದ ಪ್ರಾರಂಭವಾಗಿದೆ. ಈ ಹೊಸ ಮಾರುತಿ ಸುಜುಕಿ ಡಿಜೈರ್ ಕಾರನ್ನು ಖರೀದಿಸಲು ಬಯಸುವ ಗ್ರಾಹಕರು ಕೇವಲ 11,000 ರೂ.ಗಳ ಟೋಕನ್ ಮೊತ್ತ ಪಾವತಿಸಿ ಡೀಲರ್ ಅಥವಾ ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿಕೊಳ್ಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications