33.73 Km ಮೈಲೇಜ್.. 6.79 ಲಕ್ಷ ಬೆಲೆ, 5-ಸ್ಟಾರ್ ಸೇಫ್ಟಿ.. ಈ ಜನಪ್ರಿಯ ಮಾರುತಿ ಕಾರಿನ 30 ಲಕ್ಷ ಮಾಡೆಲ್‌ಗಳು ತಯಾರಿಕೆ!

ಭಾರತದ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳ ತೀವ್ರ ಪೈಪೋಟಿಯಿಂದ ಸೆಡಾನ್ ವಿಭಾಗವು ನಷ್ಟದಲ್ಲಿದೆ. ಆದರೂ ಹೋಂಡಾ ಅಮೇಜ್, ಹ್ಯುಂಡೈ ಔರಾ, ಪೋಕ್ಸ್‌ವ್ಯಾಗನ್ ವರ್ಟಸ್ ಹಾಗೂ ಸ್ಕೋಡಾ ಸ್ಲಾವಿಯಾ ಜನಪ್ರಿಯ ಸೆಡಾನ್‌ಗಳಾಗಿ ಹೊರಹೊಮ್ಮಿವೆ. ಇವುಗಳ ಹೊರತಾಗಿ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಅತ್ಯಂತ ಪ್ರಖ್ಯಾತ & ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುವ ಸೆಡಾನ್ ಎಂದು ಹೆಸರುವಾಸಿಯಾಗಿದೆ. ಸದ್ಯ, ಈ ಕಾರಿನ ಉತ್ಪಾದನೆಯಲ್ಲಿ ಕಂಪನಿಯು ಹೊಸ ಇತಿಹಾಸ ಬರೆದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮಾರುತಿ ಸುಜುಕಿ, 16 ವರ್ಷ 11 ತಿಂಗಳಲ್ಲಿ ಈ ಜನಪ್ರಿಯ ಡಿಜೈರ್ ಸೆಡಾನ್‌ನ 30 ಲಕ್ಷ ಯುನಿಟ್‌ಗಳನ್ನು ತಯಾರಿಸಿದೆ. ಈ ಮೂಲಕ ನೂತನ ಮೈಲಿಗಲ್ಲೊಂದನ್ನು ಮುಟ್ಟಿದೆ. ಈ ಹಿಂದೆ, ಕಂಪನಿಯು 2015ರ ಏಪ್ರಿಲ್‌ವರೆಗೆ 10 ಲಕ್ಷ ಯುನಿಟ್ ಹಾಗೂ 2019ರ ಜೂನ್‌ವರೆಗೆ 20 ಲಕ್ಷ ಯುನಿಟ್‌ ಡಿಜೈರ್ ಸೆಡಾನ್‌ನ್ನು ಉತ್ಪಾದಿಸಿತ್ತು.

Maruti Suzuki Dzire Sedan Crosses 30 Lakh Production Milestone Check Details

ದೇಶೀಯ ಮಾರುಕಟ್ಟೆಯಲ್ಲಿ 2008ರಲ್ಲಿ ಮೊದಲ ತಲೆಮಾರಿನ ಮಾರುತಿ ಡಿಜೈರ್ ಕಾರನ್ನು ಬಿಡುಗಡೆಗೊಳಿಸಲಾಗಿತ್ತು. 2012ರಲ್ಲಿ ಎರಡನೇ ತಲೆಮಾರು ಹಾಗೂ 2017ರಲ್ಲಿ ಮೂರನೇ ತಲೆಮಾರಿನ ಡಿಜೈರ್‌ನ್ನು ಪರಿಚಯಿಸಲಾಗಿತ್ತು. ಇತ್ತೀಚೆಗೆ ನವೆಂಬರ್‌ 11ರಂದು 4ನೇ ತಲೆಮಾರಿನ ನೂತನ 5-ಸ್ಟಾರ್ ಸೇಫ್ಟಿ ರೇಟಿಂಗ್ ಡಿಜೈರ್ ಸೆಡಾನ್‌ನ್ನು ಮಾರಾಟಕ್ಕೆ ತರಲಾಗಿದೆ.

2008ರ ಅಕ್ಟೋಬರ್ ತಿಂಗಳಿನಿಂದಲೇ ಮಾರುತಿ ಸುಜುಕಿ ಡಿಜೈರ್ ಸೆಡಾನ್‌ನ್ನು ರಫ್ತು ಮಾಡಲು ಆರಂಭಿಸಲಾಗಿತ್ತು. ಬರೋಬ್ಬರಿ 2.6 ಲಕ್ಷ ಯುನಿಟ್‌ಗಳನ್ನು 48 ದೇಶಗಳಿಗೆ ಯಶಸ್ವಿಯಾಗಿ ರವಾನಿಸಲಾಗಿದೆ. ಪ್ರಮುಖವಾಗಿ ಲ್ಯಾಟಿನ್ - ಮಧ್ಯ ಅಮೆರಿಕ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾ ದೇಶಗಳಿಗೆ ರಫ್ತು ಮಾಡಲಾಗಿದೆ.

Maruti Suzuki Dzire Sedan Crosses 30 Lakh Production Milestone Check Details

ಭಾರತದ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಎಲ್ಲ ಕಂಪನಿಗಳ ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕಿ, ಡಿಜೈರ್ ಶೇಕಡ 61% ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ವರ್ಷ ಕೂಡ ಡಿಜೈರ್ ಕಾರು ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಕಂಪನಿಯು ಜನವರಿಯಿಂದ ನವೆಂಬರ್‌ವರೆಗೆ ಸರಿ ಸುಮಾರು 1,51,415 ಯುನಿಟ್ ಡಿಜೈರ್ ಸೆಡಾನ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಿದೆ.

ಪ್ರಸ್ತುತ ದೇಶೀಯ ಗ್ರಾಹಕರ ಖರೀದಿಗೆ ದೊರೆಯುವ ಹೊಚ್ಚ ಹೊಸ ಮಾರುತಿ ಸುಜುಕಿ ಡಿಜೈರ್, ರೂ.6.79 ಲಕ್ಷ ಹಾಗೂ ರೂ.10.14 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 1.2-ಲೀಟರ್ ಝಡ್ ಸೀರೀಸ್ ಪೆಟ್ರೋಲ್/ ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 24.79 ರಿಂದ 25.71 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು.

Maruti Suzuki Dzire Sedan Crosses 30 Lakh Production Milestone Check Details

ಈ ಕಾರು 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಸನ್‌ರೂಫ್ ಮತ್ತು ಆಟೋ ಎಸಿ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, December 30, 2024, 17:29 [IST]
English summary
Maruti suzuki dzire sedan crosses 30 lakh production milestone check details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+