ನವೆಂಬರ್‌ನಲ್ಲಿ ಕುಸಿದ ಮಾರಾಟ.. ಈ ತಿಂಗಳು ಮಾರುತಿಗೆ ಅದೃಷ್ಟ ತರಲಿದೆಯೇ 5-ಸ್ಟಾರ್ ಸೇಫ್ಟಿಯ ಹೊಸ ಡಿಜೈರ್?
ಮಾರುತಿ ಸುಜುಕಿ ಇಂಡಿಯಾ (Maruti Suzuki India), ನಂಬರ್ 1 ಕಾರು ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಹಲವು ಹ್ಯಾಚ್‌ಬ್ಯಾಕ್, ಸೆಡಾನ್, ಎಸ್‌ಯುವಿ ಹಾಗೂ ಎಂಪಿವಿಗಳನ್ನು ಮಾರಾಟ ಮಾಡುತ್ತಿದೆ. ಈ ನವೆಂಬರ್‌ನಲ್ಲಿ ಸರಿ ಸುಮಾರು 1,81,531 ಯುನಿಟ್ ಕಾರುಗಳನ್ನು ಮಾರಾಟ ಮಾಡಿದೆ. 2023ರ ಇದೇ ತಿಂಗಳಲ್ಲಿ ಮಾರಲ್ಪಟ್ಟ 1,64,439 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಶೇ.10.39% ಬೆಳವಣಿಗೆ ಸಾಧಿಸಿದೆ. ಆದರೆ, ಡಿಜೈರ್ ಸೆಡಾನ್ ಮಾತ್ರ ಕುಸಿತವಾಗಿದೆ.
ಕಳೆದ ತಿಂಗಳು (ನವೆಂಬರ್-2024) ಮಾರುತಿ ಸುಜುಕಿ 11,779 ಡಿಜೈರ್ ಕಾರುಗಳನ್ನು ಮಾರಾಟ ಮಾಡಿದೆ. 2023ರ ನವೆಂಬರ್‌ನಲ್ಲಿ ಮಾರಾಟಗೊಳಿಸಲಾದ 15,965 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ -26% ಇಳಿಕೆಯಾಗಿದೆ. ಆದರೆ, ಮಾರಾಟ ಪ್ರಮಾಣ ಇಳಿಕೆಯಾಗಿರುವ ಬಗ್ಗೆ ಕಂಪನಿಯು ಯಾವುದೇ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಿಲ್ಲ.

ಮುಂಬರುವ ದಿನಗಳಲ್ಲಿ 4ನೇ ತಲೆಮಾರಿನ ಹೊಸ ಡಿಜೈರ್ (4th Generation Dzire) ಸೆಡಾನ್ ನೆರವಿನಿಂದ ಮಾರಾಟ ಪ್ರಮಾಣ ಹೆಚ್ಚಾಗುವ ನೀರಿಕ್ಷೆಯಿದೆ. ನವೆಂಬರ್ 11 ರಂದು ನೂತನ ಡಿಜೈರ್ ಬಿಡುಗಡೆಗೊಳಿಸಲಾಗಿತ್ತು. ಆದರೆ, ಬಹುತೇಕ ಗ್ರಾಹಕರು ಈ ಕಾರಿನ 2025ರ ಮಾಡೆಲ್‌ನ್ನು ವಿತರಣೆ ಪಡೆಯಲು ನಿರ್ಧರಿಸಿರುವುದರಿಂದಲೂ ಮಾರಾಟದ ಅಂಕಿಸಂಖ್ಯೆ ಇಳಿಕೆಯಾಗಿದೆ ಎನ್ನಲಾಗಿದೆ.
ಈಗಾಗಲೇ, ಹೊಸ ಮಾರುತಿ ಸುಜುಕಿ ಡಿಜೈರ್ ಬುಕ್ಕಿಂಗ್‌ನಲ್ಲಿ ಅಬ್ಬರಿಸುತ್ತಿದ್ದು, 30,000ಕ್ಕೂ ಹೆಚ್ಚಿನ ಗ್ರಾಹಕರು ಆರ್ಡರ್ ಮಾಡಿದ್ದಾರೆ. ಅದರಲ್ಲೂ ದಿನವೊಂದಕ್ಕೆ 1,000 ಡಿಜೈರ್ ಸೆಡಾನ್‌ಗಳ ಬುಕ್ಕಿಂಗ್ ಆಗುತ್ತಿದೆ. ಬರೋಬ್ಬರಿ 5,000 ಕಾರುಗಳನ್ನು ವಿತರಣೆ ಮಾಡಲಾಗಿದೆ. ಪ್ರಸ್ತುತ ಕೂಡ ಉತ್ತಮ ಸಂಖ್ಯೆಯಲ್ಲಿ ಆರ್ಡರ್‌ನ್ನು ಗಳಿಸುತ್ತಿದೆ ಎಂದು ವರದಿಯಾಗಿದೆ.

ದೇಶೀಯ ಗ್ರಾಹಕರ ಖರೀದಿಗೆ ದೊರೆಯುವ ಹೊಸ ಮಾರುತಿ ಸುಜುಕಿ ಡಿಜೈರ್ ರೂ.6.79 ರಿಂದ ರೂ.10.14 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಎಲ್ಎಕ್ಸ್ಐ & ವಿಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಪರ್ಲ್ ಆರ್ಕ್ಟಿಕ್ ವೈಟ್ & ಮ್ಯಾಗ್ಮಾ ಗ್ರೇ ಒಳಗೊಂಡಂತೆ ಹಲವು ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.
ಈ ಕಾರು ಶಕ್ತಿಯುತವಾದ 1.2-ಲೀಟರ್ 3-ಸಿಲಿಂಡರ್ ಝಡ್ - ಸೀರೀಸ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟೆಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಬರೋಬ್ಬರಿ 24.79 ರಿಂದ 33.73 ಕೆಎಂಪಿಎಲ್‌ವರೆಗೆ ಮೈಲೇಜ್ ಅನ್ನು ನೀಡುತ್ತದೆ.

ನೂತನ ಮಾರುತಿ ಸುಜುಕಿ ಡಿಜೈರ್ ಸೆಡಾನ್‌ನಲ್ಲಿ 5 ಜನರು ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು 382 ಲೀಟರ್‌ನ ಬೂಟ್ ಸ್ಪೇನ್‌ನ್ನು ಪಡೆದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (9-ಇಂಚು), ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಸನ್‌ರೂಫ್ ಮತ್ತು ಆಟೋ ಎಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಡಿಜೈರ್ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿಯಿಂದ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ಪಡೆದಿದೆ. 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ನಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications