31 ಕಿ.ಮೀ ಮೈಲೇಜ್... ಇಷ್ಟು ಕಡಿಮೆ ಬೆಲೆಯೇ? ಬೈಕ್ ಬದಲು ಈ ಕಾರು ಖರೀದಿಸಬಹುದು!
ಭಾರತದಲ್ಲಿ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಬೆಲೆಗೆ ಕಾರುಗಳನ್ನು ನೀಡುತ್ತಿರುವ ಬ್ರಾಂಡ್ ಆಗಿ ಮಾರುತಿ ಸುಜುಕಿ ಗುರ್ತಿಸಿಕೊಂಡಿದೆ. ಇತರ ಬ್ರಾಂಡ್‌ಗಳಿಗೆ ಹೋಲಿಸಿಕೊಂಡರೆ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಕಾರುಗಳನ್ನು ನೀಡುತ್ತಿರುವ ಕಾರಣ ಪ್ರತಿ ತಿಂಗಳು ಮಾರಾಟದಲ್ಲಿ ಮಾರುತಿ ಕಾರುಗಳದ್ದೇ ಅಬ್ಬರವಿರುತ್ತದೆ. ಪ್ರಸ್ತುತ ವಾಣಿಜ್ಯ ವಿಭಾಗದಲ್ಲಿ ಫ್ಲೀಟ್ ಹಾಗೂ ಸ್ವಂತ ಬಳಕೆಯಲ್ಲಿ ಕುಟುಂಬ ಪ್ರಯಾಣಕ್ಕೆ ಮಾರುತಿ ಸುಜುಕಿ ಡಿಜೈರ್ ಕಾರನ್ನು ಹೆಚ್ಚಾಗಿ ಖರೀದಿಸಲಾಗುತ್ತಿದೆ. ಕಳೆದ ಜುಲೈ ತಿಂಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರುತಿ ಸುಜುಕಿ ಡಿಜೈರ್ ಮಾರಾಟವಾಗಿದೆ. ಈ ಕಾರಿನ ಮಾರಾಟ ಅಂಕಿ ಅಂಶಗಳು ಹಾಗೂ ವಿಶೇಷತೆಗಳನ್ನು ಇಲ್ಲಿ ನೋಡೋಣ.
ದೇಶದಲ್ಲಿ ಸದ್ಯ ಎಸ್‌ಯುವಿಗಳಿಗೆ ಭಾರೀ ಬೇಡಿಕೆ ಇದೆಯಾದ್ರೂ ಡಿಜೈರ್ ವಿಷಯದಲ್ಲಿ ಮಾತ್ರ ಇದು ವರ್ತಿಸುವುದಿಲ್ಲ. ಪ್ರತಿ ತಿಂಗಳು ಭಾರೀ ಪ್ರಮಾಣದಲ್ಲಿ ಈ ಕಾರು ಮಾರಾಟ ಕಾಣುತ್ತದೆ. ಮಾರುತಿ ಸುಜುಕಿ ಡಿಜೈರ್ 2024ರ ಮೊದಲಾರ್ಧದ (ಜನವರಿ-ಜೂನ್) ಮಾರಾಟದ ವರದಿಯನ್ನು ಬಿಡುಗಡೆ ಮಾಡಿದೆ. 2024 ರ ಮೊದಲ ಆರು ತಿಂಗಳಲ್ಲಿ ಮಾರುತಿ ಸುಜುಕಿ ಡಿಜೈರ್‌ನ 93,811 ಯುನಿಟ್ ಕಾರುಗಳು ಮಾರಾಟವಾಗಿವೆ.

ಪ್ರಸ್ತುತದ ಸನ್ನಿವೇಸದಲ್ಲಿ ಎಸ್‌ಯುವಿಗಳ ತೀವ್ರ ಬೇಡಿಕೆಯ ನಡುವೆಯೂ ಸೆಡಾನ್ ವಿಭಾಗದಲ್ಲಿರುವ ಡಿಜೈರ್ ಮಟ್ಟದಲ್ಲಿ ಮಾರಾಟವಾಗುತ್ತಿರುವುದು ಅಚ್ಚರಿಯ ಸಂಗತಿ. ಇನ್ನು ಡಿಜೈರ್ ಕಳೆದ ಇದೇ ಅವಧಿಯಲ್ಲಿ (2023 ರ ಮೊದಲ ಆರು ತಿಂಗಳಲ್ಲಿ) ಮಾರಾಟವಾಗಿದ್ದು 72,278 ಕಾರುಗಳು. ಈ ಮೂಲಕ ಮಾರುತಿ ಡಿಜೈರ್ ಶೇಕಡಾ 30 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಮಾರುತಿ ಸುಜುಕಿ ಡಿಜೈರ್ ವಿಶೇಷತೆಗಳು: ಮಾರುತಿ ಸುಜುಕಿ ಡಿಜೈರ್‌ನ ಈ ಮಟ್ಟದ ಮಾರಾಟಕ್ಕೆ ಮುಖ್ಯ ಕಾರಣ ಕಡಿಮೆ ಬೆಲೆ, ಅತ್ಯುತ್ತಮ ಮೈಲೇಜ್ ಮತ್ತು ಅನುಕೂಲತೆಯಿಂದಾಗಿ ಮಾರಾಟದಲ್ಲಿ ಅಸಾಧಾರಣ ಬೆಳವಣಿಗೆಯನ್ನು ಕಂಡಿದೆ. ಮಾರುತಿ ಸುಜುಕಿ ಡಿಜೈರ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.6.57 ಲಕ್ಷಗಳಾಗಿದೆ. ಟಾಪ್ ಸ್ಪೆಕ್ ಮಾದರಿಯ ಬೆಲೆಯು ರೂ.9.34 ಲಕ್ಷಗಳಾಗಿದೆ. ಇವು ಎಕ್ಸ್ ಶೋರೂಂ ಬೆಲೆಗಳು.

ವೈಶಿಷ್ಟ್ಯಗಳು: ಪ್ರಮುಖ ವೈಶಿಷ್ಟ್ಯಗಳಲ್ಲಿ 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಹಿಂಭಾಗದ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಎಸಿ ಮತ್ತು ಎತ್ತರ-ಸರಿಹೊಂದಿಸಬಹುದಾದ ಡ್ರೈವರ್ ಸೀಟ್ ಅನ್ನು ಹೊಂದಿದೆ. ಈ ಫೀಚರ್‌ಗಳು ವೇರಿಯೆಂಟ್ ಆಧರಿಸಿ ಬದಲಾಗುತ್ತವೆ ಎಂಬುದನ್ನು ಮರೆಯಬೇಡಿ.
ಎಂಜಿನ್: ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 ಪಿಎಸ್ ಪವರ್ ಹಾಗೂ 113 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ಇನ್ನು ಸಿಎನ್‌ಜಿ ಆಯ್ಕೆಯಲ್ಲಿ ಸಿಗುವ ಎಂಜಿನ್ 77 ಬಿಹೆಚ್‌ಪಿ ಪವರ್ ಮತ್ತು 98.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮೈಲೇಜ್: ಹೊಸ ಮಾರುತಿ ಸುಜುಕಿ ಡಿಜೈರ್ 1.2-ಲೀಟರ್ MT ನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 22.41 ಕಿ.ಮೀ. ಮೈಲೇಜ್ ನೀಡಿದ್ರೆ, 1.2-ಲೀಟರ್ AMT ನಲ್ಲಿ 22.61 ಕಿ.ಮೀ. ಮೈಲೇಜ್ ನೀಡುತ್ತದೆ. ಇನ್ನು ಮುಖ್ಯವಾಗಿ ಸಿಎನ್‌ಜಿ MT ನಲ್ಲಿ ಬರೋಬ್ಬರಿ 31.12 ಕಿ.ಮೀ/ಕೆಜಿ ಮೈಲೇಜ್ ನಿಡುತ್ತದೆ ಎಂದು ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications