ಕೇವಲ 6 ಲಕ್ಷಕ್ಕೆ 27 ಕಿಮೀ ಮೈಲೇಜ್‌: ಎರ್ಟಿಗಾಗಿಂತಲೂ ಕಡಿಮೆ ಬೆಲೆ ಈ 7 ಸೀಟರ್‌ ಕಾರಿಗೆ

ಒಂದು ಕುಟುಂಬಕ್ಕೆ ಒಟ್ಟಾಗಿ ಪ್ರಯಾಣಿಸಲು ಬಜೆಟ್ ಸೆಗ್ಮೆಂಟ್‌ನಲ್ಲಿ ಕೆಲವೇ ಕೆಲವು ಕಾರುಗಳ ಆಯ್ಕೆ ಲಭ್ಯವಿದೆ. ನಿಮ್ಮ ಬಜೆಟ್‌ ಅನ್ನು ಹೆಚ್ಚು ಮಾಡುತ್ತಾ ಹೋದಂತೆ, ನಿಮಗೆ ಸೆವೆನ್‌ ಸೀಟರ್ ಕಾರುಗಳು ದೊರಕುತ್ತಾ ಹೋಗುತ್ತದೆ. ಆದರೆ ಇಂದು ನಾವು ಕಡಿಮೆ ಬೆಲೆಯ ಸೆವೆನ್‌ ಸೀಟರ್‌ ಕಾರಿನ ಕುರಿತಾಗಿ ನೋಡಲಿದ್ದೇವೆ.

ಮಾರುತಿ ಸುಜುಕಿ ಕಂಪನಿ ಬಜೆಟ್‌ ಫ್ರೆಂಡ್ಲೀ ಕಾರುಗಳಿಗೆ ಹೆಸರುವಾಸಿ. ಸೆಲೆರಿಯೋ ಇಂದ ಹಿಡಿದು ದುಬಾರಿ ಗ್ರಾಂಡ್‌ ವಿಟಾರಾ ವರೆಗೆ ಕಾರು ಮಾದರಿಗಳಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳದೆ, ಅವರಿಗೆ ಬೇಕಾದ ಬಜೆಟ್‌ನಲ್ಲಿ ಕಾರುಗಳನ್ನು ಮಾರುತಿ ಸುಜುಕಿಯು ಒದಗಿಸುತ್ತದೆ. ಆ ಸಾಲಿಗೆ ಸೇರಿದ ಕಾರುಗಳಲ್ಲಿ ಮಾರುತಿ ಸುಜುಕಿ ಇಕೋ ಸಹ ಒಂದು.

Maruti Suzuki Eeco Much Cheaper option For A Seven Seater Car Than Ertiga

ಈ ಕಾರು ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿ ಮಾಡಿಸಿದ ಕಾರು ಎಂದರೆ ತಪ್ಪಾಗಲಾರದು. ಇದಕ್ಕೆ ಮೊದಲ ಕಾರಣ ಈ ಕಾರಿನಲ್ಲಿ ಸುಮಾರು ಐದರಿಂದ ಏಳು ಮಂದಿ ಆರಾಮವಾಗಿ ಕುಳಿತುಕೊಂಡು ಹೋಗಬಹುದು. ಇನ್ನೊಂದು ಕಾರಣ ಇದರ ಬೆಲೆ. ಈ ಕಾರು ನಿಮಗೆ ಸುಮಾರು 5.72 ಲಕ್ಷದಿಂದ 6.53 ಲಕ್ಷ ರೂ ಎಕ್ಸ್‌ ಶೋರೂಮ್‌ ಬೆಲೆಯಲ್ಲಿ ಲಭ್ಯವಿದೆ. ಹಾಗಾಗಿ ಎರ್ಟಿಗಾ ತೆಗೆದುಕೊಳ್ಳಲು ಬಜೆಟ್‌ ಇಲ್ಲದೇ ಇರುವವರು ಮಾರುತಿ ಇಕೋ ಕಾರನ್ನು ಪರಿಗಣಿಸಬಹುದಾಗಿದೆ.

ಮಾರುತಿ ಸುಜುಕಿ ಇಕೋ ವ್ಯಾನ್ (Maruti Suzuki Eeco), 5-ಸೀಟರ್ ಸ್ಟ್ಯಾಂಡರ್ಡ್ (ಒ), 5-ಸೀಟರ್ ಎಸಿ (ಒ), 5-ಸೀಟರ್ ಎಸಿ ಸಿಎನ್‌ಜಿ (ಒ) ಹಾಗೂ 7-ಸೀಟರ್ ಸ್ಟ್ಯಾಂಡರ್ಡ್ (ಒ) ರೂಪಾಂತರ (Variants) ಆಯ್ಕೆಯಲ್ಲಿ ದೊರೆಯುತ್ತದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಸೇರಿದಂತೆ 5 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

Maruti Suzuki Eeco Much Cheaper option For A Seven Seater Car Than Ertiga

ಈ ಮಾರುತಿ ಸುಜುಕಿ ಇಕೋ ವ್ಯಾನ್ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ನೊಂದಿಗೆ ಸಿಗುತ್ತದೆ. 1.2 - ಲೀಟರ್ ಪೆಟ್ರೋಲ್ ಎಂಜಿನ್ 81 PS ಗರಿಷ್ಠ ಪವರ್, 104.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5 - ಸ್ವೀಡ್ ಮ್ಯೂನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ.

ಮಧ್ಯಮ ವರ್ಗದ ನೆಚ್ಚಿನ ಕಾರೆಂದು ಕರೆಯಲು ಇನ್ನೊಂದು ಪ್ರಮುಖ ಕಾರಣ ಎಂದರೆ ಇದರ ಮೈಲೇಜ್‌. ಮೈಲೇಜ್‌ ಬಗ್ಗೆ ಹೇಳುವುದಾರೆ ಮಾರುತಿ ಸುಜುಕಿ ಈಕೊ ಪೆಟ್ರೋಲ್‌ ರೂಪಾಂತರ ಸುಮಾರು 19.71 kmpl ಮತ್ತು ಸಿಎನ್‌ಜಿ ರೂಪಾಂತರದಲ್ಲಿ 26.78 km/kg ಮೈಲೇಜ್‌ ನೀಡುತ್ತದೆ. ಇದೂ ಸಹ ಭಾರತದಲ್ಲಿ ಮಾರುತಿ ಸುಜುಕಿ ಈಕೊ ವಾಹನವನ್ನು ಜನಪ್ರಿಯ ಮಟ್ಟಕ್ಕೆ ಏರಿಸಲು ಸಹಾಯಕವಾಗಿರುವುದು.

Maruti Suzuki Eeco Much Cheaper option For A Seven Seater Car Than Ertiga

ಸುರಕ್ಷತೆಯ ದೃಷ್ಟಿಯಿಂದ ಸಹ ಮಾರುತಿ ಸುಜುಕಿ ಇಕೋ ವ್ಯಾನ್ ಅತ್ಯುತ್ತಮವಾಗಿದ್ದು, ಡುಯಲ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಫ್ರಂಟ್ ಸೀಟ್‌ಬೆಲ್ಟ್ ರಿಮೆಂಡರ್, ಸ್ವೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೇನ್ಸಾರ್ಸ್ ಅನ್ನು ಹೊಂದಿದೆ. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಈ ಕಾರಿಗೆ ಯಾವುದೇ ನೇರ ಪ್ರತಿಸ್ಪರ್ಧಿ ಇಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 6, 2024, 17:56 [IST]
English summary
Maruti suzuki eeco much cheaper option for a seven seater car than ertiga
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+