ದುಡ್ಡು ಕೊಡುತ್ತೇವೆ ಅಂದ್ರು ಈ ಕಾರು ಸಿಗುತ್ತಿಲ್ಲ.. 60,000 ಆರ್ಡರ್ ಬಾಕಿ: ಶೋರೂಂ ಮುಂದೆ ಜನರ ಕ್ಯೂ!

ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿಗಳಿಸಿದೆ. ಮೇ ತಿಂಗಳು ಆರಂಭವಾಗಿ ಕೆಲವೇ ದಿನಗಳಾಗಿದ್ದು, ಕಂಪನಿಯು ಪೂರೈಸಬೇಕಾದ ಬಾಕಿ ಆರ್ಡರ್ ಕುರಿತ ವಿವರಗಳು ಲಭ್ಯವಾಗಿದ್ದು, ಸರಿ ಸುಮಾರು 1.75 ಲಕ್ಷ ಯುನಿಟ್ ಕಾರುಗಳನ್ನು ಖರೀದಿದಾರರಿಗೆ ವಿತರಿಸಬೇಕಾಗಿದೆ.

ಮಾರುತಿ ಸುಜುಕಿ ಬಾಕಿ ಉಳಿಸಿಕೊಂಡಿರುವ ಒಟ್ಟಾರೆ ಆರ್ಡರ್‌ಗಳಲ್ಲಿ 7 ಆಸನದೊಂದಿಗೆ ದೊರೆಯುವ ಎರ್ಟಿಗಾ ಎಂಪಿವಿಯ ಪಾಲು ದೊಡ್ಡ ಮಟ್ಟದಲ್ಲಿದೆ. ಕಂಪನಿಯು ಬರೋಬ್ಬರಿ 60,000 ಎರ್ಟಿಗಾ ಕಾರುಗಳನ್ನು ಖರೀದಿದಾರರಿಗೆ ಹಸ್ತಾಂತರಿಸಬೇಕಾಗಿದೆ. 16, ಏಪ್ರಿಲ್ 2012ರಲ್ಲಿ ಈ ಕಾರನ್ನು ಪರಿಚಯಿಸಲಾಗಿತ್ತು. 2019ರವರೆಗೆ ಈ ಎಂಪಿವಿಯ 5 ಲಕ್ಷ ಯುನಿಟ್‌ಗಳನ್ನು ಮಾತ್ರ ಮಾರಲಾಗಿತ್ತು.

Maruti Suzuki Ertiga 60 000 Pending Order Rs 8 Lakh Price 26 Km Mileage

2020ರಲ್ಲಿ ಸಿಎನ್‌ಜಿ ಚಾಲಿತ ಎರ್ಟಿಗಾ ಮಾದರಿಯು ಬಿಡುಗಡೆಗೊಂಡಿತ್ತು. ಆ ಬಳಿಕ, ಮಾರಾಟ ಪ್ರಮಾಣವು ಮತ್ತಷ್ಟು ವೇಗವನ್ನು ಪಡೆಯಿತು. ಅದೇ ವರ್ಷ ಎರ್ಟಿಗಾ ಎಂಪಿವಿ ಕೊಂಡುಕೊಂಡ ಒಟ್ಟು ಗ್ರಾಹಕರ ಸಂಖ್ಯೆ 6 ಲಕ್ಷಕ್ಕೆ ತಲುಪಿತ್ತು. ನಂತರ, ಫೆಬ್ರವರಿ 2024ರಲ್ಲಿ 10 ಲಕ್ಷ ಯುನಿಟ್‌ ಮಾರಾಟ ಮೈಲಿಗಲ್ಲನ್ನು ಮುಟ್ಟಲಾಯಿತು.

ಗ್ರಾಹಕರಿಗೆ ಆದಷ್ಟು ಬೇಗನೆ ಕಾರುಗಳನ್ನು ವಿತರಿಸಲು ಮಾರುತಿ ಸುಜುಕಿ, ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಅದಕ್ಕಾಗಿ ಹರಿಯಾಣದ ಮಾನೇಸರ್‌ನಲ್ಲಿರುವ ತಯಾರಕ ಘಟಕದಿಂದ ವಾರ್ಷಿಕ 1 ಲಕ್ಷ ಯುನಿಟ್‌ ಹೆಚ್ಚುವರಿ ಕಾರುಗಳನ್ನು ಹೊರತರಲು ತೀರ್ಮಾನ ಮಾಡಿದೆ. ಇದು ಕಂಪನಿಯ ವಾಹನಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ನೆಮ್ಮದಿ ತರಿಸಿದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿ ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ವಿನ್ಯಾಸದ ದೃಷ್ಟಿಯೊಂದಲೂ ಅತ್ಯುತ್ತಮವಾಗಿದೆ. ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ ಒಳಗೊಂಡಂತೆ ಹಲವು ರೂಪಾಂತರ (ವೇರಿಯೆಂಟ್) ಮತ್ತು ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲಾಕ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ 7-ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಕೂಡ ಸಿಗುತ್ತದೆ.

ಈ ಕಾರು ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಹೊಂದಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್ ಅನ್ನು ಪಡೆದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ ಬಾಕ್ಸ್‌ನ್ನು ಒಳಗೊಂಡಿದೆ. ಪೆಟ್ರೋಲ್ ಮಾದರಿಗಳು 20.3 - 20.51 ಕೆಎಂಪಿಎಲ್ ಮತ್ತು ಸಿಎನ್‌ಜಿ ರೂಪಾಂತರಗಳು 26.11 ಕೆಎಂ/ಕೆಜಿ ಮೈಲೇಜ್ ನೀಡುತ್ತವೆ.

ಮಾರುತಿ ಸುಜುಕಿ ಎರ್ಟಿಗಾ, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಪಡೆದಿದೆ. ಈ ಕಾರಿಗೆ ಕಿಯಾ ಕ್ಯಾರೆನ್ಸ್, ಮತ್ತು ಮಹೀಂದ್ರಾ ಮರಾಜೊ ಪ್ರಬಲ ಎದುರಾಳಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, May 6, 2024, 16:04 [IST]
English summary
Maruti suzuki ertiga car 60000 pending order rs 8 lakh price 26 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+