ಫ್ಯಾಮಿಲಿ ಕಾರ್‌ Maruti Suzuki Ertiga ಖರೀದಿಸಲು ಡೌನ್‌ಪೇಮೆಂಟ್‌ ಎಷ್ಟು?: EMI, ಲೋನ್ ಸಂಪೂರ್ಣ ಮಾಹಿತಿ!

ಭಾರತೀಯರಿಗೆ ಕಡಿಮೆ ಬೆಲೆಗೆ ಹೆಚ್ಚು ಫೀಚರ್‌ಗಳು ಮತ್ತು ದೊಡ್ಡದಾಗಿ ಕಾಣುವ, ಒಂದು ಕುಟುಂಬ ಒಟ್ಟಾಗಿ ಪ್ರಯಾಣ ಮಾಡುವಂತಹ ಕಾರುಗಳನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ನಮ್ಮ ಜನ ಅತೀ ಹೆಚ್ಚು ಇಷ್ಟ ಪಡುವ ಕಾರುಗಳಲ್ಲಿ ನೆಚ್ಚಿನ ಮಾರುತಿ ಸುಜುಕಿ ಎರ್ಟಿಗಾ ಸಹ ಒಂದು.

ಈ ಸೆವೆನ್‌ ಸೀಟರ್‌ ಕಾರಿಗೆ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಇಂದಿನ ಈ ಲೇಖನದಲ್ಲಿ ಈ ಕಾರಿನ ಆನ್‌ರೋಡ್‌ ಬೆಲೆ, ಡೌನ್‌ಪೇಮೆಂಟ್, ಇಎಂಐಗಳ ಕುರಿತಾಗಿ ನೋಡಲಿದ್ದು ಲೇಖನವನ್ನು ಕೊನೆಯವರೆಗೆ ಓದಿ. ಮೊದಲಿಗೆ ಬೆಂಗಳೂರಿನಲ್ಲಿ ಈ ಕಾರಿನ ಬೇಸ್‌ ವೇರಿಯಂಟ್‌ Lxi (O)(Petrol) ಆನ್‌ರೋಡ್‌ ಬೆಲೆ ಎಂಬುದು ಸುಮಾರು 10,38,500 ರೂಗಳು ಬರುತ್ತದೆ.

Maruti suzuki

ಈ ಕಾರಿನ ಎಕ್ಸ್‌ ಶೋ ರೂಮ್‌ ಬೆಲೆ ಸುಮಾರು 8,69,000 ರೂಗಳು. ಆರ್‌ಟಿಒ ಟ್ಯಾಕ್ಸ್‌ ಮತ್ತು ಇನ್ಸುರೆನ್ಸ್‌ ಬೆಲೆಗಳನ್ನು ಸೇರಿಸಿ ಆನ್‌ ರೋಡ್‌ 10,38,500 ರೂಗಳು ಆಗುತ್ತವೆ ಎಂಬುದನ್ನು ಗಮನಿಸಬೇಕು. ಈ ಕಾರಿನಲ್ಲಿ ಹಲವಾರು ವೇರಿಯಂಟ್‌ಗಳಿದ್ದು ನಾವಿಲ್ಲಿ ಬೇಸ್‌ ವೇರಿಯಂಟ್‌ ಕುರಿತಾಗಿ ಮಾತ್ರ ನೊಡುತ್ತಿದ್ದೇವೆ.

ಇನ್ನು ಈ ಕಾರಿನ (Maruti Suzuki Ertiga) ಡೌನ್‌ ಪೇಮೆಂಟ್‌ ನೋಡುವುದಾದರೆ, ಕನಿಷ್ಟವೆಂದರೂ ನೀವು 1,04,000 ರೂಗಳನ್ನು ಬ್ಯಾಂಕಿಗೆ ಕಟ್ಟಬೇಕಾಗುತ್ತದೆ. ಸುಮಾರು 9.8 % ಬಡ್ಡಿದರದಲ್ಲಿ ನೀವು ಈ ಲೋನ್‌ ಮಾಡಿದರೆ ಸುಮಾರು 7 ವರ್ಷಗಳಿಗೆ ಮಾಡಿದರೂ ಪ್ರತಿ ತಿಂಗಳು ನೀವು ಸುಮಾರು 15,418 ರೂಗಳನ್ನು ಇಎಂಐ ರೂಪದಲ್ಲಿ ಕಟ್ಟಬೇಕಾಗುತ್ತದೆ.

Maruti Suzuki Ertiga Downpayment EMI Onroad Price And Other Details For You

ಮಾರುತಿ ಸುಜುಕಿ ಎರ್ಟಿಗಾ ಕಾರಿನ ಕುರಿತಾಗಿ ನೋಡುವುದಾದರೆ, ಸದ್ಯಕ್ಕೆ ಸುಮಾರು ಎಂಟು ಲಕ್ಷ ರೂ ಆಸುಪಾಸಿನಲ್ಲಿ ಸೆವೆನ್‌ ಸೀಟರ್‌ ವಾಹನ ಇದಾಗಿದ್ದು, ಒಂದು ಕುಟುಂಬದಲ್ಲಿ ಏಳು ಜನವಿದ್ದರೂ, ಆರಾಮವಾಗಿ ಈ ಕಾರಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ೭ ಜನ ಸುಖವಾಗಿ ಪ್ರಯಾಣಿಸಲು ಬೇಕಾಗುವಷ್ಟು ಸ್ಥಳಾವಕಾಶವನ್ನು ಈ ಕಾರು ನೀಡುತ್ತಿದ್ದು, ಬಜೆಟ್‌ ಫ್ರೆಂಡ್ಲಿ ಸೆವೆನ್ ಸೀಟರ್ ಕಾರಾಗಿದೆ.

ಬೆಲೆ ಏರಿಕೆಯ ಬಳಿಕ, ಮಾರುತಿ ಎರ್ಟಿಗಾ ಮಾದರಿಯ ಬೆಲೆಯು ಈಗ ರೂ. 8.69 ಲಕ್ಷದಿಂದ ರೂ. 13.03 ಲಕ್ಷವಾಗಿದ್ದು, ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಮಾದರಿಯು LXi(O), VXi(O), ZXi(O), ಮತ್ತು ZXi Plus ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

Maruti Suzuki Ertiga Downpayment EMI Onroad Price And Other Details For You

ಈ ಮಾರುತಿ ಎರ್ಟಿಗಾ ಕಾರು, 1.5 ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ, 5 ಸ್ವೀಡ್ ಮ್ಯಾನುವಲ್/ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ . ಜೊತೆಗೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಉತ್ತಮವಾಗಿ ಮೈಲೇಜ್ ನೀಡಲಿದ್ದು, 20.51 ಕಿ.ಮೀ ರಿಂದ 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಸಿಎನ್‌ಜಿ ಕಿಟ್ ಪಡೆದಿರುವ ಕಾರು, ಕೊಂಚ ಕಡಿಮೆ ಪವರ್ ಹೊರ ಹಾಕಲಿದ್ದು, ಕೇವಲ 88 PS ಪವರ್ ಮತ್ತು 121.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಮೈಲೇಜ್ ವಿಷಯದಲ್ಲೂ ಎರ್ಟಿಗಾ ಅತ್ಯುತ್ತಮವಾಗಿದ್ದು, ರೂಪಾಂತರಗಳಿಗೆ ಅನುಗುಣವಾಗಿ 20.51 kmpl ರಿಂದ 28.11 kmpl ಇಂಧನ ದಕ್ಷತೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 30, 2024, 11:53 [IST]
English summary
Maruti suzuki ertiga downpayment emi onroad price and other details for you
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+