ಕೇವಲ 8 ಲಕ್ಷಕ್ಕೆ 28 ಕಿಮೀ ಮೈಲೇಜ್‌, 7 ಸೀಟರ್‌ ವ್ಯವಸ್ಥೆ: ಮಾರುತಿಯ ಪರ್ಫೆಕ್ಟ್‌ ಫ್ಯಾಮಿಲಿ ಕಾರಿದು!

ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬ ಅಧಿಕವಾಗಿರುವುದರಿಂದ ಕಡಿಮೆ ಬೆಲೆಯಲ್ಲಿ ಒಂದು ಕುಟುಂಬ ಸಮೇತರಾಗಿ ಹೋಗಬಹುದಾದಂತಹ ಕಾರುಗಳನ್ನೇ ನೋಡುತ್ತಾರೆ. ಹಾಗಾಗಿಯೇ ಮಾರುತಿ ಸುಜುಕಿ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು. ಭಾರತೀಯರ ನಾಡಿಮಿಡಿತವನ್ನು ಅರಿತಿರುವ ಮಾರುತಿ ಸುಜುಕಿ, ಅವರಿಗೆ ಬೇಕಾದ ಬಜೆಟ್‌ನಲ್ಲಿ ಕಾರುಗಳನ್ನು ಒದಗಿಸುತ್ತುದೆ.

ಸಾಧಾರಣವಾಗಿ ಒಂದು ಕಡಿಮೆ ಬಜೆಟ್‌ನಲ್ಲಿ ಕುಟುಂಬ ಸಮೇತರಾಗಿ ಒಂದು ಕಡೆ ಹೋಗಲು ಬೇಕಾದ ವಾಹನ ಯಾವುದೆಂದು ನೊಡಿದರೆ ನಮ್ಮ ಮುಂದೆ ಇರುವುದು ಕೆಲವೇ ಕೆಲವು ವಾಹನಗಳಷ್ಟೇ. ಆದರೆ ಈ ಕೆಲವೇ ಕೆಲವು ವಾಹನಗಳಲ್ಲಿ ಅತ್ಯುತ್ತಮವಾದುದು ಯಾವುದೆಂದು ನೊಡಿದರೆ ನಮಗಿರುವ ಒಂದೇ ಮಾತು ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ (Maruti Suzuki Ertiga).

Maruti Suzuki Ertiga Is A Perfect Seven Seater family Car For 8 Lakh Budget

ಹೌದು, ಸುಮಾರು ಎಂಟು ಲಕ್ಷ ರೂ ಆಸುಪಾಸಿನಲ್ಲಿ ಸೆವೆನ್‌ ಸೀಟರ್‌ ವಾಹನ ಇದಾಗಿದ್ದು, ಒಂದು ಕುಟುಂಬದಲ್ಲಿ ಏಳು ಜನವಿದ್ದರೂ, ಆರಾಮವಾಗಿ ಈ ಕಾರಿನಲ್ಲಿ ಪ್ರಯಾಣ ಮಾಡಬಹುದಾಗಿದೆ. ೭ ಜನ ಸುಖವಾಗಿ ಪ್ರಯಾಣಿಸಲು ಬೇಕಾಗುವಷ್ಟು ಸ್ಥಳಾವಕಾಶವನ್ನು ಈ ಕಾರು ನೀಡುತ್ತಿದ್ದು, ಬಜೆಟ್‌ ಫ್ರೆಂಡ್ಲಿ ಸೆವೆನ್ ಸೀಟರ್ ಕಾರಾಗಿದೆ. ನೀವೇನಾದರೂ ನಿಮ್ಮ ಕುಟುಂಬದ ಜೊತೆ ಆಗಾಗ ಪ್ರಯಾಣ ಮಾಡುತ್ತೀರಿ ಎಂದರೆ ಸೆವೆನ್‌ ಸೀಟ್‌ (Seven Seater) ಕಾರುಗಳು ತುಂಬಾ ಉತ್ತಮ.

ಭಾರತದಲ್ಲಿ ಸದ್ಯಕ್ಕೆ ಮಾರುತಿ ಸುಜುಕಿ ಎರ್ಟಿಗಾ ಭಾರೀ ಮಾರಾಟವಾಗುತ್ತಿದ್ದು, ಇದು ಜಪಾನ್‌ನಲ್ಲೂ ಬೆಸ್ಟ್‌ ಸೆಲ್ಲಿಂಗ್‌ ಸೆವೆನ್‌ ಸೀಟರ್‌ ವಾಹನವಾಗಿ ಹೆಸರು ಗಳಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ಕಾರು ಎಸ್‌ಯುವಿ ಮತ್ತು ಎಂಪಿವಿ ಕಾರುಗಳ ಡಿಸೈನ್‌ ಶೈಲಿಯನ್ನು ಹೊಂದಿದ್ದು, ನೋಡುಗರಿಗೂ ಅತ್ಯಾಕರ್ಷಕವಾಗಿ ಕಾಣುತ್ತಿದೆ. ಈ ಕಾರು ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿದೆ.

Maruti Suzuki Ertiga Is A Perfect Seven Seater family Car For 8 Lakh Budget

ಬೆಲೆ ಏರಿಕೆಯ ಬಳಿಕ, ಮಾರುತಿ ಎರ್ಟಿಗಾ ಮಾದರಿಯ ಬೆಲೆಯು ಈಗ ರೂ. 8.69 ಲಕ್ಷದಿಂದ ರೂ. 13.03 ಲಕ್ಷವಾಗಿದ್ದು, ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಮಾದರಿಯು LXi(O), VXi(O), ZXi(O), ಮತ್ತು ZXi Plus ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಎರ್ಟಿಗಾ ಮಾದರಿಗೆ ಭಾರೀ ಬೇಡಿಕೆಯನ್ನು ಹೊಂದಿದೆ. ಮಾರುತಿ ಎಂಪಿವಿಯ CNG ರೂಪಾಂತರಗಳ ಬೇಡಿಕೆ ಹೆಚ್ಚಾಗಿದೆ.

ಈ ಮಾರುತಿ ಎರ್ಟಿಗಾ ಕಾರು, 1.5 ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ, 5 ಸ್ವೀಡ್ ಮ್ಯಾನುವಲ್/ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ . ಜೊತೆಗೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಉತ್ತಮವಾಗಿ ಮೈಲೇಜ್ ನೀಡಲಿದ್ದು, 20.51 ಕಿ.ಮೀ ರಿಂದ 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Maruti Suzuki Ertiga Is A Perfect Seven Seater family Car For 8 Lakh Budget

ಇನ್ನು ಸಿಎನ್‌ಜಿ ಕಿಟ್ ಪಡೆದಿರುವ ಕಾರು, ಕೊಂಚ ಕಡಿಮೆ ಪವರ್ ಹೊರ ಹಾಕಲಿದ್ದು, ಕೇವಲ 88 PS ಪವರ್ ಮತ್ತು 121.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಮೈಲೇಜ್ ವಿಷಯದಲ್ಲೂ ಎರ್ಟಿಗಾ ಅತ್ಯುತ್ತಮವಾಗಿದ್ದು, ರೂಪಾಂತರಗಳಿಗೆ ಅನುಗುಣವಾಗಿ 20.51 kmpl ರಿಂದ 28.11 kmpl ಇಂಧನ ದಕ್ಷತೆಯನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 15, 2024, 17:47 [IST]
English summary
Maruti suzuki ertiga is a perfect seven seater family car for 8 lakh budget
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+