Ertiga: ಫ್ಯಾಮಿಲಿ ಕಾರು ಮಾರುತಿ ಸುಜುಕಿ ಎರ್ಟಿಗಾದ ಆನ್ ರೋಡ್ ಬೆಲೆ ಎಷ್ಟು, EMI ಏನು?

ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಜನಪ್ರಿಯ ಎಂಪಿವಿಯಾಗಿದೆ. ನೀವು ಹೊಸ ಫ್ಯಾಮಿಲಿ ಕಾರೊಂದನ್ನು ಖರೀದಿಸಲು ಹುಡುಕಾಟ ನಡೆಸುತ್ತಿದ್ದರೆ ಕೈಗೆಟುಕುವ ಬೆಲೆಯ ಈ ಎರ್ಟಿಗಾ ಉತ್ತಮ ಆಯ್ಕೆಯಾಗಬಲ್ಲದು. ಇಲ್ಲಿ ಆನ್ ರೋಡ್ ದರ, ಇಎಂಐ ಆಯ್ಕೆ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಎರ್ಟಿಗಾದ ಪೆಟ್ರೋಲ್ ರೂಪಾಂತರಗಳಾದ ಎಲ್ಎಕ್ಸ್ಐ (ಒ) ರೂ.10.39 ಲಕ್ಷ, ವಿಎಕ್ಸ್ಐ (ಒ) ರೂ.11.73 ಲಕ್ಷ, ಝಡ್ಎಕ್ಸ್ಐ (ಒ) ರೂ.13.50 ಲಕ್ಷ, ವಿಎಕ್ಸ್ಐ ಎಟಿ (ಆಟೋಮೆಟಿಕ್ ಟ್ರಾಸ್ಮಿಷನ್) ರೂ.13.86 ಲಕ್ಷ, ಝಡ್ಎಕ್ಸ್ಐ ಪ್ಲಸ್ ರೂ.14.35 ಲಕ್ಷ, ಝಡ್ಎಕ್ಸ್ಐ ಎಟಿ ರೂ.15.21 ಲಕ್ಷ ಹಾಗೂ ಝಡ್ಎಕ್ಸ್ಐ ಪ್ಲಸ್ ಎಟಿ ರೂ.16.06 ಲಕ್ಷ ಆನ್ ರೋಡ್ ಬೆಲೆಯನ್ನು ಹೊಂದಿವೆ.

Maruti Suzuki Ertiga Mpv On Road Price Monthly Emi Details

ಸಿಎನ್‌ಜಿ ರೂಪಾಂತರಗಳಾದ ವಿಎಕ್ಸ್ಐ (ಒ) ರೂ.13.32 ಲಕ್ಷ ಹಾಗೂ ಝಡ್ಎಕ್ಸ್ಐ (ಒ) ರೂ.14.67 ಲಕ್ಷ ಆನ್ ರೋಡ್ ದರವನ್ನು ಪಡೆದಿವೆ. ನೀವು ಈ ಎರ್ಟಿಗಾ ಕಾರನ್ನು ಖರೀದಿಸಲು ಸುಮಾರು ರೂ.1 ಲಕ್ಷ ಡೌನ್ ಪೇಮೆಂಟ್ ಪಾವತಿಸಿದರೆ ಶೇಕಡ 9.8% ಬಡ್ಡಿ ದರದಲ್ಲಿ 5 ವರ್ಷದ ಅವಧಿಗೆ ತಿಂಗಳಿಗೆ ರೂ.19,764 ಇಎಂಐ ಕಟ್ಟಬೇಕು.

ಸದ್ಯ ಭಾರತದ ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಎರ್ಟಿಗಾ ರೂ.8.69 ಲಕ್ಷದಿಂದ ರೂ.13.03 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 7 ಆಸನ ವ್ಯವಸ್ಥೆಯೊಂದಿಗೆ ಪರ್ಲ್ ಮೆಟಾಲಿಕ್ ಆಬರ್ನ್ ರೆಡ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್ನೈಟ್ ಬ್ಲಾಕ್, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ 7 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಎರ್ಟಿಗಾ ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ನೊಂದಿಗೆ ಸಿಗುತ್ತದೆ. ಇದರ 1.5-ಲೀಟರ್ ಪೆಟ್ರೋಲ್ ಎಂಜಿನ್ 103 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೂ ದೊರೆಯುತ್ತದೆ.

ಸಿಎನ್‌ಜಿ ಚಾಲಿತ ಕಾರು ಸಹ ಇದೇ ಎಂಜಿನ್ ಆಯ್ಕೆಯನ್ನು ಹೊಂದಿದೆ. ಆದರೆ, 88 ಪಿಎಸ್ ಪವರ್ ಮತ್ತು 121.5 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು 20.3 ರಿಂದ 20.51 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 26.11 ಕೆಎಂ/ಕೆಜಿ ಮೈಲೇಜ್ ಕೊಡುತ್ತವೆ.

ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್, ಪ್ಯಾಡಲ್ ಶಿಫ್ಟರ್, ಆಟೋ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಒಳಗೊಂಡಿದೆ.

ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಗೆ ಟೊಯೊಟಾ ಇನ್ನೋವಾ ಕ್ರಿಸ್ಟಾ, ಕಿಯಾ ಕ್ಯಾರೆನ್ಸ್ ಮತ್ತು ಮಹೀಂದ್ರಾ ಮರಾಜೊ ಪ್ರಬಲ ಎದುರಾಳಿಯಾಗಿವೆ. ನಿಮ್ಮ ಗಮನಕ್ಕೆ.. ರಾಜ್ಯದಿಂದ ರಾಜ್ಯಕ್ಕೆ ಈ ಆನ್ ರೋಡ್ ದರಗಳು ಹಾಗೂ ಸಾಲದ ಆಯ್ಕೆಗಳು ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 22, 2024, 17:33 [IST]
English summary
Maruti suzuki ertiga mpv on road price monthly emi details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+