ಭಾರತದಲ್ಲಿ ಮಾರುತಿಯ ಈ ಕಾರಿಗೆ ಭರ್ಜರಿ ಬೇಡಿಕೆ: ದೊಡ್ಡ ಕುಟುಂಬಕ್ಕೆ ಇದು ಪರ್ಫೆಕ್ಟ್‌ ಆಯ್ಕೆ!

ಭಾರತದಂತಹ ರಾಷ್ಟ್ರಗಳಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಇರುವಷ್ಟು ಬೇಡಿಕೆ, ಬೇರೆ ಯಾವ ಕಂಪನಿ ಕಾರುಗಳಿಗೂ ಇಲ್ಲ ಎಂದೇ ಹೇಳಬಹುದು. ಇದಕ್ಕೆ ಪ್ರಮುಖ ಕಾರಣ, ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ನಾಡಿ ಮಿಡಿತವನ್ನು ಅರಿತಿರುವುದು. ಮಾರುತಿ ಸುಜುಕಿಯು ಆ ನಿರ್ಧಿಷ್ಟ ಬೆಲೆಗೆ ಇತರ ಕಂಪನಿಗಳು ನೀಡದೇ ಇರುವ ಫೀಚರ್ ಮತ್ತು ಅನುಭವವನ್ನು ಗ್ರಾಹಕರಿಗೆ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿಯ ಕಾರಿಗಳು ಕ್ಲಿಕ್‌ ಆಗದೇ ಇರುವುದು ಬಹಳಷ್ಟು ಕಮ್ಮಿಯೇ ಸರಿ.

ಭಾರತದಲ್ಲಿ ಮಾರುತಿ ಸುಜುಕಿಯ ಪ್ರಮುಖ ಮಾದರಿಗಳಲ್ಲಿ ಎರ್ಟಿಗಾ ಸಹ ಒಂದು. ಎಂಪಿವಿ ಸೆಗ್ಮಂಟ್‌ನಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರು ಎಂದರೆ ತಪ್ಪಾಗಲಾರದು. ಹೀಗೆನ್ನಲು ಪ್ರಮುಖ ಕಾರಣ ಸೆಪ್ಟೆಂಬರ್‌ ತಿಂಗಳಲ್ಲಿ ಮಾರುತಿ ಸುಜುಕಿಯು ಸುಮಾರು 17,441 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ಸೆಪ್ಟಂಬರ್‌ ತಿಂಗಳಲ್ಲಿ ಕಂಪನಿಯು 13,528 ಎರ್ಟಿಗಾಗಳನ್ನು ಮಾರಾಟ ಮಾಡಲಷ್ಟೇ ಶಕ್ತವಾಗಿತ್ತು.

ಮಾರುತಿ ಸುಜುಕಿ ಎರ್ಟಿಗಾ ಕಾರಿನ ಕುರಿತಾಗಿ ನೋಡುವುದಾದರೆ, ಸದ್ಯಕ್ಕೆ ಸುಮಾರು ಎಂಟು ಲಕ್ಷ ರೂ ಆಸುಪಾಸಿನಲ್ಲಿ ಸೆವೆನ್‌ ಸೀಟರ್‌ ವಾಹನ ಇದಾಗಿದ್ದು, ಒಂದು ಕುಟುಂಬದಲ್ಲಿ ಏಳು ಜನವಿದ್ದರೂ, ಆರಾಮವಾಗಿ ಈ ಕಾರಿನಲ್ಲಿ ಪ್ರಯಾಣ ಮಾಡಬಹುದಾಗಿದೆ. 7 ಜನ ಸುಖವಾಗಿ ಪ್ರಯಾಣಿಸಲು ಬೇಕಾಗುವಷ್ಟು ಸ್ಥಳಾವಕಾಶವನ್ನು ಈ ಕಾರು ನೀಡುತ್ತಿದ್ದು, ಬಜೆಟ್‌ ಫ್ರೆಂಡ್ಲಿ ಸೆವೆನ್ ಸೀಟರ್ ಕಾರಾಗಿದೆ.

ಬೆಲೆ ಏರಿಕೆಯ ಬಳಿಕ, ಮಾರುತಿ ಎರ್ಟಿಗಾ ಮಾದರಿಯ ಬೆಲೆಯು ಈಗ ರೂ. 8.69 ಲಕ್ಷದಿಂದ ರೂ. 13.03 ಲಕ್ಷವಾಗಿದ್ದು, ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಮಾದರಿಯು LXi(O), VXi(O), ZXi(O), ಮತ್ತು ZXi Plus ಎಂಬ ರೂಪಾಂತರಗಳಲ್ಲಿ ಲಭ್ಯವಿದೆ.

Maruti Suzuki Ertiga September Sales Report Is Out Now

ಈ ಮಾರುತಿ ಎರ್ಟಿಗಾ ಕಾರು, 1.5 ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ, 5 ಸ್ವೀಡ್ ಮ್ಯಾನುವಲ್/ 6 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ದೊರೆಯುತ್ತದೆ . ಜೊತೆಗೆ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಉತ್ತಮವಾಗಿ ಮೈಲೇಜ್ ನೀಡಲಿದ್ದು, 20.51 ಕಿ.ಮೀ ರಿಂದ 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇನ್ನು ಸಿಎನ್‌ಜಿ ಕಿಟ್ ಪಡೆದಿರುವ ಕಾರು, ಕೊಂಚ ಕಡಿಮೆ ಪವರ್ ಹೊರ ಹಾಕಲಿದ್ದು, ಕೇವಲ 88 PS ಪವರ್ ಮತ್ತು 121.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಮೈಲೇಜ್ ವಿಷಯದಲ್ಲೂ ಎರ್ಟಿಗಾ ಅತ್ಯುತ್ತಮವಾಗಿದ್ದು, ರೂಪಾಂತರಗಳಿಗೆ ಅನುಗುಣವಾಗಿ 20.51 kmpl ರಿಂದ 28.11 kmpl ಇಂಧನ ದಕ್ಷತೆಯನ್ನು ಹೊಂದಿದೆ.

ಈ ಕಾರಿನ ಎಕ್ಸ್‌ ಶೋ ರೂಮ್‌ ಬೆಲೆ ಸುಮಾರು 8,69,000 ರೂಗಳು. ಆರ್‌ಟಿಒ ಟ್ಯಾಕ್ಸ್‌ ಮತ್ತು ಇನ್ಸುರೆನ್ಸ್‌ ಬೆಲೆಗಳನ್ನು ಸೇರಿಸಿ ಆನ್‌ ರೋಡ್‌ 10,38,500 ರೂಗಳು ಆಗುತ್ತವೆ ಎಂಬುದನ್ನು ಗಮನಿಸಬೇಕು. ಈ ಕಾರಿನಲ್ಲಿ ಹಲವಾರು ವೇರಿಯಂಟ್‌ಗಳಿದ್ದು ನಾವಿಲ್ಲಿ ಬೇಸ್‌ ವೇರಿಯಂಟ್‌ ಕುರಿತಾಗಿ ಮಾತ್ರ ನೊಡುತ್ತಿದ್ದೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, October 10, 2024, 10:02 [IST]
English summary
Maruti suzuki ertiga september sales report is out now
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+