ಮಾರುತಿ ಸುಜುಕಿ ಯಾಕೆ ಎಲೆಕ್ಟ್ರಿಕ್‌ ಕಾರು ತರುತ್ತಿಲ್ಲ?:EVX ಉತ್ಪಾದನೆ ಮುಂದಕ್ಕೆ ಹಾಕಿದ ಮಾರುತಿ!

ಈಗಾಗಲೇ ಬಹುತೇಕ ಎಲ್ಲಾ ಕಾರು ನಿರ್ಮಾಣ ಕಂಪನಿಗಳು ಎಲೆಕ್ಟ್ರಿಕ್‌ನತ್ತ ಮುಖ ಮಾಡುತ್ತಿದೆ. ಭಾರತದಲ್ಲಿ ಈಗಾಗಲೇ ಟಾಟಾ ಮೋಟಾರ್ಸ್‌ ಈ ರೇಸ್‌ನಲ್ಲಿ ಮುಂಪಕ್ತಿಯಲ್ಲಿದೆ ಎಂದು ಯಾವುದೇ ಸಂಶಯವಿಲ್ಲದೆ ಹೇಳಬಹುದು. ಆದರೆ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಕಾರುಗಳನ್ನು ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಮಾತ್ರ ಇದಕ್ಕೆ ಹೊರತಾಗಿದೆ.

ಹೌದು, ಭಾರತೀಯ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮಾರುತಿ ಸುಜುಕಿ ಇಲ್ಲಿಯವರೆಗೆ ಒಂದೇ ಒಂದು ಎಲೆಕ್ಟ್ರಿಕ್‌ ಕಾರನ್ನು ಮಾರುಕಟ್ಟೆಗೆ ಇಳಿಸಿಲ್ಲ. 2023ರ ಆಟೋ ಎಕ್ಸ್ಪೋದಲ್ಲಿ ಇವಿಎಕ್ಸ್‌ ಎಂಬ ಎಲೆಕ್ಟ್ರಿಕ್‌ ಕಾರನ್ನು ಮಾರುತಿ ಸುಜುಕಿ ಅನಾವರಣಗೊಳಿಸಿತ್ತು ಮತ್ತು ಆದಷ್ಟು ಬೇಗ ಇದು ಮಾರುಕಟ್ಟೆಗೆ ಬರುವುದಾಗಿಯೂ ತಿಳಿದು ಬಂದಿತ್ತು. ಆದರೆ ನೀವೇನಾದರೂ ಮಾರುತಿ ಸುಜಕಿ ಎಲೆಕ್ಟ್ರಿಕ್‌ ಕಾರಿಗೆ ಕಾಯುತ್ತಿದ್ದರೆ, ನೀವು ಮತ್ತಷ್ಟು ಕಾಯಬೇಕಾಗುತ್ತದೆ.

Maruti Suzuki EVX debut delayed Reasons And Details Are Here

ಹೌದು, ಇದೀಗ ಬಂದ ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಇವಿಎಕ್ಸ್‌ ಎಲೆಕ್ಟ್ರಿಕ್‌ ಮಾರುಕಟ್ಟೆಗೆ ಬರಲು ಇನ್ನೂ ಒಂದು ವರ್ಷ ಬೇಕಾಗಬಹುದು. ಇದೇ ವರ್ಷ ಸೆಪ್ಟಂಬರ್‌ 2024 ರಿಂದ ಈ ಕಾರಿನ ಉತ್ಪಾದನೆ ಆರಂಭವಾಗಬೇಕಾಗಿತ್ತು. ಆದರೆ ಮಾರುತಿ ಸುಜುಕಿ ಇದೀಗ ಈ ಕಾರಿನ ಉತ್ಪಾದನೆಯನ್ನು ಫೆಬ್ರವರಿ 2025 ರಿಂದ ಆರಂಭಿಸಲಿದ್ದು, ಈ ಕಾರಣದಿಂದ ಮಾರುತಿ ಸುಜುಕಿ ಇವಿಎಕ್ಸ್‌ನ ಲಾಂಚ್‌ ಮತ್ತಷ್ಟು ತಡವಾಗಲಿದೆ ಎಂದು ತಿಳಿದು ಬಂದಿದೆ.

ಇನ್ನು ಮಾರುತಿ ಸುಜುಕಿ ಇವಿಎಕ್ಸ್‌ ಬಗ್ಗೆ ನೊಡುವುದಾದರೆ, ಭಾರತೀಯ ರಸ್ತೆಗಳಲ್ಲಿ ಈ ಕಾರು ಟೆಸ್ಟ್‌ರನ್‌ ಮಾಡುತ್ತಿರುವ ಚಿತ್ರಗಳು ಈ ಹಿಂದೆಯೇ ಸೋರಿಕೆಯಾಗಿತ್ತು. ಈ ಪರೀಕ್ಷಾ ಸಮಯದಲ್ಲಿ ಕಾರಿನ ಕೆಲವು ಚಿತ್ರಗಳು ಹೊರಬಂದಿದ್ದು, ಈ ಚಿತ್ರಗಳು ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ. ಮಾರುತಿ ಇವಿಎಕ್ಸ್ ದೊಡ್ಡ ಇಂಟೀರಿಯರ್, ಹೊಸ 2 - ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಕಾಣಿಸಿಕೊಂಡಿದೆ.

Maruti Suzuki EVX debut delayed Reasons And Details Are Here

ಇವಿಷ್ಟೇ ಅಲ್ಲದೇ ಡ್ರೈವ್ ಮೋಡ್‌ಗಳಿಗಾಗಿ ರೋಟರಿ ಡಯಲ್, ಹೊಸ ಫ್ರೀಸ್ಟಾಂಡಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಇಂಟೀರಿಯರ್ ಕ್ರೋಮ್ ಡೋರ್ ಹ್ಯಾಂಡಲ್‌ಗಳು ಮತ್ತು ಆಟೋ - ಡಿಮ್ಮಿಂಗ್ ಐಆರ್‌ವಿಎಂ ಅನ್ನು ಒಳಗೊಂಡಿದೆ. ಹಾಗೆಯೇ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು, ಶಾರ್ಕ್ - ಫಿನ್ ಆಂಟೆನಾ ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಇವಿಎಕ್ಸ್ ಕಾರಿನ ಸಂಪೂರ್ಣ ತಾಂತ್ರಿಕ ವಿಶೇಷತೆಗಳನ್ನು ಬಹಿರಂಗಪಡಿಸಿಲ್ಲ. ನಮಗೆ ತಿಳಿದಿರುವ ಸಂಗತಿಯೆಂದರೆ, ಈ ಮಾದರಿಯು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾದ 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲನೆಗೊಳ್ಳಲಿದೆ, ಇದು ಸಿಂಗಲ್ ಪೂರ್ಣ ಚಾರ್ಜ್‌ನಲ್ಲಿ 550 ಕಿ.ಮೀ ರೇಂಜ್ ನೀಡಲಿದೆ.

Maruti Suzuki EVX debut delayed Reasons And Details Are Here

ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿಗಳಾದ ಟಾಟಾ ಕರ್ವ್ವ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ ಇ.8 ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲಿದೆ. ಇದನ್ನು 2WD (ಟೂ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ಸಿಸ್ಟಂಗಳಲ್ಲಿ ನೀಡಬಹುದು.

ಎಲೆಕ್ಟ್ರಾನಿಕ್ - ಕಂಟ್ರೋಲ್ 4×4 ತಂತ್ರಜ್ಞಾನಗಳೊಂದಿಗೆ, ಹೊಸ ಮಾದರಿಯು ADAS ತಂತ್ರಜ್ಞಾನವನ್ನು ಪಡೆಯುವ ನಿರೀಕ್ಷೆಯಿದೆ. ಸುಜುಕಿ EVX ಉದ್ದ 4300mm, ಅಗಲ 1800mm ಮತ್ತು ಎತ್ತರ 1600mm ಇರಲಿದೆ. ಈ ಎಲೆಕ್ಟ್ರಿಕ್ ಕಾರಿನ ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, April 12, 2024, 13:11 [IST]
English summary
Maruti suzuki evx debut delayed reasons and details are here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+