Maruti Suzuki: ರಸ್ತೆಗಿಳಿದ ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು: ಹೊಸ ಫೀಚರ್ಸ್ ಬಹಿರಂಗ!
ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರುಗಳು ಬೇಡಿಕೆ ಪಡೆಯುತ್ತಿರುವ ಕಾರಣ ಟಾಟಾ ಮೋಟಾರ್ಸ್‌ನಿಂದ ಹಿಡಿದು ಹ್ಯುಂಡೈವರೆಗೆ ಬಹುತೇಕ ಎಲ್ಲಾ ಬ್ರಾಂಡ್‌ಗಳು ಕನಿಷ್ಟ ಒಂದೊಂದು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿವೆ. ಆದ್ರೆ ದೇಶೀಯ ಕಾರು ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ (Maruti Suzuki)ಈವೆರೆಗೆ ಒಂದು ಇವಿ ಕಾರನ್ನು ಕೂಡ ಪರಿಚಯಿಸಿಲ್ಲ.
ಭವಿಷ್ಯದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಕಾರುಗಳೇ ಆಟೋ ಉದ್ಯಮವನ್ನು ಆಳುವುದು ಬಹುತೇಕ ಎಲ್ಲರಿಗೂ ತಿಳಿದೇ ಇದೆ. ಇದೇ ಕಾರಣಕ್ಕೆ ಭಾರತದಲ್ಲಿ ಬಹುತೇಕ ಎಲ್ಲಾ ಬ್ರಾಂಡ್‌ಗಳು ನಿಧಾನವಾಗಿ ತಮ್ಮ ಒಂದೊಂದೇ ಎಲೆಕ್ಟ್ರಿಕ್ ಆವೃತ್ತಿಗಳನ್ನು ಪರಿಚಯಿಸುತ್ತಿವೆ. ಭವಿಷ್ಯದ ಇವಿ ಕಾರು ವಲಯದಲ್ಲಿ ಮುಂದುವರೆಯಬೇಕಾದ್ರೆ ಮಾರುತಿ ಕೂಡ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುವ ಅನಿವಾರ್ಯತೆ ಇದೆ. ಇದು ಕಂಪನಿಗೂ ಗೊತ್ತು, ಹಾಗಾಗಿಯೇ ತನ್ನ ಮೊದಲ ಎಲೆಕ್ಟ್ರಿಕ್ ಕಾರ್ ಆದ ಇವಿಎಕ್ಸ್ (eVX) ಮಾದರಿಯನ್ನು ಪರಿಚಯಿಸಲು ವೇಗವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ. ಮೂಲಗಳ ಪ್ರಕಾರ ಮಾರುತಿ ಸುಜುಕಿಯು 2025ರ ಆರಂಭದಲ್ಲಿ ಇವಿಎಕ್ಸ್ ಕಾರನ್ನು ಬಿಡುಗಡೆ ಮಾಡಲಿದೆ.

ಬಿಡುಗಡೆಗೆ ಕೆಲವೇ ತಿಂಗಳುಗಳು ಇರುವುದರಿಂದ ಮಾರುತಿ ಸುಜುಕಿಯು, ಇವಿಎಕ್ಸ್ (Maruti Suzuki eVX) ಕಾರಿನ ಪರೀಕ್ಷೆಯನ್ನು ವೇಗಗೊಳಿಸಿದೆ. ಈ ಪರೀಕ್ಷಾ ಸಮಯದಲ್ಲಿ ಕಾರಿನ ಕೆಲವು ಚಿತ್ರಗಳು ಹೊರಬಂದಿದ್ದು, ಈ ಚಿತ್ರಗಳು ಕೆಲವು ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿವೆ. ಮಾರುತಿ ಇವಿಎಕ್ಸ್ ದೊಡ್ಡ ಇಂಟೀರಿಯರ್, ಹೊಸ 2 - ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಕಾಣಿಸಿಕೊಂಡಿದೆ.
ಇವಿಷ್ಟೇ ಅಲ್ಲದೇ ಡ್ರೈವ್ ಮೋಡ್‌ಗಳಿಗಾಗಿ ರೋಟರಿ ಡಯಲ್, ಹೊಸ ಫ್ರೀಸ್ಟಾಂಡಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಇಂಟೀರಿಯರ್ ಕ್ರೋಮ್ ಡೋರ್ ಹ್ಯಾಂಡಲ್‌ಗಳು ಮತ್ತು ಆಟೋ - ಡಿಮ್ಮಿಂಗ್ ಐಆರ್‌ವಿಎಂ ಅನ್ನು ಒಳಗೊಂಡಿದೆ. ಹಾಗೆಯೇ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಹೊಸ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು, ಹೊಸ ಅಲಾಯ್ ವೀಲ್‌ಗಳು, ಶಾರ್ಕ್ - ಫಿನ್ ಆಂಟೆನಾ ಮತ್ತು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ.

ಮಾರುತಿ ಸುಜುಕಿ ಕಂಪನಿಯು ಹೊಸ ಇವಿಎಕ್ಸ್ ಕಾರಿನ ಸಂಪೂರ್ಣ ತಾಂತ್ರಿಕ ವಿಶೇಷತೆಗಳನ್ನು ಬಹಿರಂಗಪಡಿಸಿಲ್ಲ. ನಮಗೆ ತಿಳಿದಿರುವ ಸಂಗತಿಯೆಂದರೆ, ಈ ಮಾದರಿಯು ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲಾದ 60 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ನಿಂದ ಚಾಲನೆಗೊಳ್ಳಲಿದೆ, ಇದು ಸಿಂಗಲ್ ಪೂರ್ಣ ಚಾರ್ಜ್‌ನಲ್ಲಿ 550 ಕಿ.ಮೀ ರೇಂಜ್ ನೀಡಲಿದೆ. ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಮುಂಬರುವ ಎಲೆಕ್ಟ್ರಿಕ್ ಎಸ್‌ಯುವಿಗಳಾದ ಟಾಟಾ ಕರ್ವ್ವ್ ಇವಿ ಮತ್ತು ಮಹೀಂದ್ರಾ ಎಕ್ಸ್‌ಯುವಿ ಇ.8 ಎಲೆಕ್ಟ್ರಿಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡಲಿದೆ. ಇದನ್ನು 2WD (ಟೂ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ಸಿಸ್ಟಂಗಳಲ್ಲಿ ನೀಡಬಹುದು.
ಎಲೆಕ್ಟ್ರಾನಿಕ್ - ಕಂಟ್ರೋಲ್ 4×4 ತಂತ್ರಜ್ಞಾನಗಳೊಂದಿಗೆ, ಹೊಸ ಮಾದರಿಯು ADAS ತಂತ್ರಜ್ಞಾನವನ್ನು ಪಡೆಯುವ ನಿರೀಕ್ಷೆಯಿದೆ. ಸುಜುಕಿ EVX ಉದ್ದ 4300mm, ಅಗಲ 1800mm ಮತ್ತು ಎತ್ತರ 1600mm ಇರಲಿದೆ. ಈ ಎಲೆಕ್ಟ್ರಿಕ್ ಕಾರಿನ ಮುಂಭಾಗ ಮತ್ತು ಹಿಂಭಾಗದ ಸೀಟುಗಳು ಹೊಂದಾಣಿಕೆಯ ಹೆಡ್‌ರೆಸ್ಟ್‌ಗಳೊಂದಿಗೆ ಬರುತ್ತದೆ.

ಇದರೊಂದಿಗೆ ಟಚ್-ಸೆನ್ಸಿಟಿವ್ ಬಟನ್‌ಗಳು, ಸ್ಪೋರ್ಟಿ ಸೀಟ್‌ಗಳು, ದೊಡ್ಡ ಪನೋರಮಿಕ್ ಸನ್‌ರೂಫ್ ಮತ್ತು ರೋಟರಿ ಡ್ರೈವ್ ಅನ್ನು ಒಳಗೊಂಡಿರಲಿದೆ. ಈ ಸುಜುಕಿ ಇವಿಎಕ್ಸ್ ಮಾದರಿಯು ಟೊಯೊಟಾದ 27ಪಿಎಲ್ ಮೀಸಲಾದ ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್ ಅನ್ನು ಬಳಸಿಕೊಳ್ಳುತ್ತದೆ. ಮುಂಬರುವ ದಿನಗಳಲ್ಲಿ ಮಾರುತಿ ಇವಿಎಕ್ಸ್ ಕುರಿತು ಹೆಚ್ಚಿನ ಮಾಹಿತಿ ಹೊರಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications