ವರ್ಷಾಂತ್ಯಕ್ಕೆ ದಿನಗಣನೆ: 2025 ರಲ್ಲಿ ಬಿಡುಗಡೆಗೆ ಸಜ್ಜಾಗಿವೆ 4 ಹೊಸ ಮಾರುತಿ ಕಾರುಗಳು!
ಆಟೋ ಉದ್ಯಮಕ್ಕೆ 2025 ರ ಹೊಸ ವರ್ಷವು ವಾಹನಗಳನ್ನು ಪರಿಚಯಿಸಲು ಸವಾಲಿನ ವರ್ಷವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೆಲವೊಂದಷ್ಟು ಬ್ರಾಂಡ್‌ಗಳು ಅತ್ಯಾಧುನಿಕ ಫೀಚರ್ಸ್‌ನೊಂದಿಗೆ ಅಗ್ಗದ ಬೆಲೆಯ ಕಾರುಗಳನ್ನು ಮಾರಾಟ ಮಾಡುತ್ತಿವೆ. ಇವುಗಳಿಗೆ ಪೈಪೋಟಿ ನೀಡುವ ಸ್ಪರ್ಧಾತ್ಮಕ ಬೆಲೆ ಕಾರುಗಳನ್ನು ಬಿಡುಗಡೆ ಮಾಡಲು ಕೆಲವು ಬ್ರಾಂಡ್‌ಗಳು ಸಜ್ಜಾಗಿವೆ. ಅದರಲ್ಲಿ ಪ್ರಮುಖವಾಗಿ ಮಾರುತಿ ಸುಜುಕಿ ಬಗ್ಗೆ ಹೇಳಬೇಕು. ಜನಪ್ರಿಯ ಕಾರು ತಯಾರಕ ಮಾರುತಿ ಸುಜುಕಿಯು 2025 ರಲ್ಲಿ ಒಂದೆರಡು ಹೊಸ ಉತ್ಪನ್ನಗಳು ಮತ್ತು ಕೆಲವು ಫೇಸ್‌ಲಿಫ್ಟೆಡ್ ಕಾರುಗಳನ್ನು ಬಿಡಗಡೆ ಮಾಡಲಿದೆ.
ಮಾರುತಿ ಇ-ವಿಟಾರಾ: ಮಾರುತಿ ಸುಜುಕಿಯು ಹೊಸ ಇ-ವಿಟಾರಾ ಎಂಬ ಎಲೆಕ್ಟ್ರಿಕ್ ಎಸ್‌ಯುವಿಯನ್ನು 2025 ರ ಜನವರಿ 17 ರಿಂದ 22 ರವರೆಗೆ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋನಲ್ಲಿ ಅನಾವರಣಗೊಳಿಸಲಿದ್ದು, ಮುಂದಿನ ವರ್ಷದ ಮಧ್ಯಾರ್ದದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಕಾರಿನ ನಿರೀಕ್ಷಿತ ಬೆಲೆಯು 22 ಲಕ್ಷ ರೂ. (ಎಕ್ಸ್ ಶೋರೂಂ) ಇರಲಿದೆ ಎಂದು ಹೇಳಲಾಗುತ್ತಿದೆ.

ಈ ಕಾರು 49 ಕಿಲೋವ್ಯಾಟ್ ಮತ್ತು 61 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್‌ಳೊಂದಿಗೆ ಬರಲಿದೆ. ಸಿಂಗಲ್ ಜಾರ್ಜ್‌ನಲ್ಲಿ ಸುಮಾರು 550 ಕಿ.ಮೀ ರೇಂಜ್ ನೀಡುವ ನಿರೀಕ್ಷೆಯಿದೆ. ವೈರ್ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಗ್ಲಾಸ್‌ರೂಫ್, 6 ಏರ್‌ಬ್ಯಾಗ್, 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, 10.1-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ಎಡಿಎಎಸ್ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
7-ಸೀಟರ್ ಮಾರುತಿ ಗ್ರ್ಯಾಂಡ್ ವಿಟಾರಾ: ಮಾರುತಿ ಗ್ರ್ಯಾಂಡ್ ವಿಟಾರಾದ 7-ಸೀಟರ್ ಇತ್ತೀಚೆಗೆ ಭಾರತೀಯ ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡಲಾಗಿದ್ದು, ಈ ಕಾರು 2025 ರ ಜೂನ್‌ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಮುಂಬರುವ 7 ಸೀಟರ್ ಎಸ್‌ಯುವಿಯ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಾವು ಅಧಿಕೃತ ದೃಢೀಕರಣಕ್ಕಾಗಿ ಕಾಯಬೇಕಾಗಿದೆ.

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 9 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟಿಪಿಎಂಎಸ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ 5 - ಸೀಟರ್ ಆವೃತ್ತಿಯ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಗಳಿವೆ.
ಮಾರುತಿ ಬಲೆನೊ ಫೇಸ್‌ಲಿಫ್ಟ್: ಮಾರುತಿ ಬಲೆನೊ ಪ್ರೀಮಿಯಂ ಹ್ಯಾಚ್‌ಬ್ಯಾಕ್ ನವೀಕರಣವನ್ನು ಕಂಡು ಸುಮಾರು ಎರಡು ವರ್ಷಗಳು ಆಗಿರುವುದರಿಂದ, ಮಾರುತಿ ಮಾರ್ಚ್ 2025 ರಲ್ಲಿ ಬಲೆನೊದ ಮತ್ತೊಂದು ಫೇಸ್‌ಲಿಫ್ಟ್ ಬಿಡುಗಡೆ ಮಾಡಬಹುದು. ಫೇಸ್ ಲಿಫ್ಟೆಡ್ ಬಲೆನೊ ದೊಡ್ಡ ಟಚ್ ಸ್ಕ್ರೀನ್, ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಸಿಂಗಲ್-ಪ್ಯಾನ್ ಸನ್‌ರೂಫ್, ವೈರ್ಲೆಸ್ ಫೋನ್ ಚಾರ್ಜರ್, ಟಿಪಿಎಂಎಸ್ ಮತ್ತು ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.

ಮಾರುತಿ ಬ್ರೆಝಾ ಫೇಸ್ ಲಿಫ್ಟ್: ಸ್ಕೋಡಾ ಕೈಲಾಕ್ ಮತ್ತು ಕಿಯಾ ಸೈರಸ್‌ನಂತಹ ಹೊಸ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳು ಸಬ್-4ಮೀ. ಎಸ್‌ಯುವಿ ವಿಭಾಗದಲ್ಲಿ ಸ್ಪರ್ಧೆ ಹೆಚ್ಚಿಸಿರುವುದರಿಂದ, ಬ್ರೆಝಾ ಪ್ರತಿಸ್ಪರ್ಧಿಗಳನ್ನು ಎದುರಿಸಲು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಫೇಸ್ ಲಿಫ್ಟ್‌ನೊಂದಿಗೆ ಬರಬಹುದು. ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಜೊತೆಗೆ ಬರುವ ನಿರೀಕ್ಷೆಯಿದೆ.
ಜೊತೆಗೆ ವೆಂಟಿಲೇಟೆಡ್ ಮತ್ತು ಪವರ್ಡ್ ಫ್ರಂಟ್ ಸೀಟ್‌ಗಳು ಮತ್ತು 6 ಏರ್ ಬ್ಯಾಗ್‌ಗಳು ಇರಲಿವೆ. ಇದಕ್ಕೆ ಕಿಯಾ ಸೈರಸ್, ಮಹೀಂದ್ರಾ ಎಕ್ಸ್ ಯುವಿ 3 ಎಕ್ಸ್ ಒ, ಟಾಟಾ ನೆಕ್ಸಾನ್‌ನಂತಹ ಮಾದರಿಗಳು ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪನೋರಮಿಕ್ ಸನ್‌ರೂಫ್ ಜೊತೆಗೆ ಬರುತ್ತಿರುವುದರಿಂದ ಮಾರುತಿ ಬ್ರೆಝಾ ಫೇಸ್ ಲಿಫ್ಟ್‌ನಲ್ಲೂ ಸನ್‌ರೂಫ್ ನೀಡುವ ನಿರೀಕ್ಷೆಯಿದೆ.


Click it and Unblock the Notifications