ಮಾರುತಿ ಸುಜುಕಿಗೆ ವರವಾದ 7 ಲಕ್ಷದ ಫ್ರಾಂಕ್ಸ್.. ಮಾರಾಟದಲ್ಲಿ ಸುನಾಮಿ.. ವೆನ್ಯೂ, ಸೋನೆಟ್, ಬೊಲೆರೊಗಳು ಪಕ್ಕಕ್ಕೆ!
ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಗೇಮ್ ಚೇಂಜರ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರತಿ ತಿಂಗಳು ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಟಾಪ್ 10 ಎಸ್‌ಯುವಿ ಪಟ್ಟಿಯಲ್ಲಿ ಫ್ರಾಂಕ್ಸ್ ಇದ್ದೇ ಇರುತ್ತದೆ. ಸದ್ಯ, ವಾರ್ಷಿಕ ಮಾರಾಟದಲ್ಲಿ ಈ ಕಾರು ವಿವಿಧ ಕಂಪನಿಗಳ ಜನಪ್ರಿಯ ಎಸ್‌ಯುವಿಗಳನ್ನು ಹಿಂದಿಕ್ಕಿದೆ.
ಮಾರುತಿ ಸುಜುಕಿ, ದೇಶೀಯ ಮಾರುಕಟ್ಟೆಯಲ್ಲಿ ಬಲವಾದ ಹಿಡಿತವನ್ನು ಸಾಧಿಸಲು 2023ರ ಏಪ್ರಿಲ್‌ನಲ್ಲಿ ಫ್ರಾಂಕ್ಸ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಈ ಕಾರಿಗೆ ಖರೀದಿದಾರರಿಂದಲೂ ನೀರಿಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇ ವರ್ಷದ ಡಿಸೆಂಬರ್ ತಿಂಗಳವರೆಗೆ ಕಂಪನಿಯು ಬರೋಬ್ಬರಿ 94,393 ಯುನಿಟ್ ಫ್ರಾಂಕ್ಸ್ ಕಾರುಗಳನ್ನು ಮಾರಾಟಗೊಳಿಸಲು ಯಶಸ್ವಿಯಾಗಿತ್ತು.

ಈ ವರ್ಷದ ಜನವರಿಯಿಂದ ನವೆಂಬರ್‌ವರೆಗೆ ದಾಖಲೆ ಸಂಖ್ಯೆಯಲ್ಲಿ 'ಮಾರುತಿ ಸುಜುಕಿ ಫ್ರಾಂಕ್ಸ್' ಎಸ್‌ಯುವಿಗಳು ಮಾರಾಟವಾಗಿವೆ. ಬರೋಬ್ಬರಿ 145,484 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರ ಎದುರಾಳಿಗಳಾದ ಹ್ಯುಂಡೈ ವೆನ್ಯೂನ 107,554 ಯುನಿಟ್, ಕಿಯಾ ಸೋನೆಟ್‌ನ 103,353 ಯುನಿಟ್ ಹಾಗೂ ಮಹೀಂದ್ರಾ ಬೊಲೆರೊದ 91,063 ಯುನಿಟ್‌ಗಳು ಮಾತ್ರ ಮಾರಾಟಗೊಂಡಿವೆ.
ದೇಶೀಯ ಗ್ರಾಹಕರ ಖರೀದಿಗೆ ದೊರೆಯುವ ನೂತನ ಮಾರುತಿ ಫ್ರಾಂಕ್ಸ್ ಎಸ್‌ಯುವಿ, ಕನಿಷ್ಠ ರೂ.7.51 ಲಕ್ಷ ಮತ್ತು ಗರಿಷ್ಠ ರೂ.13.04 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ. ಈ ಕಾರು ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್ ಮತ್ತು ಜಿಟಾ ಒಳಗೊಂಡಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ.

ಹೊಸ ಫ್ರಾಂಕ್ಸ್ ಕಾರು 3 ಪವರ್‌ಟ್ರೇನ್‌ನೊಂದಿಗೂ ಸಿಗುತ್ತದೆ. ಇದರ 1-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 100 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 148 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್/ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಮತ್ತೊಂದು 1.2-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಎಂಜಿನ್, 90 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಸಿಎನ್‌ಜಿ ಚಾಲಿತ ಮಾಡೆಲ್ 1.2-ಲೀಟರ್ ಎಂಜಿನ್‌ನ್ನು ಒಳಗೊಂಡಿದೆ. 77.5ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 98.5ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ದೊರೆಯುತ್ತದೆ. ಈ ಕಾರು 20.1 ರಿಂದ 28.51 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯಲ್ಲಿ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಈ ಕಾರು ನೆಕ್ಸಾ ಬ್ಲೂ, ಅರ್ಥನ್ ಬ್ರೌನ್, ಆರ್ಕ್ಟಿಕ್ ವೈಟ್, ಒಪ್ಯುಲೆಂಟ್ ರೆಡ್, ಗ್ರ್ಯಾಂಡ್ಯೂರ್ ಗ್ರೇ ಮತ್ತು ಬ್ಲೂಶ್ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳನ್ನು ಹೊಂದಿದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಪಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು 360 - ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications