ವರ್ಷದೊಳಗೆ ಬರೋಬ್ಬರಿ 1 ಲಕ್ಷ ಯೂನಿಟ್ ಸೇಲ್: ದೊಡ್ಡಣ್ಣನಾಗಿ ಮೆರೆಯುತ್ತಿರುವ ಮಾರುತಿ ಫ್ರಾಂಕ್ಸ್!
ಮಾರುತಿ ಸುಜುಕಿ ಕಳೆದ ವರ್ಷ ಬಿಡುಗಡೆ ಮಾಡಿದ ಮಾರುತಿ ಸುಜುಕಿ ಫ್ರಾಂಕ್ಸ್ ಸದ್ಯಕ್ಕೆ ಎಲ್ಲರ ಹಾಟ್ ಫೇವರೀಟ್. ಇದಕ್ಕೆ ಪ್ರಮುಖ ಕಾರಣ ಕಡಿಮೆ ಬೆಲೆಯಲ್ಲಿ ಈಕಾರು ನೀಡುವ ಅನುಭವ. ಫ್ರಾಂಕ್ಸ್‌ನ ಪ್ರಮುಖ ಹೈಲೈಟ್ , ಬಿಡುಗಡೆಯಾದಾಗಿನಿಂದ ಅತೀ ಹೆಚ್ಚು ವೇಗವಾಗಿ 1 ಲಕ್ಷ ಯೂನಿಟ್ ಬಿಕರಿಯಾದ ಕಾರೆಂಬ ಹೆಗ್ಗಳಿಕೆ.
ಹೌದು, ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಏಪ್ರಿಲ್ 2023 ರಲ್ಲಿ ಭಾರತೋಯ ಮಾರುಕಟ್ಟೆಗೆ ಲಾಂಚ್ ಆಗಿತ್ತು. ಅಲ್ಲಿಂದ ಒಂದು ವರ್ಷ ತುಂಬುವುದರೊಳಗೆ ಈ ಕಾರು 1 ಲಕ್ಷ ಯೂನಿಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ಅತೀ ವೇಗವಾಗಿ ಒಂದು ಲಕ್ಷ ಯೂನಿಟ್ ಮಾರಾಟವಾದ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಭಾರತದಲ್ಲಿ ಇಷ್ಟು ಬೇಗ ಈ ಮಟ್ಟಕ್ಕೆ ಬೆಳೆಯಲು ಪ್ರಮುಖ ಕಾರಣ ಇದರ ವಿನ್ಯಾಸ ಎಂದೇ ಹೇಳಬಹುದು. ಕ್ರಾಸ್‌ಓವರ್ ಎಸ್‌ಯುವಿಯಾಗಿರುವ ಈ ಫ್ರಾಂಕ್ಸ್, ಗ್ರಾಂಡ್ ವಿಟಾರ ಮತ್ತು ಬಲೆನೋ ಕಾರಿನ ಮಿಶ್ರಣದಂತಿದೆ. ಮುಂದಿನಿಂದ ನೋಡಿದಾಗ ಗ್ರಾಂಡ್ ವಿಟಾರಾ ಕಾರಿನ ಫ್ರಂಟ್ ಫಾಸಿಯ ನೆನಪಾದರೆ, ಬದಿಯಿಂದ ನೋಡುವಾಗ ಮಾರುತಿ ಸುಜುಕಿ ಬಲೆನೊ ನೆನಪಾಗುವುದು ಪಕ್ಕಾ.
ಈ ಕಾರಿನ ಮಾಹಿತಿಗಳನ್ನು ನೋಡುವುದಾದರೆ, ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಎರಡಕ್ಕೂ ಸಪೋರ್ಟ್ ಮಾಡುವ ದೊಡ್ಡದಾದ 9 ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಅನ್ನು ಹೊಂದಿದೆ. 40+ ಕನೆಕ್ಟ್ದ್ ಕಾರ್ ಫೀಚರ್ಸ್, 360 ಡಿಗ್ರಿ ಕ್ಯಾಮೆರಾ, ಹೆಡ್ಸ್ ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಪಡೆದಿದೆ. ಆಟೋಮೆಟಿಕ್ ರೂಪಾಂತರಗಳಲ್ಲಿ ಪ್ಯಾಡ್ & ಪ್ಯಾಡಲ್ ಶಿಫ್ಟರ್ ಅನ್ನು ಹೊಂದಿದೆ.

ಈ ಫ್ರಾಂಕ್ಸ್, 6 ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ, ನೆಕ್ಸಾ ಬ್ಲೂ, ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಅರ್ಟೆನ್ ಬ್ರೌನ್, ಒಪ್ಯುಲೆಂಟ್ ರೆಡ್ ಹಾಗೂ ಸ್ಪ್ಲೆಂಡಿಡ್ ಸಿಲ್ವರ್. ಜೊತೆಗೆ 3 ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರಮುಖವಾಗಿ ಅರ್ಥೇನ್ ಬ್ರೌನ್, ಒಪ್ಯುಲೆಂಟ್ ರೆಡ್, ಸ್ಪ್ಲೆಂಡಿಡ್ ಸಿಲ್ವರ್ ವಿತ್ ಬ್ಲ್ಯೂಯಿಸ್ ಬ್ಲ್ಯಾಕ್ ರೋಫ್.
ಮಾರುತಿ ಸುಜುಕಿಯ ಫ್ರಾಂಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆದಿದೆ. ಅವುಗಳೆಂದರೆ, 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಕೆ12ಸಿ ಎಂಜಿನ್ ಹಾಗೂ ನವೀಕರಿಸುವ ಬಲೆನೊ RS ರೂಪಾಂತರ ಪಡೆದಿರುವಂತೆ 998 ಸಿಸಿ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ಇವೆರಡು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವುದು ವಿಶೇಷವಾಗಿದೆ.

ಈ ಕಾರಿನ 1.2 ಲೀಟರ್ ಎಂಜಿನ್, 88.5 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5 ಸ್ಪೀಡ್ ಮ್ಯಾನುವಲ್/ ಆಟೋಮ್ಯಾಟಿಕ್ (AMT) ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಮತ್ತೊಂದು 998ಸಿಸಿ ಟರ್ಬೊಚಾರ್ಜ್ಡ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್, 98.7 ಪವರ್, 147.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications