Fronx: ಬಹುಬೇಡಿಕೆಯ ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನ ಹೊಸ ವೇರಿಯೆಂಟ್ ಬಿಡುಗಡೆ.. 6 ಏರ್‌ಬ್ಯಾಗ್, 8 ಲಕ್ಷ ಬೆಲೆ

ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ (Maruti Suzuki), ಕೈಗೆಟುಕುವ ಬೆಲೆಯಲ್ಲಿ ಕಾರುಗಳನ್ನು ಮಾರಾಟಗೊಳಿಸುವುದಕ್ಕೆ ಹೆಸರುವಾಸಿಯಾಗಿದೆ. ಇದೀಗ, ಬಹುಬೇಡಿಕೆಯ 'ಫ್ರಾಂಕ್ಸ್' ಎಸ್‌ಯುವಿಯ ಹೊಸ ರೂಪಾಂತರ (ವೇರಿಯೆಂಟ್)ವನ್ನು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಗೊಳಿಸಿದೆ. ಆ ಕುರಿತ ಸಂಪೂರ್ಣವಾದ ವಿವರ ಇಲ್ಲಿದೆ.

ಭಾರತದ ಮಾರುಕಟ್ಟೆಗೆ 2023ರ ಏಪ್ರಿಲ್‌ನಲ್ಲಿ ಬಲೆನೊ ಆಧಾರಿತ ನೂತನ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎಸ್‌ಯುವಿಯನ್ನು ಪರಿಚಯಿಸಲಾಯಿತ್ತು. ಈ ಕಾರು ಸಿಗ್ಮಾ, ಡೆಲ್ಟಾ, ಡೆಲ್ಟಾ ಪ್ಲಸ್, ಜಿಟಾ ಹಾಗೂ ಆಲ್ಪಾ ರೂಪಾಂತರಗಳ ಆಯ್ಕೆಯಲ್ಲಿ ಮಾತ್ರ ದೊರೆಯುತ್ತಿತ್ತು. ಇನ್ಮುಂದೆ ಡೆಲ್ಟಾ ಪ್ಲಸ್ (ಒ) ಅವತಾರದಲ್ಲಿ ಕೂಡ ದೇಶೀಯ ಗ್ರಾಹಕರಿಗೆ ಖರೀದಿಗೆ ಲಭ್ಯವಿರಲಿದೆ.

Maruti Suzuki Fronx Car Delta Plus O Variant Launched India 6 Airbags Rs 8 93 Lakh Price

ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಡೆಲ್ಟಾ ಪ್ಲಸ್ (ಒ) ಕಾರಿನ ಮ್ಯಾನುವಲ್ ಗೇರ್‌ಬಾಕ್ಸ್‌ (MT) ಪಡೆದಿರುವ ಮಾದರಿಯು ರೂ.8.93 ಲಕ್ಷ ಹಾಗೂ ಆಟೋಮೆಟಿಕ್ ಗೇರ್‌ಬಾಕ್ಸ್‌ (AMT) ಒಳಗೊಂಡಿರುವ ಆವೃತ್ತಿಯು ರೂ.9.43 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 4-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮೆಟಿಕ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಈ ಮಾರುತಿ ಸುಜುಕಿ ಫ್ರಾಂಕ್ಸ್ ಡೆಲ್ಟಾ ಪ್ಲಸ್ (ಒ) ರೂಪಾಂತರವು 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. 90 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 113 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್/ 5-ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೂ ಸಿಗುತ್ತದೆ.

Maruti Suzuki Fronx Car Delta Plus O Variant Launched India 6 Airbags Rs 8 93 Lakh Price

ಸಾಮಾನ್ಯ ಡೆಲ್ಟಾ ಪ್ಲಸ್ ಮಾದರಿಯು 1-ಲೀಟರ್ ಟರ್ಬೊ ಎಂಜಿನ್‌ನೊಂದಿಗೆ ದೊರೆಯಲಿದ್ದು, 100 ಪಿಎಸ್ ಪವರ್ ಹಾಗೂ 148 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಆದರೆ, ನೂತನ ಡೆಲ್ಟಾ ಪ್ಲಸ್ (ಒ) ರೂಪಾಂತರದಷ್ಟು ವೈಶಿಷ್ಟ್ಯಗಳನ್ನು ಪಡೆದುಕೊಂಡಿಲ್ಲ. ಈ ಕಾರಿನಲ್ಲಿಯೂ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಯಬಹುದು.

ಹೊಚ್ಚ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್‌ ಡೆಲ್ಟಾ ಪ್ಲಸ್ (ಒ) ಮಾದರಿಯಲ್ಲಿನ ಅತಿದೊಡ್ಡ ಬದಲಾವಣೆಯೆಂದರೆ 6 ಏರ್‌ಬ್ಯಾಗ್ ಹಾಗೂ ಪಂಕ್ಚರ್ ರಿಪೇರಿ ಕಿಟ್‌ನ್ನು ಪಡೆದುಕೊಂಡಿರುವುದು. ಇವೆರೆಡು ಆಯ್ಕೆಗಳು ಡೆಲ್ಟಾ ಪ್ಲಸ್ ರೂಪಾಂತರದಲ್ಲಿ ಸಿಗುವುದಿಲ್ಲ. ಈವರೆಗೆ 6 ಏರ್‌ಬ್ಯಾಗ್‌ಗಳನ್ನು ಜಿಟಾಗಿಂತ ಮೇಲ್ಪಟ್ಟ ಆವೃತ್ತಿಗಳಲ್ಲಿ ಮಾತ್ರ ನೀಡಲಾಗುತ್ತಿತ್ತು. ಜಿಟಾ ಮಾದರಿಯು ರೂ.10.56 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ.

Maruti Suzuki Fronx Car Delta Plus O Variant Launched India 6 Airbags Rs 8 93 Lakh Price

ಇನ್ನುಳಿದಂತೆ ನೂತನ ಡೆಲ್ಟಾ ಪ್ಲಸ್ (ಒ) ರೂಪಾಂತರವು ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಹೋಲ್ಡ್ ಅಸಿಸ್ಟ್, ಸೀಟ್‌ಬೆಲ್ಟ್ ರಿಮೈಂಡರ್, 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳು ಒಳಗೊಂಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಎಸ್‌ಯುವಿಗೆ ಕಿಯಾ ಸೊನೆಟ್, ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ ಕಾರುಗಳು ಪ್ರಬಲ ಪ್ರತಿಸ್ಫರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 15, 2024, 10:38 [IST]
English summary
Maruti suzuki fronx car delta plus o variant launched india 6 airbags rs 8 93 lakh price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+