Maruti Suzuki Fronx ಕಾರು ಈಗ ಮತ್ತಷ್ಟು ಅಗ್ಗ: ಆಕರ್ಷಕ ಎಸ್‌ಯುವಿಯ ಹೊಸ ಬೆಲೆಯೆಷ್ಟು ಗೊತ್ತಾ?

ಮಾರುತಿ ಸುಜುಕಿ ಕಂಪನಿಯ ಫ್ರಾಂಕ್ಸ್‌, ಸದ್ಯಕ್ಕೆ ಕಾಂಪಾಕ್ಟ್‌ ಎಸ್‌ಯುವಿ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿಯನ್ನು ಮುಂಪಕ್ತಿಗೆ ಕರೆದುಕೊಂಡು ಹೋಗುತ್ತಿದೆ. ಬಿಡುಗಡೆಯಾದಗಿನಿಂದ ಹಿಡಿದು ಇಲ್ಲಿಯವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರಿಗೆ ಇದೀಗ ಮಾರಾಟವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಹೊಸ ಆಫರ್‌ ಅನ್ನು ನೀಡುತ್ತಿದೆ. ಇಂದಿನ ಲೇಖನದಲ್ಲಿ ಮಾರುತಿ ಸುಜುಕಿ ಈ ಕಾರಿಗೆ ನೀಡುತ್ತಿರುವ ಆಫರ್‌ ಮತ್ತು ಇತರ ವಿಷಯಗಳ ಕುರಿತಾಗಿ ನೋಡಲಿದ್ದು, ಇದರ ಕುರಿತಾಗಿನ ಸಂಪೂರ್ಣ ಮಾಹಿತಿಗಾಗಿ ನೀವು ಈ ಲೇಖನವನ್ನು ಕೊನೆಯವರೆಗೆ ಓದಿ, ಮತ್ತು ಇತರರಿಗೆ ಶೇರ್‌ ಮಾಡಿ.

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿಯು ಹೊಸ ಫ್ರಾಂಕ್ಸ್‌ ಕಾರಿನ ಬೆಲೆಯನ್ನು ಕಡಿತಗೊಳಿಸಿದೆ. ಇದೀಗ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್‌ ಕಾರಿನ ಬೆಲೆ ಸುಮಾರು ೫೦೦೦ ರೂಗಳಷ್ಟು ಕಡಿಮೆಯಾಗಿದ್ದು, ಇದು ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಫ್ರಾಂಕ್ಸ್ ಕಾರು ಮಾದರಿಯ ಆಟೋಮ್ಯಾಟಿಕ್‌ ವೇರಿಯಂಟ್‌ಗೆ ಇದೀಗ ಈ ೫ ಸಾವಿರ ರೂ ಕಡಿಮೆಯಾಗಿದೆ.

Maruti Suzuki Fronx Gets Now Cheaper Than Previous More Details

ಕಳೆದ ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕಂಪನಿ 'ಫ್ರಾಂಕ್ಸ್' ಎಸ್‌ಯುವಿಯನ್ನು (Maruti Suzuki Fronx) ಪ್ರದರ್ಶಿಸಿ, ಅಂದಿನಿಂದಲೇ ಬುಕಿಂಗ್‌ ಪ್ರಾರಂಭಿಸಿತ್ತು. ಇದೀಗ ಅಧಿಕೃತವಾಗಿ ದೇಶೀಯ ಮಾರುಕಟ್ಟೆಗೆ ರೂ.7.46 ಲಕ್ಷ ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಗೊಳಿಸಿದ್ದು, ನೆಕ್ಸಾ ಡೀಲರ್ ಶಿಪ್ ಮೂಲಕ ಮಾರಾಟ ಮಾಡಲಾಗುತ್ತದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.2 ಲೀಟರ್ ಕೆ ಸೀರಿಯಸ್ ಡುಯೆಲ್ ಜೆಟ್ ಪೆಟ್ರೋಲ್ ಎಂಜಿನ್ 89.7 PS ಗರಿಷ್ಠ ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

Maruti Suzuki Fronx Gets Now Cheaper Than Previous More Details

ಮತ್ತೊಂದು ಎಂಜಿನ್ ಬಗ್ಗೆ ಹೇಳುವುದಾದರೆ, ಫ್ರಾಂಕ್ಸ್ ಎಸ್‌ಯುವಿಯ 1.0 ಲೀಟರ್ ಕೆ ಸೀರಿಯಸ್ ಟರ್ಬೋ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್, 100 PS ಗರಿಷ್ಠ ಪವರ್ ಹಾಗೂ 147.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ ಮೈಲೇಜ್ ಬಗ್ಗೆ ಮಾತನಾನಾಡುವುದಾದರೆ, 1.2 ಲೀಟರ್ ಎಂಜಿನ್, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 21.79 km/l ಹಾಗೂ ಆಟೋಮೆಟಿಕ್ ಟ್ರಾನ್ಸ್ಮಿಷನ್ ನಲ್ಲಿ 22.89 km/l ಮೈಲೇಜ್ ನೀಡಲಿದೆ. 1.0 ಲೀಟರ್, 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ 21.50 km/l ಹಾಗೂ 6 ಸ್ವೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ ನಲ್ಲಿ 20.01 km/l ಇಂಧನ ದಕ್ಷತೆಯನ್ನು ಹೊಂದಿದೆ.

ನೂತನ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 9.0 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅರ್ಕಾಮಿಸ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕನೆಕ್ಟ್ದ್ ಕಾರ್ ಟೆಕ್ನಾಲಜಿ, ಆಟೋ ಕ್ಲೈಮೇಟ್ ಕಂಟ್ರೋಲ್ ಹಾಗೂ ಟೈಪ್ ಸಿ ಚಾರ್ಜರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 4, 2024, 8:30 [IST]
English summary
Maruti suzuki fronx gets now cheaper than previous more details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+