ಮಾರುತಿ ಪ್ರೀಮಿಯಂ ಕಾರಿಗೆ ಫುಲ್ ಡಿಮ್ಯಾಂಡ್: 7.52 ಲಕ್ಷ ಬೆಲೆ, 28.51 ಕಿಮೀ ಮೈಲೇಜ್!

ಭಾರತೀಯ ಕಾರು ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿ ಮುನ್ನುಗ್ಗುತ್ತಿರುವ ಮಾರುತಿ ಸುಜುಕಿ, ಗ್ರಾಹಕರಿಗೆ ಅಗ್ಗದ ಬೆಲೆಗೆ ತನ್ನ ಹಲವು ಕಾರುಗಳನ್ನು ನೀಡುತ್ತಿದೆ. ಈ ಪಟ್ಟಿಯಲ್ಲಿ ಪ್ರೀಮಿಯಂ ಕಾರುಗಳು ಕೂಡ ಇವೆ, ಅದರಲ್ಲಿ ಮೊದಲ ಕಾರೆಂದರೆ ಮಾರುತಿ ಸುಜುಕಿ ಫ್ರಾಂಕ್ಸ್' ಈ ಕಾರು ಉತ್ತಮ ಮಾರಾಟದೊಂದಿಗೆ ದೇಶದಲ್ಲಿ ಜನಪ್ರಿಯತೆ ಪಡೆದಿದೆ. ಇದು ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ. ಹಾಗಾದ್ರೆ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಎಸ್‌ಯುವಿ ಬೆಲೆ, ಫೀಚರ್ಸ್, ಮೈಲೇಜ್ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಬೆಲೆ ಮತ್ತು ವೇರಿಯೆಂಟ್‌ಗಳು: ಫ್ರಾಂಕ್ಸ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 7.52 ಲಕ್ಷದಿಂದ ರೂ. 13.04 ಲಕ್ಷಗಳಾಗಿದೆ. ಸಿಗ್ಮಾ, ಡೆಲ್ಟಾ, ಡೆಲ್ಟಾ + , ಡೆಲ್ಟಾ + (ಒ), ಝೀಟಾ ಮತ್ತು ಆಲ್ಫಾ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಸಿಎನ್‌ಜಿ ಪವರ್‌ಟ್ರೇನ್ ಅನ್ನು ಸಿಗ್ಮಾ ಮತ್ತು ಡೆಲ್ಟಾ ಟ್ರಿಮ್‌ಗಳಲ್ಲಿ ಮಾತ್ರ ನೀಡಲಾಗುತ್ತದೆ.

maruti-suzuki-fronx-mileage-price-features-engine-details

ಎಂಜಿನ್ ಮತ್ತು ಮೈಲೇಜ್: ಮಾರುತಿ ಫ್ರಾಂಕ್ಸ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ, ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬರುವ 1 - ಲೀಟರ್ ಟರ್ಬೊ - ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಅಥವಾ 6 - ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಹೊಂದಿದೆ. ಮತ್ತೊಂದು 1.2-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್, 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ.

ಸಿಎನ್‌ಜಿ ವೇರಿಯೆಂಟ್‌ಗಳು 1.2 - ಲೀಟರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮಾತ್ರ ಹೊಂದಿವೆ. ಇನ್ನು ಮೈಲೇಜ್ ವಿಷಯಕ್ಕೆ ಬಂದರೆ, 1.2-ಲೀಟರ್ ಮ್ಯಾನುವಲ್‌ನಲ್ಲಿ 21.79 ಕಿ.ಮೀ, 1.2-ಲೀಟರ್ ಆಟೋಮ್ಯಾಟಿಕ್‌ನಲ್ಲಿ 22.89 ಕಿ.ಮೀ, 1-ಲೀಟರ್ ಮ್ಯಾನುವಲ್‌ನಲ್ಲಿ 21.5 ಕಿ.ಮೀ, 1-ಲೀಟರ್ ಆಟೋಮ್ಯಾಟಿಕ್‌ನಲ್ಲಿ 20.1 ಕಿ.ಮೀ ಹಾಗೂ 1.2-ಲೀಟರ್ ಸಿಎನ್‌ಜಿನಲ್ಲಿ 28.51 ಕಿಮೀ ಮೈಲೇಜ್ ನೀಡುತ್ತವೆ.

maruti-suzuki-fronx-mileage-price-features-engine-details

ವೈಶಿಷ್ಟ್ಯಗಳು ಮತ್ತು ಸುರಕ್ಷತೆ: ಹೆಡ್ಸ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಹೊಂದಿರುವ 9-ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು ಆಟೋ ಕ್ಲೈಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಸುರಕ್ಷತೆಗಾಗಿ ಆರು ಏರ್‌ ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ ಪಿ), ಹಿಲ್-ಹೋಲ್ಡ್ ಅಸಿಸ್ಟ್‌ಗಳನ್ನು ಪಡೆದಿದೆ.

ಪ್ರತಿಸ್ಪರ್ಧಿಗಳು: ಮಾರುತಿ ಫ್ರಾಂಕ್ಸ್ ಭಾರತದಲ್ಲಿ ಮಹೀಂದ್ರಾ XUV3X0, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ನಿಸ್ಸಾನ್ ಮ್ಯಾಗ್ನೈಟ್, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ರೆನಾಲ್ಟ್ ಕಿಗರ್ ಜೊತೆಗೆ ಸಿಟ್ರೋನ್ ಸಿ3 ಮತ್ತು ಹ್ಯುಂಡೈ ಎಕ್ಸಟರ್ ನಂತಹ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಇದು ಪರ್ಯಾಯವಾಗಿ ಪೈಪೋಟಿ ನೀಡುತ್ತದೆ.

maruti-suzuki-fronx-mileage-price-features-engine-details

ದಾಖಲೆ ನಿರ್ಮಿಸಿದೆ: ಮಾರುತಿ ಫ್ರಾಂಕ್ಸ್ 2023 ರಲ್ಲಿ ಬಿಡುಗಡೆಯಾದಾಗಿನಿಂದ 2 ಲಕ್ಷ ಯುನಿಟ್ ಕಾರುಗಳ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. ಈ ಹಿಂದೆ 1 ಲಕ್ಷ ಯುನಿಟ್ ಕಾರುಗಳು ಕೇವಲ 7 ತಿಂಗಳಲ್ಲಿ ಮಾರಾಟವಾಗಿದ್ದವು. ಸದ್ಯ ಈಗಲೂ ಅದೇ ಬೇಡಿಕೆಯೊಂದಿಗೆ ಈ ಕಾರು ಮುನ್ನುಗ್ಗುತ್ತಿದೆ. ಹೊಸ ಫ್ರಾಂಕ್ಸ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, October 20, 2024, 4:00 [IST]
English summary
Maruti suzuki fronx mileage price features engine details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+