ಜನ ಮುಗಿಬಿದ್ದು ಖರೀದಿಸುತ್ತಿರುವ ಈ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್

ಜನಪ್ರಿಯ ಮತ್ತು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಇಂಡಿಯಾ ಲಿಮಿಟೆಡ್ ಅರೆನಾ ಮತ್ತು ನೆಕ್ಸಾ ಡೀಲರ್‌ಗಳು ಅದರ ಹೆಚ್ಚಿನ ಮಾದರಿಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿವೆ. ಈ ಪ್ರಯೋಜನಗಳನ್ನು ನಗದು ರಿಯಾಯಿತಿಗಳು, ವಿನಿಮಯ ಬೋನಸ್‌ಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳ ರೂಪದಲ್ಲಿ ಪಡೆಯಬಹುದು.

ಮಾರುತಿ ಸುಜುಕಿ ತನ್ನ ಫಾಂಕ್ಸ್ ಎಸ್‍ಯುವಿಯ ಟರ್ಬೊ-ಪೆಟ್ರೋಲ್ ರೂಪಾಂತರಗಳ ಮೇಲೆ ರೂ. 58,000 ವರೆಗಿನ ರಿಯಾಯಿತಿಗಳನ್ನು ನೀಡುತ್ತಿದೆ, ಇದರಲ್ಲಿ ರೂ. 15,000 ನಗದು ರಿಯಾಯಿತಿ, ರೂ. 30,000 ಮೌಲ್ಯದ ವೆಲಾಸಿಟಿ ಎಡಿಷನ್ ಆಕ್ಸೆಸರಿ ಕಿಟ್ ಮತ್ತು ರೂ. 10,000 ಮೌಲ್ಯದ ವಿನಿಮಯ ಬೋನಸ್ ಅನ್ನು ಹೊಂದಿದೆ. ಇನ್ನು ಫ್ರಾಂಕ್ಸ್‌ನ ಟ್ರೋಲ್ ಮತ್ತು ಸಿಎನ್‌ಜಿ ರೂಪಾಂತರಗಳು ಕ್ರಮವಾಗಿ ರೂ.23,000 ಮತ್ತು ರೂ.13,000 ವರೆಗಿನ ಪ್ರಯೋಜನಗಳೊಂದಿಗೆ ಲಭ್ಯವಿದೆ.

Maruti Suzuki Fronx

ಬಲೆನೊ ಆಧಾರಿತ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಕಾರು ಒಂಬತ್ತು ಬಣ್ಣಗಳಲ್ಲಿ ಲಭ್ಯವಿದೆ. ಇವುಗಳು ಆರ್ಕ್ಟಿಕ್ ವೈಟ್, ಗ್ರ್ಯಾಂಡ್ಯೂರ್ ಗ್ರೇ, ಅರ್ಥನ್ ಬ್ರೌನ್, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಒಪ್ಯುಲೆಂಟ್ ರೆಡ್ ಆಗಿದೆ. ಇನ್ನು ಡ್ಯುಯಲ್-ಟೋನ್ ಆಯ್ಕೆಗಳಲ್ಲಿ ಅರ್ಥನ್ ಬ್ರೌನ್, ಒಪ್ಯುಲೆಂಟ್ ರೆಡ್ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಸೇರಿವೆ. ಇವೆಲ್ಲವೂ ನೀಲಿ ಕಪ್ಪು ರೂಫ್ ಹೊಂದಿದೆ.

ಈ ಮಾರುತಿ ಕಾರು ಸಿಗ್ಮಾ, ಡೆಲ್ಟಾ, ಡೆಲ್ಟಾ+, ಝೀಟಾ ಮತ್ತು ಆಲ್ಫಾ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ಮಾರುತಿ ಫ್ರಾಂಕ್ಸ್ ಎಸ್‍ಯುವಿಯು ಸಿಗ್ಮಾ ರೂಪಾಂತರವು ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ವೀಲ್ ಕವರ್‌ಗಳೊಂದಿಗೆ ಸ್ಟೀಲ್ ವೀಲ್‌ಗಳು, ಕೀಲೆಸ್ ಎಂಟ್ರಿ ಮತ್ತು ಗೋ, ಡ್ಯುಯಲ್-ಟೋನ್ ಇಂಟೀರಿಯರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಫ್ಯಾಬ್ರಿಕ್ ಸೀಟ್ ಅಪ್ಹೋಲ್‌ಸ್ಟರಿ, ಸ್ಟೀರಿಂಗ್‌ಗಾಗಿ ಟಿಲ್ಟ್ ಹೊಂದಾಣಿಕೆ ಮತ್ತು 60:40 ಹಿಂಭಾಗದ ಫೀಚರ್ಸ್ ಗಳೊಂದಿಗೆ ಪ್ಯಾಕ್ ಮಾಡಲಾಗಿದೆ.

Maruti Suzuki Fronx

ಇದರೊಂದಿಗೆ ಇನ್ನು ಸೀಟ್ ಸ್ಪ್ಲಿಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿಯರ್ ಡಿಫಾಗರ್ ಅನ್ನು ಹೊಂದಿದೆ. ಮಾರುತಿ ಫ್ರಾಂಕ್ಸ್ ಆಲ್ಫಾ ಟ್ರಿಮ್ 16-ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಗಳ್ಯ್, ಡ್ಯುಯಲ್-ಟೋನ್ ಬಾಹ್ಯ ಬಣ್ಣಗಳು, 360 ಡಿಗ್ರಿ ಕ್ಯಾಮೆರಾ, HUD ಯುನಿಟ್, ಕ್ರೂಸ್ ಕಂಟ್ರೋಲ್ ಮತ್ತು ಲೆದರ್ ಸುತ್ತುವ ಸ್ಟೀರಿಂಗ್ ವೀಲ್ ಸೇರಿದಂತೆ ಕೆಲವು ವಿಶೇಷ ಫೀಚರ್ಸ್ ಗಳೊಂದಿಗೆ ಬರಲಿದೆ.

ಈ ಮಾರುತಿ ಫ್ರಾಂಕ್ಸ್ ಎಸ್‍ಯುವಿಯಲ್ಲಿ 1.0 ಲೀಟರ್ ಟರ್ಬೊ ಮತ್ತು 1.2 ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 1.2 K12C ಲೀಟರ್ ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ 6,000rpm ನಲ್ಲಿ 88.5bhp ಮತ್ತು 4,400rpm ನಲ್ಲಿ 113Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಜೋಡಿಸಲಾಗಿದೆ.

Maruti Suzuki Fronx

ಈ ಬಲೆನೊ ಆರ್‌ಎಸ್‌ನೊಂದಿಗೆ ಕೊನೆಯದಾಗಿ ಕಂಡ ಟರ್ಬೋಚಾರ್ಜ್ಡ್ 1.0-ಲೀಟರ್ ಬೂಸ್ಟರ್‌ಜೆಟ್ ಎಂಜಿನ್ ಹೆಚ್ಚು ಪವರ್ ಫುಲ್ ಎಂಜಿನ್ ಆಗಿದೆ. ಫ್ರಾಂಕ್ಸ್ ಕಾರಿನಲ್ಲಿ ಈ ಎಂಜಿನ್ 5,500rpm ನಲ್ಲಿ 98.7bhp ಮತ್ತು 2,000 ರಿಂದ 4,500rpm ವರೆಗೆ 147.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೂಸ್ಟರ್‌ಜೆಟ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಆಗಿ ನೀಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Tuesday, May 14, 2024, 11:44 [IST]
English summary
Maruti suzuki fronx suv discounts in may 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+