3 ಹೊಸ ಮಾರುತಿ ಸುಜುಕಿ SUV ಗಳು ಬಿಡುಗಡೆಗೆ ಸಜ್ಜಾಗುತ್ತಿವೆ! ಮೈಕ್ರೋ ಎಸ್‌ಯುವಿ, 7-ಸೀಟರ್, ಇವಿ
ಮುಂಬರುವ ಮಾರುತಿ ಸುಜುಕಿ ಎಸ್‌ಯುವಿಗಳಲ್ಲಿ ಮೂರು ಮಾದರಿಗಳ ಕುರಿತು ಒಂದಷ್ಟು ಮಾಹಿತಿ ಹೊರಬಿದ್ದಿದೆ. ವಿವಿಧ ವಿಭಾಗಗಳಲ್ಲಿ ಮೂರು ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದರೊಂದಿಗೆ ದೊಡ್ಡ ಗ್ರಾಹಕ ಸಮುದಾಯವನ್ನು ಹೊಂದಲು ಮಾರುತಿ ಸಜ್ಜಾಗುತ್ತಿದೆ. ಹಾಗಾದ್ರೆ ಮಾರುತಿ ಸುಜುಕಿಯ SUV ಪೋರ್ಟ್‌ಫೋಲಿಯೊಗೆ ಮುಂಬರುವ ಸೇರ್ಪಡೆಗಳು ಯಾವುವು?
1. ಮಾರುತಿ ಸುಜುಕಿ eVX: 2024ರ ಮೊದಲಾರ್ಧದಲ್ಲಿ ಮಾರುತಿ ಸುಜುಕಿ eVX ಉತ್ಪಾದಯನ್ನು ಪ್ರಾರಂಭಿಸಲು ಕಂಪನಿ ಸಿದ್ಧವಾಗುತ್ತಿದೆ. ಇದನ್ನು ಆರಂಭದಲ್ಲಿ 2023 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಈ ಐದು ಆಸನಗಳ ಎಲೆಕ್ಟ್ರಿಕ್ ವಾಹನವು ಮುಂಬರುವ ಮಾದರಿಗಳಾದ ಟಾಟಾ ಕರ್ವ್ವ್ ಮತ್ತು ಹ್ಯುಂಡೈ ಕ್ರೆಟಾ ಇವಿಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ.

ಈ ಮಾರುತಿ ಸುಜುಕಿ eVX ಎರಡು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು, ಎಲೆಕ್ಟ್ರಿಕ್ SUV ತನ್ನ ಉನ್ನತ - ಮಟ್ಟದ ವೇರಿಯೆಂಟ್ 500 ಕಿ.ಮೀ ಮೀರಿದ ಕ್ಲೈಮ್ ಡ್ರೈವಿಂಗ್ ರೇಂಜ್ ನೀಡುವ ಸಾಧ್ಯತೆ ಇದೆ. ಇಂಟೀರಿಯರ್ ಸುಧಾರಿತ ವೈಶಿಷ್ಟ್ಯಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ, ಬೆಲೆಯು ರೂ. 15 ಲಕ್ಷ (ಎಕ್ಸ್ ಶೋ ರೂಂ) ಇರಬಹುದು ಎಂದು ಅಂದಾಜಿಸಲಾಗಿದೆ.
2. ಮಾರುತಿ ಸುಜುಕಿ ಗ್ರಾಂಡ್ ವಿಟಾರಾ 7-ಸೀಟರ್: ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮುಂಬರುವ ಮೂರು-ಸಾಲಿನ ವೇರಿಯೆಂಟ್‌ಗೆ ಸದ್ಯ ಸಂಕೇತನಾಮವಾಗಿ Y17 ಎಂದು ನೀಡಲಾಗಿದೆ. ಇದು ಆರು ಮತ್ತು ಏಳು-ಆಸನಗಳ ಆಯ್ಕೆಗಳನ್ನು ನೀಡುತ್ತದೆಯೇ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಬಿಡುಗಡೆಯನ್ನು 2025 ರಲ್ಲಿ ಮಾಡುವುದು ಬಹುತೇಕ ಖಚಿತಪಡಿಸಲಾಗಿದೆ.

ಇದು 1.5L ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದರ ಬೆಲೆ ರೂ.15 ಲಕ್ಷ (ಎಕ್ಸ್ ಶೋ ರೂಂ) ಗಳನ್ನು ಮೀರುವ ನಿರೀಕ್ಷೆಯಿದೆ. ಇದರ ಪ್ರತಿಸ್ಪರ್ಧಿಗಳು ಟಾಟಾ ಸಫಾರಿ, MG ಹೆಕ್ಟರ್ ಪ್ಲಸ್, ಸಿಟ್ರನ್ C3 ಏರ್‌ಕ್ರಾಸ್ 7 - ಸೀಟರ್, ಮಹೀಂದ್ರಾ XUV700 ಮತ್ತು ಹ್ಯುಂಡೈ ಅಲ್ಕಾಜರ್ ಅನ್ನು ಮಾರುಕಟ್ಟೆಯಲ್ಲಿ ಎದುರಿಸಲಿದೆ.
3. ಮಾರುತಿ ಸುಜುಕಿ ಮೈಕ್ರೋ SUV: ಮಾರುತಿ ಸುಜುಕಿಯ ಮೈಕ್ರೋ SUV ಅನ್ನು 2026 ಅಥವಾ 2027 ಕ್ಕೆ ನಿಗದಿಪಡಿಸಲಾಗಿದೆ. ಇದು 1.2L Z ಸಿರೀಸ್ ಪೆಟ್ರೋಲ್ ಎಂಜಿನ್ ಹೊಂದಬಹುದು ಎಂದು ಊಹಿಸಲಾಗಿದೆ. ಇದೇ ಎಂಜಿನ್ ಮುಂಬರುವ ಹೊಸ ಸ್ವಿಫ್ಟ್‌ನಲ್ಲೂ ಬಳಕೆ ಮಾಡಲಾಗಿದೆ. ಇವುಗಳ ಜೊತೆಗೆ 1.0L ಟರ್ಬೊ ಬೂಸ್ಟರ್ ಜೆಟ್ ಸೇರ್ಪಡೆಯಾಗಲಿದೆ. ಇದು ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ನಂತಹ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲಿದೆ.

ಮಾರುತಿ ಸುಜುಕಿ ಈ ಮೈಕ್ರೊ ಎಸ್‌ಯುವಿಯನ್ನು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಒದಗಿಸುವ ಸಾಧ್ಯತೆಯಿದೆ. ಅದರ ಟಾಪ್-ಸ್ಪೆಕ್ ಟ್ರಿಮ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಒಂಬತ್ತು - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೊ ಕ್ಲೈಮೇಟ್ ಕಂಟ್ರೋಲ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು ಕನೆಕ್ಟೆಡ್ ಕಾರ್ ಟೆಕ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ನೀಡುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications