ಮೊನ್ನೆಯಷ್ಟೆ ಬಿಡುಗಡೆಯಾದ ಮಾರುತಿ ಹೈಬ್ರಿಡ್ ಕಾರಿನ ವಿಶೇಷತೆಗಳು: 27 ಕಿ.ಮೀ ಮೈಲೇಜ್!

ಹಬ್ಬದ ಪ್ರಯುಕ್ತ ಮಾರುತಿ ಸುಜುಕಿ ತನ್ನ ಗ್ರ್ಯಾಂಡ್ ವಿಟಾರಾದ ಹೊಸ ಡೊಮಿನಿಯನ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಲಿಮಿಟೆಡ್ ಎಡಿಷನ್ ಕಾರು ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಅಂದರೆ ಆಲ್ಫಾ, ಝೀಟಾ ಮತ್ತು ಡೆಲ್ಟಾ ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಹೆಚ್ಚುವರಿ ಅಕ್ಸೆಸೊರಿಗಳೊಂದಿಗೆ ಬರುವ ಕಾರಣ ಬೆಲೆ ಕೂಡ ಹೆಚ್ಚಾಗಿದ್ದು, ಡೊಮಿನಿಯನ್ ಎಡಿಷನ್‌ನ ಡೆಲ್ಟಾ ರೂ.48,599, ಝೀಟಾ ರೂ.49,999 ಹಾಗೂ ಆಲ್ಫಾ ಟ್ರಿಮ್ ರೂ.52,699 ಬೆಲೆ ಏರಿಕೆಯನ್ನು ಪಡೆದಿವೆ.

ಪವರ್ ಟ್ರೇನ್: ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್ 1.5-ಲೀಟರ್ ಕೆ 15ಸಿ ಪೆಟ್ರೋಲ್ ಎಂಜಿನ್ (ಮೈಲ್ಡ್-ಹೈಬ್ರಿಡ್), 102 ಬಿಹೆಚ್ ಪವರ್ ಮತ್ತು 137 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್ ಆಯ್ಕೆಯನ್ನು ಸಹ ನೀಡಲಾಗಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋ ಗೇರ್ ಬಾಕ್ಸ್ ಆಯ್ಕೆ ಕೂಡ ಇದೆ.

maruti-suzuki-grand-vitara-dominion-limited-edition-price-features-details

ಹೊಸ ಮಾರುತಿ ಗ್ರಾಂಡ್‌ ವಿಟಾರ ಡೊಮಿನಿಯನ್ ಎಡಿಷನ್‌ನ ಸಿಎನ್‌ಜಿ ವೇರಿಯೆಂಟ್ ಬಗ್ಗೆ ಹೇಳುವುದಾದ್ರೆ, ಇದು 87 ಬಿಹೆಚ್ ಪವರ್ ಮತ್ತು 121.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಪವರ್ ಟ್ರೇನ್‌ನಲ್ಲಿ ಖರೀದಿದಾರರಿಗೆ 6 - ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಮಾತ್ರ ಲಭ್ಯವಿದೆ.

ಹೊಸ ಸೇರ್ಪಡೆಗಳು: ಒಳಭಾಗದಲ್ಲಿ, ಡೊಮಿನಿಯನ್ ಆವೃತ್ತಿಯು ಇಂಟೀರಿಯರ್ ಸ್ಟೈಲಿಂಗ್ ಕಿಟ್, ಹೆಚ್ಚು ಪ್ರೀಮಿಯಂ ಕ್ಯಾಬಿನ್ ಸೇರಿದಂತೆ ಡ್ಯುಯಲ್-ಟೋನ್ ಸೀಟ್ ಕವರ್‌ಗಳು, 3ಡಿ ಮ್ಯಾಟ್‌ಗಳು, ಲಿಮಿಟೆಡ್ ಎಡಿಷನ್ ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್ ಕಾರು, ಅಕ್ಟೋಬರ್ ತಿಂಗಳಲ್ಲಿ ಮಾತ್ರ ಎಲ್ಲಾ ನೆಕ್ಸಾ ಶೋರೂಂಗಳಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

maruti-suzuki-grand-vitara-dominion-limited-edition-price-features-details

ಡೊಮಿನಿಯನ್ ಆವೃತ್ತಿಯು ಕಾಂಪ್ಲಿಮೆಂಟರಿ ಅಕ್ಸೆಸೊರಿ ಕಿಟ್‌ಗಳ ಮೂಲಕ ಸಾಮಾನ್ಯ ಮಾದರಿಗಿಂತ ಕೆಲವು ಬಾಹ್ಯ ಮತ್ತು ಆಂತರಿಕ ವರ್ಧನೆಗಳನ್ನು ಪಡೆದಿದೆ. ಬಾಹ್ಯ ನವೀಕರಣಗಳಲ್ಲಿ ಪ್ರೀಮಿಯಂ ರಿಯರ್ ಸ್ಕಿಡ್ ಪ್ಲೇಟ್‌ಗಳು, ಬಾಡಿ ಸೈಡ್ ಮೌಲ್ಡಿಂಗ್, ಕಾರ್‌ಕೇರ್ ಕಿಟ್ ಜೊತೆಗೆ ಸೈಡ್ ಸ್ಟೆಪ್ಸ್ ಸೇರಿದಂತೆ ಡೋರ್ ವೈಸರ್‌ಗಳಂತಹ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ವೈಶಿಷ್ಟ್ಯಗಳ ವಿಷಯದಲ್ಲಿ, ಇದು 9-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, 6-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಮೌಂಟ್‌ಗಳನ್ನು ಒಳಗೊಂಡಿದೆ.

maruti-suzuki-grand-vitara-dominion-limited-edition-price-features-details

ಮೈಲೇಜ್: ಮಾರುತಿ ಗ್ರಾಂಡ್ ವಿಟರಾ ಪೆಟ್ರೋಲ್ ಮ್ಯಾನುವಲ್ 21.11 ಕೆಎಂಪಿಎಲ್, ಪೆಟ್ರೋಲ್ ಆಟೋಮ್ಯಾಟಿಕ್ 20.58 ಕೆಎಂಪಿಎಲ್, ಪೆಟ್ರೋಲ್ ಆಲ್-ವೀಲ್ ಡ್ರೈವ್ ಕೆಎಂಪಿಎಲ್, CNG ವೆರಿಯೆಂಟ್‌ನಲ್ಲಿ 26.6 ಕಿಮೀ/ಕೆ.ಜಿ ಹಾಗೂ ಪೆಟ್ರೋಲ್ ಹೈಬ್ರಿಡ್ ವೇರಿಯೆಂಟ್‌ನಲ್ಲಿ 27.97 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, October 9, 2024, 14:35 [IST]
English summary
Maruti suzuki grand vitara dominion limited edition price features details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+