13 ಲಕ್ಷದ ಈ ಮಾರುತಿ ಕಾರ್‌ನಲ್ಲಿದೆ ಭರ್ಜರಿ ಫೀಚರ್ಸ್: ಕಂಪನಿಯಿಂದ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್!
ಭಾರತದಲ್ಲಿ ಮಾರುತಿ ಸುಜುಕಿ ಮಾರಾಟ ಮಾಡುತ್ತಿರುವ ಎಸ್‌ಯುವಿಗಳಲ್ಲಿ ಪ್ರಮುಖವಾದುದು ಗ್ರ್ಯಾಂಡ್ ವಿಟಾರಾ. ಹಲವು ವರ್ಷಗಳ ಹಿಂದೆ ಮಾರುತಿ ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿದ್ದು, ಆ ನಂತರದಲ್ಲಿ ಅದನ್ನು ನಿಲ್ಲಿಸಲಾಗಿತ್ತು. ಇದೀಗ ಹಲವು ಬದಲಾವಣೆಗಳೊಂದಿಗೆ ಮಾರುಕಟ್ಟೆಯಲ್ಲಿರುವ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಇದೀಗ ಹೊಸ ಗ್ರ್ಯಾಂಡ್ ವಿಟಾರಾ ಕಾರನ್ನು ಕೊಳ್ಳುವವರಿಗೆ ಮಾರುತಿ ಸುಜುಕಿ ಭರ್ಜರಿ ಆಫರ್ ನೀಡುತ್ತಿದ್ದು, ಇಂದು ಆ ಆಫರ್ ಕುರಿತಾಗಿ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ.
ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ವೇರಿಯಂಟ್ ಅನ್ನು ಕೊಳ್ಳುವವರಿಗೆ ಮಾರುತಿ ಸುಜುಕಿ ಇದೀಗ 74,000 ರೂಗಳ ವರೆಗೆ ಡಿಸ್ಕೌಂಟ್ ನೀಡುತ್ತಿದ್ದು, ಇದರಲ್ಲಿ 20,000 ಕ್ಯಾಶ್ ಡಿಸ್ಕೌಂಟ್ ಮತ್ತು 50,000 ರೂ ಎಕ್ಸ್‌ಚೇಂಜ್ ಬೋನಸ್ ಸಿಗಲಿದೆ. ಇದರ ಜೊತೆಗೆ ರೂ 4,000 ಕಾರ್ಪೋರೇಟ್ ಬೋನಸ್ ಸಹ ಸಿಗಲಿದೆ.

ಇದರ ಜೊತೆಗೆ ಮಾರುತಿ ಸುಜುಕಿ ಮೂರು ವರ್ಷಗಳ ವಿಸ್ತರಿತ ವಾರಂಟಿಯನ್ನು ಸಹ ಒದಗಿಸುತ್ತದೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರಿನ ಬೇಸ್ ಮಾಡೆಲ್ (ಆರಂಭಿಕ ಆವೃತ್ತಿ) ಪೆಟ್ರೋಲ್ ಚಾಲಿತ ಸಿಗ್ಮಾ ರೂ.13.71 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಇದು ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿಯೂ ಹೊರಹೊಮ್ಮಿದೆ.
ಇನ್ನುಳಿದ ಪೆಟ್ರೋಲ್ ರೂಪಾಂತರಗಳಾದ ಡೆಲ್ಟಾ ರೂ.15.20 ಲಕ್ಷ, ಡೆಲ್ಟಾ ಎಟಿ ರೂ.16.93 ಲಕ್ಷ, ಜಿಟಾ ರೂ.17.44 ಲಕ್ಷ ಹಾಗೂ ಆಲ್ಫಾ ರೂ.19.29 ಲಕ್ಷ ಆನ್-ರೋಡ್ ದರವನ್ನು ಪಡೆದಿದೆ. ಹಾಗೆಯೇ ಆಲ್ಫಾ ಡಿಟಿ ರೂ.19.49 ಲಕ್ಷ, ಆಲ್ಫಾ ಎಟಿ ರೂ.21.02 ಲಕ್ಷ, ಆಲ್ಫಾ ಎಡಬ್ಲ್ಯೂಡಿ ರೂ.21.14 ಲಕ್ಷ ಬೆಲೆ ಬಾಳುತ್ತದೆ.
ಇಷ್ಟು ಮಾತ್ರವಲ್ಲದೇ ಇದರ ಆಲ್ಫಾ ಎಟಿ ಡಿಟಿ ರೂ.21.22 ಲಕ್ಷ, ಆಲ್ಫಾ ಎಡಬ್ಲ್ಯೂಡಿ ಡಿಟಿ ರೂ.21.34 ಲಕ್ಷ, ಜಿಟಾ ಪ್ಲಸ್ ಹೈಬ್ರಿಡ್ ಸಿವಿಟಿ ರೂ.22.90 ಲಕ್ಷ ಮತ್ತು ಜಿಟಾ ಪ್ಲಸ್ ಹೈಬ್ರಿಡ್ ಸಿವಿಟಿ ಡಿಟಿ ರೂ.23.10 ಲಕ್ಷ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ.
ಈ ಕಾರು 1.5-ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್ ಹಾಗೂ ಇ-ಸಿವಿಟಿ ಗೇರ್‌ಬಾಕ್ಸ್ ನೊಂದಿಗೂ ದೊರೆಯುತ್ತದೆ. ಪೆಟ್ರೋಲ್ ರೂಪಾಂತರಗಳು 19.38 - 27.97 ಕೆಎಂಪಿಎಲ್, ಸಿಎನ್‌ಜಿ ಮಾದರಿಗಳು 26.6 ಕೆಎಂ/ಕೆಜಿ ಮೈಲೇಜ್ ನೀಡುತ್ತವೆ.
ನೂತನ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ FWD (ಫ್ರಂಟ್ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯು ಸುರಕ್ಷತೆಗೂ ಹೆಸರುವಾಸಿಯಾಗಿದ್ದು, 6 ಏರ್‌ಬ್ಯಾಗ್, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾವನ್ನು ಪಡೆದಿದೆ. ನಿಮ್ಮ ಗಮನಕ್ಕೆ.. ಈ ಕಾರಿನ ಆನ್-ರೋಡ್ ಬೆಲೆಗಳು ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಾಗಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications