ಸೇಫ್ಟಿಯಲ್ಲಿ ಟಾಟಾಗೆ ಪೈಪೋಟಿ ನೀಡಲಿದೆ ಈ ಮಾರುತಿ ಕಾರು: ADAS ತಂತ್ರಜ್ಞಾನದೊಂದಿಗೆ ಮತ್ತಷ್ಟು ಹೈಟೆಕ್!
ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಎಸ್‍ಯುವಿಗಳಿಗೆ ಭಾರೀ ಬೇಡಿಕೆಯನ್ನು ಹೊಂದಿರುವುದರಿಂದ, ಎಸ್‍ಯುವಿಯು ವಿಭಾಗವು ಅತಿಯಾದ ಸ್ಪರ್ಧೆಯಿಂದ ಕೂಡಿದೆ. ಎಸ್‍ಯುವಿ ವಿಭಾಗದ ಮಿಡ್ ಸೈಜ್ ಎಸ್‍ಯುವಿಗಳ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ ಹಲವು ವರ್ಷಗಳಿಂದ ಪಾರುಪತ್ಯ ಸಾಧಿಸುತ್ತಿತ್ತು. ಬಳಿಕ ಬಂದ ಮಾರುತಿ ಗ್ರ್ಯಾಂಡ್ ವಿಟಾರಾ (Maruti Grand Vitara) ಮಾರುಕಟ್ಟೆಯಲ್ಲಿ ಸುಂಟರಗಾಳಿಯನ್ನು ಎಬ್ಬಿಸಿದೆ.
ಮಾರುತಿ ಸುಜುಕಿ ಗ್ರಾಂಡ್ ವಿಟಾರಾ (Maruti Suzuki Grand Vitara) ಅತ್ಯುತ್ತಮ ಪರ್ಫಾಮೆನ್ಸ್ ಮತ್ತು ಮೈಲೇಜ್ ನಿಂದ ಹೆಚ್ಚು ಖ್ಯಾತಿಗಳಿಸಿದೆ. ಈ ಮಾರುತಿ ಎಸ್‍ಯುವಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ತಂತ್ರಜ್ಞಾನವನ್ನು ಅಳವಡಿಸಲು ಮಾರುತಿ ಸುಜುಕಿ ಯೋಜಿಸಿದೆ ಎಂದು ವರದಿಯಾಗಿದೆ. ಗ್ರ್ಯಾಂಡ್ ವಿಟಾರಾ ಈಗಾಗಲೇ ವೈಶಿಷ್ಟ್ಯಪೂರ್ಣ ವಾಹನವಾಗಿದೆ. ವರದಿಗಳ ಪ್ರಕಾರ, ಮಾರುತಿ ಸುಜುಕಿ ಶೀಘ್ರದಲ್ಲೇ ADAS ಅನ್ನು ಗ್ರಾಂಡ್ ವಿಟಾರಾ ಎಸ್‍ಯುವಿಯಲ್ಲಿ ಸಂಯೋಜಿಸಲಿದೆ.

ಈ ತಂತ್ರಜ್ಞಾನವು ಕ್ಯಾಮೆರಾಗಳು ಮತ್ತು ಸೆನ್ಸರ್ ಗಳ ಮೂಲಕ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ADAS ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಟ್ರಾಫಿಕ್ ಸಿಗ್ನಲ್ ಪತ್ತೆ ಮತ್ತು ವಾರ್ನಿಂಗ್ ಮತ್ತು ಲೇನ್ ಕಾರ್ಸಿಂಗ್ ವಾರ್ನಿಂಗ್ ಗಳನ್ನು ಒಳಗೊಂಡಿದೆ. ಹೆಚ್ಚುವರಿ ADAS ತಂತ್ರಜ್ಞಾನದಲ್ಲಿ ಪಾರ್ಕ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಅಸಿಸ್ಟ್ ಮತ್ತು ಹಿಂಬದಿ ಕೊಲಿಷನ್ ವಾರ್ನಿಂಗ್ ಸೇರಿವೆ.
ಕಾರ್ಯಗತಗೊಂಡರೆ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಾರುತಿ ಸುಜುಕಿಯ ಮೊದಲ ಮಾದರಿಯ ADAS ತಂತ್ರಜ್ಞಾನವನ್ನು ಹೊಂದಿದೆ. ADAS ಜೊತೆಗೆ ಗ್ರ್ಯಾಂಡ್ ವಿಟಾರಾ ಈ ವರ್ಷದ ಅಂತ್ಯದ ವೇಳೆಗೆ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಕಳೆದ ವರ್ಷ ADAS ಅನ್ನು ಗ್ರ್ಯಾಂಡ್ ವಿಟಾರಾಗೆ ಸಂಯೋಜಿಸುವ ಕೆಲಸವನ್ನು ಪ್ರಾರಂಭಿಸಿತು. ಈ ಸೇರ್ಪಡೆಯು ಕಾರಿನ ಸುರಕ್ಷತಾ ಮಾನದಂಡಗಳನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

ಪ್ರಸ್ತುತ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಸೆಂಟ್ರಲ್ ಲಾಕಿಂಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), ಹಿಲ್ ಅಸಿಸ್ಟ್, ಐಸೊಫಿಕ್ಸ್ ಚೈಲ್ಡ್ ಸೀಟ್‌ಗಳು, ರಿವರ್ಸ್ ಕ್ಯಾಮೆರಾ ಮತ್ತು ಟೈರ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಈ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಂಟ್ರಿ ಬಳಿಕ ಎಲ್ಲಾವೂ ಬದಲಾಗಿದೆ. ಮಿಡ್ ಸೈಜ್ ಎಸ್‍ಯುವಿಯು ಬಿಡುಗಡೆ ಮಾಡುವ ಮೂಲಕ ದೇಶದ ಜನರನ್ನು ದಿಗ್ಭ್ರಮೆಗೊಳಿಸಿತು. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿರುವುದರಿಂದ ಇದರ ಕಾಯುವ ಅವಧಿ ಕೂಡ ಹೆಚ್ಚಾಗಿದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್ ಮತ್ತು ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿಗಳೊಂದಿಗೆ ಪೈಪೋಟಿ ನೀಡುತ್ತದೆ.

ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು 4,345 ಎಂಎಂ ಉದ್ದ, 1,795 ಎಂಎಂ ಅಗಲ ಮತ್ತು 1,645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್‌ಬೇಸ್ ಹೊಂದಿದೆ. ಇದು ಹೈರೈಡರ್‌ನೊಂದಿಗೆ ಕೆಲವು ಬಾಹ್ಯ ವಿಶೇಷಣಗಳನ್ನು ಹಂಚಿಕೊಂಡದೆ. ಹೈರೈಡರ್‌ನಿಂದ ಗ್ರಾಂಡ್ ವಿಟಾರಾ ದೊಡ್ಡ ವ್ಯತ್ಯಾಸವೆಂದರೆ ಅದರ ಮುಂಭಾಗದ ವಿನ್ಯಾಸವಾಗಿದೆ. ಈ ಹೊಸ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯು ಎರಡು ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯವಿದೆ.
ಈ ಎಸ್‍ಯುವಿಯು 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು 1.5-ಲೀಟರ್ TNGA ಪೆಟ್ರೋಲ್ ಮೋಟರ್ ಸ್ಟ್ರಾಂಗ್-ಹೈಬ್ರಿಡ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರಲ್ಲಿ 1.5-ಲೀಟರ್ K15C ಪೆಟ್ರೋಲ್ ಎಂಜಿನ್ ಮೈಲ್ಡ್-ಹೈಬ್ರಿಡ್ ಸಿಸ್ಟಂ 102 ಬಿಹೆಚ್‍ಪಿ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಯುನಿಟ್ ಅನ್ನು ನೀಡಿದೆ.
ಇನ್ನು ಈ ಮಾರುತಿ ಎಸ್‍ಯುವಿಯ ಎಡಬ್ಲ್ಯೂಡಿ ಸಿಸ್ಟಂ ಅನ್ನು ಮ್ಯಾನುವಲ್ ರೂಪಾಂತರಗಳೊಂದಿಗೆ ಮಾತ್ರ ನೀಡಲಾಗುತ್ತಿದೆ. ಇಂಟೆಲಿಜೆಂಟ್ ಎಲೆಕ್ಟ್ರಿಕ್ ಹೈಬ್ರಿಡ್ ಸಿಸ್ಟಮ್ ಎಂದೂ ಕರೆಯಲ್ಪಡುವ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಯು ಐಸಿಇ ಯುನಿಟ್ ಮೂಲಕ ಸಂಯೋಜಿತವಾಗಿ 115 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದನ್ನು ಇ-ಸಿವಿಟಿ ಯೊಂದಿಗೆ ಮಾತ್ರ ಜೋಡಿಸಲಾಗಿದೆ. ಈ ಪವರ್‌ಟ್ರೇನ್‌ಗಾಗಿ 27.97 ಕಿ.ಮೀ ಮೈಲೇಜ್ ಅನ್ನು ಒದಗಿಸುತ್ತದೆ.


Click it and Unblock the Notifications