ಮಾರುಕಟ್ಟೆ ಶೇಕ್: ಬಡವರಿಗಾಗಿ ಬರುತ್ತಿದೆ ಹೊಸ ಪುಟ್ಟ ಮಾರುತಿ ಎಲೆಕ್ಟ್ರಿಕ್ ಕಾರು!
ಆಟೋ ಜಗತ್ತು 2025ರ ಆಟೋ ಎಕ್ಸ್‌ಪೋವನ್ನು ಬಹಳ ಕಾತರದಿಂದ ಎದುರು ನೋಡುತ್ತಿದೆ. 2025ರ ಆಟೋ ಎಕ್ಸ್‌ಪೋ ಜನವರಿ ತಿಂಗಳಿನಲ್ಲಿ ನಡೆಯಲಿದೆ. ಪ್ರತಿ ಬಾರಿ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಕೆಲವು ಪ್ರಮುಖ ಬಿಡುಗಡೆಗಳನ್ನು ಮಾಡುತ್ತದೆ. ಈ ಭಾರೀ ಮಾರುತಿ ಸುಜುಕಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಿದೆ. 2023ರ ಆಟೋ ಎಕ್ಸ್‌ಪೋದಲ್ಲಿ eVX ಕಾನ್ಸೆಪ್ಟ್ ರೂಪದಲ್ಲಿ ಕಾಣಿಸಿಕೊಂಡಿರುವ ಈ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಉತ್ಪಾದನಾ ರೂಪದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಮಾರುತಿಯು ಇ-ವಿಟಾರದ ಹೆಸರಿನ ಬಳಿಕ ಮತ್ತೊಂದು ಇವಿ ಅನ್ನು ತರಲಿದೆ.
ಮಾರುತಿ ಸುಜುಕಿಯು (Maruti Suzuki) 2025ರ ಆಟೋ ಎಕ್ಸ್‌ಪೋದಲ್ಲಿ ಹೊಸ ಹಸ್ಲರ್ (Hustler) ಇವಿಯನ್ನು ಎಂಬ ಊಹಾಪೋಹಗಳಿವೆ. ಕೆಲವು ತಿಂಗಳ ಹಿಂದೆ, ಭಾರತೀಯ ರಸ್ತೆಗಳಲ್ಲಿ ಹಸ್ಲರ್ ಎಲೆಕ್ಟ್ರಿಕ್ ಕಾರ್ ಸ್ಪಾಟ್ ಟೆಸ್ಟ್ ನಡೆಸುವುದು ಕಾಣಿಸಿಕೊಂಡಿದೆ. ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪರಿಚಯಿಸುವುದನ್ನು ವಿಳಂಬಗೊಳಿಸಿದೆ. ಇನ್ನು ಮಾರುತಿ ಸುಜುಕಿ ಕಂಪನಿಯು ತನ್ನ ಇವಿ ಪೋರ್ಟ್ಫೋಲಿಯೊವನ್ನು ಹಂತ ಹಂತವಾಗಿ ವಿಸ್ತರಿಸಲು ಯೋಜಿಸಿದೆ.

ಕಳೆದ ವರ್ಷದಲ್ಲಿ ಮಾರುತಿ ಸುಜುಕಿ ಕಂಪನಿಯು 2030ರ ವೇಳೆಗೆ ಆರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವುದಾಗಿ ಘೋಷಿಸಿತು. ಈ ಆರು ಎಲೆಕ್ಟ್ರಿಕ್ ಕಾರುಗಳಲ್ಲಿ ಹಸ್ಲರ್ ಕೂಡ ಒಳಗೊಂಡಿರಬಹುದು. ವಿನ್ಯಾಸ ಮತ್ತು ಗಾತ್ರದ ವಿಷಯದಲ್ಲಿ, ಹೊಸ ಹಸ್ಲರ್ ಜಪಾನ್‌ನಲ್ಲಿ ಮಾರಾಟವಾಗುವ ಪ್ರಮುಖ ಕಾರ್ ಆಗಿದೆ. ಈ ಕಾರ್ ನೋಡಲು ಜಿಮ್ನಿ ಮತ್ತು ಎಸ್-ಪ್ರೆಸ್ ಮಾದರಿಗಳನ್ನು ಸಂಯೋಜಿಸಿ ಮಾಡಿದ ಕಾರಿನಂತೆ ಕಾಣಿಸುತ್ತಿದೆ.
ಈ ಹೊಸ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಯ ವಿನ್ಯಾಸವು ಯಾರನ್ನೂ ಆಕರ್ಷಿಸುತ್ತದೆ. ಪ್ರಸ್ತುತ ಹಸ್ಲರ್ ಮಾದರಿಯು ಎಂಜಿ ಕಾಮೆಟ್ ಇವಿಗಿಂತ ಸ್ವಲ್ಪ ಹೆಚ್ಚು ಹೊಂದಿದೆ. ಆದರೆ ಕಾಮೆಟ್ ಗಿಂತ ಭಿನ್ನವಾಗಿ ಹಸ್ಲರ್ 4 ಡೋರುಗಳನ್ನು ಹೊಂದಿದೆ. ಜಪಾನ್ ಮಾದರಿಯು 658 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಆದರೆ ಜಾಗತಿಕ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು, ಸುಜುಕಿ ಇದನ್ನು ಸಂಪೂರ್ಣ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ನೀಡಬಹುದು.

ಸುಜುಕಿಯು ಹಸ್ಲರ್ ಇವಿಯ ಶೇಷಣಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಹಸ್ಲರ್ ಇವಿ ತನ್ನ ಪವರ್‌ಟ್ರೇನ್ ಅನ್ನು ವ್ಯಾಗನ್ಆರ್ ಇವಿ ಮೂಲಮಾದರಿಯಿಂದ ಎರವಲು ಪಡೆಯುತ್ತದೆ. ಈ ಮಾರುತಿ ಸುಜುಕಿ 2018 ರಿಂದ ವ್ಯಾಗನ್ಆರ್ ಇವಿಯನ್ನು ಪರೀಕ್ಷಿಸುತ್ತಿದೆ, ಆದರೆ ನಂತರ ಯೋಜನೆಯನ್ನು ಕೈಬಿಟ್ಟಿತು. ಯಾವುದೇ ರೀತಿಯಲ್ಲಿ, ಅವರು ವ್ಯಾಗನ್ಆರ್ ಇವಿಯಿಂದ ಕಲಿತ ಎಲ್ಲವನ್ನೂ ಹಸ್ಲರ್ ಮಾದರಿಯಲ್ಲಿ ಅನ್ವಯಿಸಬಹುದು.
v3Cars ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸುಜುಕಿ ಹಸ್ಲರ್ ಇವಿಯು 30kWh ಗಿಂತ ಕಡಿಮೆ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಈ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ನೀಡುವ ನಿರೀಕ್ಷೆಯಿದೆ. ಗಾತ್ರ ಮತ್ತು ಬಾಡಿಯ ಶೈಲಿಯ ವಿಷಯದಲ್ಲಿ, ಹಸ್ಲರ್ ಭಾರತದಲ್ಲಿ ಎಂಜಿ ಕಾಮೆಟ್ ಇವಿ, ಟಾಟಾ ಟಿಯಾಗೊ ಇವಿ ಮತ್ತು ಸಿಟ್ರೊಯೆನ್ eC3 ಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಹಸ್ಲರ್ ಕಾರು, ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಭಾರತದಲ್ಲಿ ಕಾರು ಖರೀದಿದಾರರು ಸಾಮಾನ್ಯವಾಗಿ ದೊಡ್ಡ ವಾಹನಗಳಿಗೆ ಆದ್ಯತೆ ನೀಡುತ್ತಾರೆ. ಆದ್ದರಿಂದ ಮಾರುತಿ ಸುಜುಕಿ ಹಸ್ಲರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರೂ, ದೀರ್ಘವಾದ, ಹೆಚ್ಚು ವಿಶಾಲವಾದ ಆವೃತ್ತಿಯನ್ನು ರಚಿಸುವ ಸಾಧ್ಯತೆಯಿದೆ ಎಂದು ಕೂಡ ಹೇಳಲಾಗುತ್ತಿದೆ. ಇದು ಹ್ಯುಂಡೈ ಎಕ್ಸ್ ಟರ್ ನೊಂದಿಗೆ ತೆಗೆದುಕೊಂಡ ಅದೇ ರೀತಿಯ ವಿಧಾನವಾಗಿದೆ.
ಮಾರುತಿ ಸುಜುಕಿಯ ಪೋರ್ಟ್ ಫೋಲಿಯೊದಲ್ಲಿ ಹಳೆಯ ಇಗ್ನಿಸ್ ಅನ್ನು ಹಸ್ಲರ್ ಬದಲಾಯಿಸುವ ಸಾಧ್ಯತೆಯೂ ಇದೆ ಎಂದು ಕೆಲವು ವರದಿಗಳು ಸೂಚಿಸಿವೆ. ಒಂದು ಕಾಲದಲ್ಲಿ ಜನಪ್ರಿಯ ಆಯ್ಕೆಯಾಗಿದ್ದ ಇಗ್ನಿಸ್, ಇತ್ತೀಚಿನ ವರ್ಷಗಳಲ್ಲಿ ಅದರ ಆಕರ್ಷಣೆ ಕಡಿಮೆಯಾಗುತ್ತಿದೆ. ಹಾಗಾಗಿ ಹಸ್ಲರ್ ನಂತಹ ಹೊಸ ಆಧುನಿಕ ಕಾರು ಬದಲಿ ಸ್ಥಾನವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








