ಪುಟ್ಟ ಕುಟುಂಬಕ್ಕೆ ಈ ಕಾರು ಉತ್ತಮ.. ರೂ.5.49 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್!

ಭಾರತದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಖ್ಯಾತಿ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಲ್ಟೊ ಕೆ10, ಸೆಲೆರಿಯೊ, ಬಲೆನೊ, ಫ್ರಾಂಕ್ಸ್, ವ್ಯಾಗನ್ಆರ್ ಹಾಗೂ ಜಿಮ್ನಿ ಸೇರಿದಂತೆ ಹಲವು ಕಾರುಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಗ್ನಿಸ್ (Ignis) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ನಿಮ್ಮ ಕುಟುಂಬಕ್ಕಾಗಿ ಪುಟ್ಟ ಕಾರೊಂದನ್ನು ತೆಗೆದುಕೊಳ್ಳಲು ಯೋಚಿಸಿದ್ದರೆ.. ಇಗ್ನಿಸ್ ಉತ್ತಮ ಆಯ್ಕೆಯಾಗಲಿದೆ. ಇಲ್ಲಿ ಈ ನೂತನ ಹ್ಯಾಚ್‌ಬ್ಯಾಕ್ ವಿಶೇಷತೆಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಬೆಲೆ & ರೂಪಾಂತರಗಳು: ಹೊಚ್ಚ ಹೊಸ ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ರೂ.5.49 ಲಕ್ಷದಿಂದ ರೂ.8.06 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಿಗ್ಮಾ, ಡೆಲ್ಟಾ, ಜಿಟಾ ಮತ್ತು ಆಲ್ಫಾ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯನ್ನು ಕೂಡ ಪಡೆದಿದೆ.

Maruti Suzuki Ignis Good Choice For Small Family Price And Features Details

ಕಾರ್ಯಕ್ಷಮತೆ: ಈ ಇಗ್ನಿ​ಸ್‌ ಕಾರು ಶಕ್ತಿಯುತ ಪವರ್‌ಟ್ರೇನ್ ಹೊಂದಿದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 83 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 113 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಜೊತೆಗೆ 20.89 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಆಸನ ಆಯ್ಕೆ & ಬಣ್ಣಗಳು: ಮಾರುತಿ ಸುಜುಕಿ ಇಗ್ನಿಸ್ ಹ್ಯಾಚ್‌ಬ್ಯಾಕ್ 5 ಆಸನ ಆಯ್ಕೆ ವ್ಯವಸ್ಥೆ ಹೊಂದಿದೆ. ಪ್ರವಾಸದ ವೇಳೆ ಹೆಚ್ಚಿನ ಲಗೇಜ್ ಸಾಗಿಸಲು 260 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ವೈಡೂರ್ಯ ಬ್ಲೂ, ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ ಹಲವು ಬಣ್ಣಗಳೊಂದಿಗೆ ಸಿಗುತ್ತದೆ.

ವೈಶಿಷ್ಟ್ಯಗಳು: ಈ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌, ಮತ್ತು ಡಿಆರ್‌ಎಲ್‌ಗಳನ್ನು ಹೊಂದಿದೆ.

ಸುರಕ್ಷತಾ ವೈಶಿಷ್ಟ್ಯಗಳು: ಮಾರುತಿ ಸುಜುಕಿ ಇಗ್ನಿಸ್ ಹ್ಯಾಚ್‌ಬ್ಯಾಕ್ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಫ್ರಂಟ್ ಡುಯಲ್ ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.

ಪ್ರತಿಸ್ಪರ್ಧಿ ಕಾರು: ಇಗ್ನಿಸ್‌ಗೆ ಟಾಟಾ ಟಿಯಾಗೊ (Tata Tiago) ದೊಡ್ಡ ಎದುರಾಳಿಯಾಗಿದೆ. ಇದು ರೂ.5.65 ಲಕ್ಷದಿಂದ ರೂ.8.90 ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದ್ದು, 19.43 ರಿಂದ 28.06 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, July 28, 2024, 9:00 [IST]
English summary
Maruti suzuki ignis car good choice for small family price and features details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+