Maruti Suzuki Ignis: ನೀವು ಈ ಕಾರನ್ನು ತೆಗೆದುಕೊಳ್ಳಬಹುದು, ಆನ್-ರೋಡ್ ಬೆಲೆ ಏನು.. EMI ಎಷ್ಟು?
ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ಬಹುತೇಕರು ತಮ್ಮ ಕುಟುಂಬದ ಬಳಕೆಗಾಗಿ ಬಜೆಟ್ ಬೆಲೆಯ ಕಾರುಗಳಿಗಾಗಿ ಹುಡುಕಾಟವನ್ನು ನಡೆಸುತ್ತಾರೆ. ಅಂತಹವರಿಗೆ ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಉತ್ತಮ ಆಯ್ಕೆಯಾಗಬಲ್ಲದು. ಈ ಕಾರಿನ ಆನ್-ರೋಡ್ ಬೆಲೆ, ತಿಂಗಳ ಇಎಂಐ ಬಗ್ಗೆ ಇಲ್ಲಿದೆ ವಿವರ.
ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಇಗ್ನಿಸ್ ಬೇಸ್ ಮಾಡೆಲ್ (ಆರಂಭಿಕ ಆವೃತ್ತಿ) ಸಿಗ್ಮಾ ರೂ.6.99 ಲಕ್ಷ, ಡೆಲ್ಟಾ ರೂ.7.63 ಲಕ್ಷ, ಡೆಲ್ಟಾ ಎಎಂಟಿ (ಆಟೋಮೆಟಿಕ್) ರೂ.8.21 ಲಕ್ಷ, ಅಧಿಕ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಜಿಟಾ ಮಾದರಿ ರೂ.8.31 ಲಕ್ಷ, ಜಿಟಾ ಎಂಎಂಟಿ ರೂ.8.89 ಲಕ್ಷ, ಆಲ್ಪಾ ರೂ.9.07 ಲಕ್ಷ ಹಾಗೂ ಆಲ್ಪಾ ಎಎಂಟಿ ರೂ.9.65 ಲಕ್ಷ ಆನ್-ರೋಡ್ (On Road) ಬೆಲೆಯನ್ನು ಹೊಂದಿದೆ.

ಹೊಸ ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಕಾರನ್ನು ಖರೀದಿಸಲು ನೀವು ರೂ.70,000 ಡೌನ್ ಪೇಮೆಂಟ್ ಪಾವತಿಸಿದರೆ, ಶೇಕಡ 9.8% ಬಡ್ಡಿದರದಲ್ಲಿ ಮಾಸಿಕ ರೂ.13,308 ಇಎಂಐ ಪಾವತಿಸಬೇಕು. ಈ ಸಂಬಂಧ ಯಾವುದೇ ಗೊಂದಲಗಳಿದ್ದರೂ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ. ಆನ್-ರೋಡ್ ದರಗಳು ಕೂಡ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಯವಾಗಬಹುದು.
ನೂತನ ಮಾರುತಿ ಸುಜುಕಿ ಇಗ್ನಿಸ್ ಕಾರು ವಿನ್ಯಾಸದ ದೃಷ್ಟಿಯಿಂದಲೂ ಅತ್ಯಾಧುನಿಕವಾಗಿದೆ. ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ಟರ್ಕೋಯಿಸ್ ಬ್ಲೂ, ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್ ಸೇರಿದಂತೆ 7 ಮೊನೊಟೋನ್ ಹಾಗೂ 3 ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಇಗ್ನಿಸ್ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಉಪಯೋಗ ಮಾಡಲಾಗಿದೆ. ಇದು 83 ಪಿಎಸ್ ಗರಿಷ್ಠ ಪವರ್ (ಶಕ್ತಿ) ಮತ್ತು 113 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5-ಸ್ವೀಡ್ ಮ್ಯಾನುವಲ್ ಹಾಗೂ 5-ಆಟೋಮೆಟಿಕ್ (ಎಎಂಟಿ) ಗೇರ್ ಬಾಕ್ಸ್ ಆಯ್ಕೆಯಲ್ಲಿಯೂ ಸಿಗಲಿದ್ದು, 20.89 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಇಗ್ನಿಸ್ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರು ಡುಯಲ್ ಫ್ರಂಟ್ ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಹೊಂದಿದೆ.

ಇನ್ನು, ಇಗ್ನಿಸ್‌ಗೆ ಟಾಟಾ ಟಿಯಾಗೊ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ನೀವು ಕಡಿಮೆ ಬೆಲೆಗೆ ಉತ್ತಮ ಕಾರ್ಯಕ್ಷಮತೆ ಮತ್ತು ಭರ್ಜರಿ ವೈಶಿಷ್ಟ್ಯವನ್ನು ಹೊಂದಿರುವ ಕಾರನ್ನು ಹುಡುಕುತ್ತಿದ್ದರೆ, ಇದು ಉತ್ತಮ ಆಯ್ಕೆಯಾಗಲಿದೆ ಎಂದು ಹೇಳಬಹುದು. ಮಾರುತಿ ಸುಜುಕಿ ಇಗ್ನಿಸ್ ಮಾತ್ರವಲ್ಲದೆ, ಆಲ್ಟೊ ಕೆ10, ಸೆಲರಿಯೊ ಹಾಗೂ ಸ್ವಿಫ್ಟ್ ಕಾರುಗಳು ಸಹ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications