ಕೇವಲ 5.49 ಲಕ್ಷಕ್ಕೆ ಮಾರುತಿಯ ಪ್ರೀಮಿಯಂ ಕಾರು: ಬೆಸ್ಟ್ ಮೈಲೇಜ್, ಆಕರ್ಷಕ ಫೀಚರ್ಸ್!

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಇರುವ ಬೇಡಿಕೆ ಇನ್ಯಾವುದೇ ಬ್ರಾಂಡ್‌ನ ಕಾರುಗಳಿಗೆ ಇಲ್ಲ. ಸುರಕ್ಷತೆಯೊಂದನ್ನು ಹೊರತುಪಡಿಸಿ ಅಗ್ಗದ ಬೆಲೆ, ಉತ್ತಮ ಫೀಚರ್ಸ್, ಅತ್ಯುತ್ತಮ ವಿನ್ಯಾಸ ಸೇರಿದಂತೆ ಮಾರಾಟದ ನಂತರ ಸರ್ವಿಸ್‌ ವಿಷಯದಲ್ಲೂ ಉತ್ತಮ ಪ್ರತಿಕ್ರಿಯೆ ಇರುವುದರಿಂದ ಮಾರುತಿ ಕಾರುಗಳು ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುತ್ತವೆ. ಕಡಿಮೆ ಬೆಲೆಗೆ ಬೆಸ್ಟ್ ಫೀಚರ್ಸ್ ಹಾಗೂ ಸಣ್ಣ ಸ್ಟೈಲಿಷ್ ಮಾರುತಿ ಹ್ಯಾಚ್‌ಬ್ಯಾಕ್ ಅನ್ನು ನೋಡುತ್ತಿರುವವರಿಗೆ ಇಗ್ನಿಸ್ ಒಂದು ಉತ್ತಮ ಆಯ್ಕೆಯೆಂದು ಹೇಳಬಹುದು. ಹಾಗಾದ್ರೆ ಈ ಕಾರಿನ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಕಾರಿನ ಎಂಟ್ರಿ ಲೆವಲ್ ಮಾದರಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.5.49 ಲಕ್ಷದಿಂದ ಆರಂಭವಾಗಿ ಟಾಪ್‌ ಎಂಡ್ ವೇರಿಯೆಂಟ್ ಬೆಲೆಯು ರೂ.8.06 ಲಕ್ಷಗಳವೆರೆಗ ಇದೆ. ಇದರಲ್ಲಿ ಸಿಗ್ಮಾ, ಡೆಲ್ಟಾ, ಝೀಟಾ ಮತ್ತು ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳು ಲಭ್ಯವಿದೆ. ವೇರಿಯೆಂಟ್‌ಗಳನ್ನು ಆಧರಿಸಿ ಬೆಲೆಗಳು ಬದಲಾಗುತ್ತವೆ.

maruti-suzuki-ignis-price-features-mileage-details

ವೈಶಿಷ್ಟ್ಯಗಳು: ಟಾಟಾ ಟಿಯಾಗೊ, ಮಾರುತಿ ವ್ಯಾಗನ್ ಆರ್ ಮತ್ತು ಸೆಲೆರಿಯೊ ಕಾರುಗಳಿಗೆ ಪೈಪೋಟಿ ನೀಡುವ ಮಾರುತಿ ಇಗ್ನಿಸ್, 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಎತ್ತರವನ್ನು ಸರಿಹೊಂದಿಸಬಹುದಾದ ಡ್ರೈವರ್ ಸೀಟ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆ: ಎಲ್ಲಾ ಬ್ರಾಂಡ್‌ಗಳು ನೀಡುವಂತೆಯೇ ಮಾರುತಿ ಕೂಡ ಇದರಲ್ಲಿ ಸುರಕ್ಷತಾ ವೈಶಿಷ್ಟ್ಯಗಳಾಗಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ), ಇಬಿಡಿಯೊಂದಿಗೆ ಎಬಿಎಸ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ನಂತಹ ಪ್ರಮುಖ ಸೇಫ್ಟಿ ಫೀಚರ್‌ಗಳನ್ನು ನೀಡುತ್ತಿದೆ.

maruti-suzuki-ignis-price-features-mileage-details

ಎಂಜಿನ್: ಇಗ್ನಿಸ್ 1.2-ಲೀಟರ್ ಪೆಟ್ರೋಲ್ ಎಂಜಿನ್ (83 ಪಿಎಸ್ / 113 ಎನ್ಎಂ) ನಿಂದ ನಿಯಂತ್ರಿಸಲ್ಪಡುತ್ತದೆ, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ (ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್ಮಿಷನ್) ಆಯ್ಕೆಯೊಂದಿಗೆ ಬರುತ್ತದೆ. ಈ ಕಾರು ಮ್ಯಾನುವಲ್ ಮತ್ತು ಎಎಂಟಿ ಆವೃತ್ತಿಗಳಲ್ಲಿ 20.89 ಕಿ.ಮೀ ಮೈಲೇಜ್ ನೀಡುತ್ತದೆ.

ಬಣ್ಣದ ಆಯ್ಕೆಗಳು: ಮಾರುತಿ ಇಗ್ನಿಸ್ ಕಾರು ನೆಕ್ಸಾ ಬ್ಲೂ, ಲ್ಯೂಸೆಂಟ್ ಆರೆಂಜ್, ಸಿಲ್ಕಿ ಸಿಲ್ವರ್, ಟರ್ಕೈಸ್ ಬ್ಲೂ, ಗ್ಲಿಸಿಂಗ್ ಗ್ರೇ, ಪರ್ಲ್ ಆರ್ಕ್ಟಿಕ್ ವೈಟ್, ಪರ್ಲ್ ಮಿಡ್ ನೈಟ್ ಬ್ಲ್ಯಾಕ್ ಸೇರಿದಂತೆ ಎಂಬ ಏಳು ಮೊನೊಟೋನ್ ಬಣ್ಣಗಳನ್ನು ಒಳಗೊಂಡಿದೆ. ಇವು ಸಂಪೂರ್ಣ ಒಂದೇ ಬಣ್ಣದಲ್ಲಿ ಆಕರ್ಷಕ ಲುಕ್‌ ನೀಡುತ್ತವೆ.

maruti-suzuki-ignis-price-features-mileage-details

ಬ್ಲಾಕ್ ರೂಫ್‌ನೊಂದಿಗೆ ಲ್ಯೂಸೆಂಟ್ ಆರೆಂಜ್, ಸಿಲ್ವರ್ ರೂಫ್ ನೊಂದಿಗೆ ನೆಕ್ಸಾ ಬ್ಲೂ ಮತ್ತು ಬ್ಲಾಕ್ ರೂಫ್‌ನೊಂದಿಗೆ ನೆಕ್ಸಾ ಬ್ಲೂ ಸೇರಿದಂತೆ ಮೂರು ಡ್ಯುಯಲ್ - ಟೋನ್ ಬಣ್ಣಗಳು ಕೂಡ ಇವೆ. ಈ ಕಾರಿನಲ್ಲಿ ಬೂಟ್‌ಸ್ಪೇಸ್ ವಿಚಾರಕ್ಕೆ ಬಂದರೆ, ಇಗ್ನಿಸ್ 260 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದ್ದು, ಉತ್ತಮ ಲಗ್ಗೇಜ್ ಸಾಗಿಸಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, December 1, 2024, 12:00 [IST]
English summary
Maruti suzuki ignis price features mileage details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+