Maruti Suzuki: ಬಜೆಟ್ ಬೆಲೆಗೆ ಮಾರುತಿ ಸುಜುಕಿ ಇಗ್ನಿಸ್ ರೇಡಿಯನ್ಸ್ ಎಡಿಷನ್ ಬಿಡುಗಡೆ.. ವಿಶೇಷತೆಗಳೇನು?

ಭಾರತದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿ ಮಾರುತಿ ಸುಜುಕಿ (Maruti Suzuki) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ನೆಕ್ಸಾ ಹಾಗೂ ಅರೇನಾ ಶೋರೂಂ ಮೂಲಕ ಆಲ್ಟೊ ಕೆ10, ಬಲೆನೊ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಸ್ವಿಫ್ಟ್ ಮತ್ತು ಜಿಮ್ನಿ ಒಳಗೊಂಡಂತೆ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಂಪನಿಯ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳ ಪಟ್ಟಿಯಲ್ಲಿ ಇಗ್ನಿಸ್ (Ignis) ಸ್ಥಾನ ಪಡೆದಿದ್ದು, ಈ ಕಾರಿನ 'ರೇಡಿಯನ್ಸ್ ಎಡಿಷನ್'ನ್ನು ಬಿಡುಗಡೆ ಮಾಡಲಾಗಿದೆ.

ಹೊಚ್ಚ ಹೊಸ ಮಾರುತಿ ಸುಜುಕಿ ರೇಡಿಯನ್ಸ್ ಎಡಿಷನ್ (Maruti Suzuki Ignis Radiance Edition) ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ರೂ.5.49 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಆರಂಭಿಕ ಶ್ರೇಣಿ ಮಾದರಿ (ಬೇಸ್-ಸ್ಪೆಕ್ ಮಾಡೆಲ್) 'ಸಿಗ್ಮಾ ಎಂಟಿ' ಒಳಗೊಂಡಿರುವ ರೂ.5.84 ಲಕ್ಷ ದರಕ್ಕೆ ಹೋಲಿಕೆ ಮಾಡಿದರೆ ರೂ.35,000 ಕಡಿಮೆ ಶೋರೂಂ ಬೆಲೆಯನ್ನು ಪಡೆದಿದೆ.

Maruti Suzuki Ignis Radiance Edition launch in india Rs 5 49 lakh price

ಈ ಇಗ್ನಿಸ್ ರೇಡಿಯನ್ಸ್ ಎಡಿಷನ್ ಕಾರಿನ ಹೊರ ಹಾಗೂ ಒಳಭಾಗದಲ್ಲಿ ಕೆಲವು ಕಾಸ್ಮೆಟಿಕ್ (ಸೌಂದರ್ಯಾತ್ಮಕ) ಬದಲಾವಣೆಗಳನ್ನು ಮಾಡಲಾಗಿದೆ. ಆದಾಗ್ಯೂ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳಲ್ಲಿ ಯಾವುದೇ ರೀತಿಯ ಮಾರ್ಪಾಡುಗಳಾಗಿಲ್ಲ. ನೂತನ ರೇಡಿಯನ್ಸ್ ಎಡಿಷನ್ ಸಿಗ್ಮಾ, ಜಿಟಾ ಮತ್ತು ಆಲ್ಫಾ ರೂಪಾಂತರ (ವೇರಿಯೆಂಟ್)ದೊಂದಿಗೆ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ರೇಡಿಯನ್ಸ್ ಎಡಿಷನ್ ಸಿಗ್ಮಾ ಮಾದರಿಯು ರೂ 3,650 ಮೌಲ್ಯದ ಹೆಚ್ಚುವರಿ ಬಿಡಿಭಾಗ (ಆಡಿಷನಲ್ ಆಕ್ಸೆಸರಿ)ಗಳನ್ನು ಪಡೆದಿದ್ದು, ವೀಲ್ ಕವರ್‌ಗಳು ಹಾಗೂ ಡೋರ್ ವಿಸರ್‌ಗಳನ್ನು ಹೊಂದಿದೆ. ಜಿಟಾ ಮತ್ತು ಆಲ್ಫಾ ರೂಪಾಂತರಗಳು ರೂ.9,500 ಮೌಲ್ಯದ ಬಿಡಿಭಾಗಗಳನ್ನು ಒಳಗೊಂಡಿವೆ. ಅದರಲ್ಲಿ ಹೊಸದಾದ ಸೀಟ್ ಕವರ್‌ಗಳು, ಕುಶನ್‌ಗಳು, ಡೋರ್ ಕ್ಲಾಡಿಂಗ್ ಹಾಗೂ ಡೋರ್ ವೈಸರ್‌ಗಳು ಸೇರಿವೆ.

ಮಾರುತಿ ಸುಜುಕಿ ರೇಡಿಯನ್ಸ್ ಎಡಿಷನ್ ಸಾಮಾನ್ಯ ಮಾದರಿಯಂತೆ ಪವರ್‌ಟ್ರೇನ್‌ನ್ನು ಹೊಂದಿದೆ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್ 83 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 113 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಸಿಗಲಿದ್ದು, 20.89 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌, ಮತ್ತು ಡಿಆರ್‌ಎಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಫ್ರಂಟ್ ಡುಯಲ್ ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಪಡೆದಿದೆ.

2017ರಲ್ಲಿ ಇಗ್ನಿಸ್ ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಈವರೆಗೆ ಬರೋಬ್ಬರಿ 3 ಲಕ್ಷ ಯುನಿಟ್‌ಗಳನ್ನು ಮಾಡಲಾಗಿದೆ. ಈ ಮೂಲಕ ಕಂಪನಿಯು ಹೊಸ ಇತಿಹಾಸ ನಿರ್ಮಿಸಿದೆ. ಈ ಕಾರಿಗೆ ಟಾಟಾ ಟಿಯಾಗೊ ಪ್ರಬಲ ಎದುರಾಳಿಯಾಗಿದೆ. ಇದು ರೂ.5.65 ಲಕ್ಷದಿಂದ ರೂ.8.90 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 26, 2024, 10:17 [IST]
English summary
Maruti suzuki ignis radiance edition launch india rs 5 49 lakh price
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+