ಭರ್ಜರಿ ಡಿಸ್ಕೌಂಟ್: ಟೊಯೊಟಾ ಇನ್ನೋವಾ ಹೈಕ್ರಾಸ್ ಬದಲು ಈ ಮಾರುತಿ ಕಾರು ಖರೀದಿಸಬಹುದು!

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ತನ್ನ ಇನ್ವಿಕ್ಟೋ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಮಾರುತಿ ಇನ್ವಿಕ್ಟೋ ಮಾದರಿಯು ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಆಧರಿಸಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ಇನ್ವಿಕ್ಟೋ ಕಾರಿನ ರೂ.1.25 ಲಕ್ಷದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನ ಮೇಲೆ ಇದೆ ಮೊದಲ ಬಾರಿಗೆ ಇಷ್ಟು ದೊಡ್ಡ ರಿಯಾಯಿತಿಯನ್ನು ಘೋಷಿಸಿದೆ. ನೀವು ದೀರ್ಘಕಾ ಇನ್ನೋವಾ ಹೈಕ್ರಾಸ್ ಅನ್ನು ಕಾಯದೆ ಇದನ್ನು ಆಧರಿಸಿದ ಮಾರುತಿ ಸುಜುಕಿ ಇನ್ವಿಕ್ಟೋ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಾರುತಿ ಸುಜುಕಿ ಇನ್ವಿಕ್ಟೋ (Maruti Suzuki Invicto) ಕಾರಿನ ಎಂಪಿವಿಯು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಮೊದಲನೆಯದು ಝೀಟಾ ರೂಪಾಂತರವಾಗಿದೆ, ಮತ್ತು ಇನ್ನೊಂದು ಆಲ್ಫಾ ರೂಪಾಂತರವಾಗಿದೆ. ಮಾರುತಿ ಸುಜುಕಿ ಪ್ರಸ್ತುತ ಹೆಚ್ಚು ದುಬಾರಿ ಆಲ್ಫಾ ರೂಪಾಂತರದ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಗ್ರಾಹಕರು MSSF (ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್) ಅನ್ನು ಆಯ್ಕೆ ಮಾಡಿದರೆ ಮಾತ್ರ ಈ 1 ಲಕ್ಷ ರಿಯಾಯಿತಿಯನ್ನು ಪಡೆಯಬಹುದಾಗಿದೆ.

Maruti Suzuki Invicto

ಹೆಚ್ಚುವರಿಯಾಗಿ, ಅದೇ ಆಲ್ಫಾ ರೂಪಾಂತರವನ್ನು ರೂ 25,000 ವಿನಿಮಯ ಬೋನಸ್‌ನೊಂದಿಗೆ ನೀಡಲಾಗುತ್ತಿದೆ. ಆದರೆ ವಿನಿಮಯ ಮಾಡಿಕೊಳ್ಳುವ ವಾಹನವು ಮಾರುತಿ ಸುಜುಕಿ ಎರ್ಟಿಗಾ, ಎಕ್ಸ್‌ಎಲ್ 6 ಅಥವಾ ಟೂರ್ ಎಂ ಆಗಿದ್ದರೆ ಮಾತ್ರ ಇದು ಅನ್ವಯಿಸುತ್ತದೆ ಎಂಬುವುದನ್ನು ಗಮನಿಸಿ. ಆಲ್ಫಾ ರೂಪಾಂತರದ ಮೇಲಿನ ಈ ರಿಯಾಯಿತಿಗಳನ್ನು ಹೊರತುಪಡಿಸಿ, ಕಡಿಮೆ ಝೀಟಾ ರೂಪಾಂತರವನ್ನು ಕೇವಲ 25,000 ರೂಪಾಯಿಗಳ ವಿನಿಮಯ ಬೋನಸ್‌ನೊಂದಿಗೆ ನೀಡಲಾಗುತ್ತಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಮಾದರಿಯ ಅಭಿಮಾನಿಗಳಾಗಿದ್ದರೆ, ದೀರ್ಘ ಕಾಯುವ ಅವಧಿಯ ಮೂಲಕ ಕಾಯಲು ಬಯಸದಿದ್ದರೆ ಅಥವಾ ವಾಹನಕ್ಕೆ ರೂ 3-4 ಲಕ್ಷದ ಕಡಿಮೆ ಬೆಲೆಯಲ್ಲಿ ಮಾರುತಿ ಸುಜುಕಿ ಇನ್ವಿಕ್ಟೊ ನಿಮಗೆ ಉತ್ತಮ ಪರ್ಯಾಯ ಆಯ್ಕೆಯಾಗಿದೆ. ಮಾರುತಿ ಸುಜುಕಿ ಇನ್ವಿಕ್ಟೋ ಕಾರಿನಲ್ಲಿ ಮಿಸ್ಟಿಕ್ ವೈಟ್, ನೆಕ್ಸಾ ಬ್ಲೂ, ಮೆಜೆಸ್ಟಿಕ್ ಸಿಲ್ವರ್ ಸೇರಿದಂತೆ 4 ಆಕರ್ಷಕ ಬಣ್ಣಗಳೊಂದಿಗೆ ಲಭ್ಯವಿದೆ.

Maruti Suzuki Invicto

ಇದು ನೋಡಲು ಕೊಂಚ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂವಿಪಿಯಂತೆ ಕಾಣುತ್ತದೆ. 7, 8 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ಈ ಮಾರುತಿ ಸುಜುಕಿ ಇನ್ವಿಕ್ಟೋ, 2-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 186 PS ಗರಿಷ್ಠ ಪವರ್ ಹಾಗೂ 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇ-ಸಿವಿಟಿ (e-CVT) ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿದಾರರಿಗೆ ದೊರೆಯುತ್ತದೆ. ಈ ಕಾರಿನಲ್ಲಿ 23.24 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಇನ್ವಿಕ್ಟೋ ಎಂಪಿವಿ ಕೇವಲ 9.5 ಸೆಕೆಂಡುಗಳಲ್ಲಿ0 ರಿಂದ 100 kmph ವೇಗವನ್ನು ಪಡೆಯಲಿದೆ. 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 50+ ಕನೆಕ್ಟ್ದ್ ಕಾರ್ ಟೆಕ್ ಫೀಚರ್ಸ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ರೂಫ್ ಆಂಬಿಯೆಂಟ್ ಲೈಟಿಂಗ್, ಸನ್‌ರೂಫ್, ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹತ್ತಾರು ಫೀಚರ್ಸ್ ಗಳನ್ನು ಒಳಗೊಂಡಿದೆ.

Maruti Suzuki Invicto

ಇನ್ನು ಈ ಮಾರುತಿ ಸುಜುಕಿ ಇನ್ವಿಕ್ಟೋ ಎಂಪಿವಿ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಅತ್ಯಾಧುನಿಕವಾಗಿದೆ. 6 ಏರ್‌ಬ್ಯಾಗ್ಸ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360 ಡಿಗ್ರಿ ಕ್ಯಾಮೆರಾ, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್ಸ್ ಹೊಂದಿದೆ. ಈ ಕಾರಿಗೆ ಕಿಯಾ ಕ್ಯಾರೆನ್ಸ್‌ ಪ್ರಬಲ ಎದುರಾಳಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, October 19, 2024, 9:00 [IST]
English summary
Maruti suzuki invicto gets discounts in october 2024 details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+