ಇನ್ಮುಂದೆ ಮೈಲೇಜೇ ಮೈಲೇಜು: 'ಹೈಬ್ರಿಡ್ ಕಾ ಬಾಪ್' ಮಾರುತಿ ತರಲಿದೆ ಮೂರು ಹೈಬ್ರಿಡ್ ಕಾರುಗಳು
ಮಾರುತಿ ಸುಜುಕಿ ಎಂದರೇನೆ ಹಾಗೆ,ಯಾವುದೋ ಒಂದು ಕಾರನ್ನು ಅಪರೂಪಕ್ಕೆ ಮಾರುಕಟ್ಟೆಗೆ ತಂದು ಅದರಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಜಾಯಮಾನ ಈ ಕಂಪನಿಯದ್ದಲ್ಲ. ತಾನು ಬಿಡುವ ಕಾರು ಹೇಗೆಯೇ ಇದ್ದರೂ, ಯಾವಾಗಲೂ ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷತೆಗಳನ್ನು ತನ್ನ ಕಾರುಗಳಿಗೆ ತಂದು ಎಲ್ಲರ ಮೆಚ್ಚುಗೆಗೂ ಪಾತ್ರವಾಗುತ್ತದೆ.
ಇದೇ ವರ್ಷ ಮಾರುತಿ ಸುಜುಕಿ ತನ್ನ ಪ್ರಸಿದ್ದ ಕಾರು ಮಾಡೆಲ್ ಆದ ಸ್ವಿಫ್ಟ್‌ಗೆ ಹೈಬ್ರಿಡ್ ರೂಪಾಂತರವನ್ನು ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂಬುವುದು ಖಚಿತವಾಗಿದೆ. ಆದರೆ ಇದೀಗ ಮಾರುತಿ ಸುಜುಕಿ ವಲಯದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಬಹುತೇಕರು ಮೂಗಿನ ಮೇಲೆ ಆಶ್ಚರ್ಯದಿಂದ ಬೆರಳಿಟ್ಟಿದ್ದು, ಮಾರುತಿ ಸುಜುಕಿ ಫ್ಯಾನ್ಸ್ ಅಂತೂ ತಮ್ಮ ಕಾಲರ್ ಮೇಲೆ ಮಾಡಿಕೊಂಡೇ ಓಡಾಡುತ್ತಿದ್ದಾರೆ.

ಹೌದು, ದೊರಕಿರುವ ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿಯು ಕೇವಲ ಸ್ವಿಫ್ಟ್ ಮಾತ್ರವಲ್ಲದೇ, ತನ್ನ ಇನ್ನಿತರ ಪ್ರಸಿದ್ದ ಮಾಡೆಲ್‌ಳಿಗೂ ಸಹ ಈ ಹೈಬ್ರಿಡ್ ಟಚ್ ಅನ್ನು ನೀಡಲಿದೆ ಎಂದು ತಿಳಿದು ಬಂದಿದೆ. ತನ್ನ ಇನ್ನೆರಡು ಪ್ರಸಿದ್ದ ಕಾರು ಮಾಡೆಲ್‌ಗಳಾದ ಸ್ವಿಫ್ಟ್ ಡಿಸೈರ್ ಮತ್ತು ಇನ್ನಷ್ಟೇ ಲಾಂಚ್ ಆಗಲಿದೆ ಎಂದು ಸುದ್ದಿಯಿರುವ ಗ್ರ್ಯಾಂಡ್ ವಿಟಾರಾ 7 ಸೀಟರ್ ಕಾರುಗಳಿಗೂ ಮಾರುತಿ ಸುಜುಕಿ ಹೈಬ್ರಿಡ್ ಟಚ್ ನೀಡಲಿದೆ.
ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಸೈರ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಇದ್ದು, ಗ್ರ್ಯಾಂಡ್ ವಿಟಾರವನ್ನು ಸಹ ಕಳೆದ ವರ್ಷ ಮಾರುತಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಮೂಲಗಳ ಪ್ರಕಾರ ಗ್ರ್ಯಾಂಡ್ ವಿಟಾರಾದ 7 ಸೀಟರ್ ಅನ್ನು ಮಾರುತಿ ಸುಜುಕಿ ಅಭಿವೃದ್ದಿಪಡಿಸುತ್ತಿದ್ದು, ಇದನ್ನು ಮಾರುಕಟ್ಟೆಗೆ ತರುವ ವೇಳೆಯಲ್ಲಿ ಇದರ ಹೈಬ್ರಿಡ್ ರೂಪಾಂತರವನ್ನು ಸಹ ಪರಿಚಯಿಸಲಿದೆ ಎಂದು ತಿಳಿದು ಬಂದಿದೆ.

ಇನ್ನು ಸ್ವಿಫ್ಟ್ ಹೈಬ್ರಿಡ್ ರೂಪಾಂತರವನ್ನು ಮಾರುತಿ ಸುಜುಕಿ ಅತಿ ಶೀಘ್ರದಲ್ಲೇ ಪರಿಚಯಿಸಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಈ ಕಾರಿನ ಡಿಸೈನ್ ಮತ್ತು ಫೀಚರ್‌ಗಳು ಬಹುತೇಕ ಹೊರ ಬಿದ್ದಿದ್ದು, ಈ ಕಾರಿನ ಮೈಲೇಜ್ ಕಂಡು ಜನ ಈಗಾಗಲೇ ಪುಳಕಿತರಾಗಿದ್ದಾರೆ. ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್‌ನಲ್ಲಿ ಸುಮಾರು ೩೫ ಕಿಮೀ ರೇಂಜ್ ವರೆಗೂ ಸಿಗಬಹುದು ಎಂಬ ಊಹಾಪೋಹಗಳಿವೆ.
ಇದರ ಡಿಸೈನ್ ನೋಡುವುದಾದರೆ, ಅಲ್ಲದೆ, ನೂತನ ಸ್ವಿಫ್ಟ್, ಮರು - ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್, ಡ್ಯುಯಲ್ - ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.
ಮುಂಬರಲಿವ ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ - ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 ಲೀಟರ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ (Maruti Suzuki Hybrid) ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 - 22.56 kmpl ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications