ಕಡಿಮೆ ಡೌನ್ ಪೇಮೆಂಟ್‌ಗೆ ಮನೆಗೆ ತನ್ನಿ ಆಫ್ ರೋಡ್ ಕಿಂಗ್ ಜಿಮ್ನಿ: ತಿಂಗಳಿಗೆ ಇಎಂಐ ಎಷ್ಟು ಗೊತ್ತಾ?
ಮಾರುತಿ ಸುಜುಕಿ ಕಳೆದ ವರ್ಷ ಮಾರುಕಟ್ಟೆಗೆ ತಂದ ವಾಹನದಲ್ಲಿ ಪ್ರಮುಖವಾದುದು ಮಾರುತಿ ಸುಜುಕಿ ಜಿಮ್ನಿ. ಎಂಟ್ರಿ ಲೆವೆಲ್ ಆಫ್‌ರೋಡ್ ಸೆಗ್ಮೆಂಟ್ ಅನ್ನು ವೀರಾಜಮಾನವಾಗಿ ಆಳುತ್ತಿದ್ದ ಮಹೀಂದ್ರಾ ಥಾರ್‌ಗೆ ಟಕ್ಕರ್ ಕೊಡುವ ಸಲುವಾಗಿಯೇ ಮಾರುತಿ ಸುಜುಕಿ ಕಂಪನಿಯು ಜಿಮ್ನಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಕಾರನ್ನು ಖರೀದಿಸುವವರಿಗೆ ಸಾಕಷ್ಟು ಸಂಶಯಗಳಿರುವುದು ಸಾಮಾನ್ಯ. ಇದರ ಡೌನ್ ಪೇಮೆಂಟ್ ಎಷ್ಟು, ಈ ಕಾರಿನ ಇಎಂಐಗಳು ಎಷ್ಟಿರಬಹುದು, ಅದಕ್ಕೆ ಬಡ್ಡಿ ದರಗಳು ಹೇಗಿರಬಹುದು ಎಂದೆಲ್ಲಾ. ಇಂದಿನ ಈ ಲೇಖನದಲ್ಲಿ ನಾವು ಆ ಕುರಿತಾಗಿ ನೋಡಲಿದ್ದೇವೆ.
ಮೊದಲಿಗೆ ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಜಿಮ್ನಿ ಆರಂಭಿಕ ವೇರಿಯಂಟ್ ಆನ್ ರೋಡ್ ಬೆಲೆ ಆರಂಭವಾಗುವುದು, 15,71,376 ರೂಪಾಯಿಗಳು. ಇದರಲ್ಲಿ ಎಕ್ಸ್ ಶೋರೂಮ್ ಬೆಲೆ ಸುಮಾರು 12,74,000 ಲಕ್ಷಗಳು. ಇದರ ಜೊತೆಗೆ ಇನ್ಸುರೆನ್ಸ್ ಮತ್ತು ಆರ್‌ಟಿಒ ಟ್ಯಾಕ್ಸ್‌ಗಳು ಸೇರಿ ಸುಮಾರು 15,71,376 ಲಕ್ಷ ರೂಗಳಿಗೆ ನಿಮಗೆ ಸಿಗುತ್ತದೆ.

ಇನ್ನಿದರ ಡೌನ್ ಪೇಮೆಂಟ್ ಬಗ್ಗೆ ನೋಡುವುದಾದರೆ ನೀವು ಈ ವಾಹನಕ್ಕೆ 2 ಲಕ್ಷ ರೂ ಡೌನ್ ಪೇಮೆಂಟ್ ಮಾಡಿದರೆ ಸುಮಾರು ೯.೮ % ಬಡ್ಡಿದರದಲ್ಲಿ ೭ ವರ್ಷಗಳ ಕಾಲಾವಧಿಯ ಲೋನ್ ಮಾಡಬಹುದು. ಹೀಗೆ ಮಾಡಿದಾಗ ನೀವು ಪ್ರತೀ ತಿಂಗಳು ಇಎಂಐ ರೂಪದಲ್ಲಿ ಸುಮಾರು 22,625 ರೂಪಾಯಿಗಳಷ್ಟು ಹಣವನ್ನು ಪಾವತಿಸಬೇಕಾಗುತ್ತದೆ.
ಇನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಜಿಮ್ನಿ ಕಾರಿನ ಬಗ್ಗೆ ನೊಡುವುದಾದರೆ ಇದು 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ . ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಜಿಮ್ನಿ 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ 5-ಸ್ವೀಡ್ MT ರೂಪಾಂತರ, 16.94 km/l ಹಾಗೂ 4-ಸ್ವೀಡ್ AT ರೂಪಾಂತರ 16.39km/l ಮೈಲೇಜ್ ನೀಡುತ್ತದೆ. ಈ ಜಿಮ್ನಿ 5 ಡೋರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ಸ್ ಬೇಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications