ಯಾವುದೇ ಭಯವಿಲ್ಲದೆ ಗುಡ್ಡ ಗಾಡಲ್ಲಿ ಓಡಿಸಿ: ಈ ಕಾರಿಗೆ 3.3 ಲಕ್ಷ ರೂ. ಭಾರೀ ಡಿಸ್ಕೌಂಟ್ ನೋಡಿ ಥಾರ್‌ಗೆ ನಡುಕ!
ಮಾರುತಿ ಸುಜುಕಿಯ ಲೆಜೆಂಡರಿ ಕಾರು ಯಾವುದೆಂದು ಕೇಳಿದರೆ ಅದು ಜಿಮ್ನಿ ಎಂದು ಕಣ್ಣು ಮುಚ್ಚಿಕೊಂಡು ಹೇಳಬಹುದು. ಭಾರತದಲ್ಲಿ ಈ ಕಾರು ಕಳೆದ ವರ್ಷ ಲಾಂಚ್ ಆಗಿದೆಯಾದರೂ, ಜಾಗತಿಕವಾಗಿ ಹಲವಾರು ವರ್ಷಗಳಿಂದ ಈ ಕಾರು ಮಾರುಕಟ್ಟೆಯಲ್ಲಿದೆ. ವಿದೇಶದಲ್ಲಿ ಈ ಕಾರು 2 ಡೋರ್‌ಗಳಲ್ಲಿ ಲಭ್ಯವಿದ್ದರೆ ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರ ಈ ಕಾರು ಐದು ಡೋರ್‌ಗಳ ಆವೃತ್ತಿಯಲ್ಲಿದೆ. ಥಾರ್‌ಗೆ ಎದುರಾಳಿಯಾಗಿ ಮಾರುಕಟ್ಟೆಗೆ ಈ ಕಾರನ್ನು ತಂದರೂ, ಮಾರಾಟದಲ್ಲಿ ಮಾತ್ರ ಭಾರೀ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಇದೀಗ ಕಂಪನಿ ಈ ಕಾರಿಗೆ ಭಾರೀ ಡಿಸ್ಕೌಂಟ್ ಅನ್ನು ನೀಡುತ್ತಿದೆ.
ಹೌದು, ಮಾಹಿತಿಗಳ ಪ್ರಕಾರ ಕಂಪನಿಯು, ಕಳೆದ ತಿಂಗಳಿಗಿಂತಲೂ ಸುಮಾರು 85000 ಸಾವಿರ ರೂಪಾಯಿಗಳ ಅಧಿಕ ಡಿಸ್ಕೌಂಟ್ ನೀಡುತ್ತಿದ್ದು, ಒಟ್ಟಾಗಿ ಸುಮಾರು 3.3 ಲಕ್ಷ ರೂಗಳ ಭಾರೀ ಡಿಸ್ಕೌಂಟ್ ಅನ್ನು ನೀಡುತ್ತಿದೆ. ಈ ಮೂಲಕ ಈ ಕಾರನ್ನು ಖರೀದಿಸುವವರಿಗೆ ಭರ್ಜರಿ ಕೊಡುಗೆ ನೀಡಿದಂತಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ.

ಜಿಮ್ನಿಯು ಈ ಹಿಂದೆ ರೂ 2.5 ಲಕ್ಷದವರೆಗಿನ ರಿಯಾಯಿತಿಗಳೊಂದಿಗೆ ಪಟ್ಟಿ ಮಾಡಲ್ಪಟ್ಟಿತ್ತು , ಆದರೆ ಈಗ ಅದು ರೂ 80,000 ರಿಂದ ರೂ 3.3 ಲಕ್ಷಕ್ಕೆ ಏರಿದೆ. ಮಾರುತಿ ಸುಜುಕಿ ಸ್ಮಾರ್ಟ್ ಫೈನಾನ್ಸ್ (MSSF) ಅನ್ನು ಆಯ್ಕೆ ಮಾಡುವ ಖರೀದಿದಾರರಿಗೆ ಟಾಪ್-ಎಂಡ್ ಆಲ್ಫಾ ಟ್ರಿಮ್ ರೂ 1.8 ಲಕ್ಷ ನಗದು ರಿಯಾಯಿತಿಯನ್ನು ಪಡೆಯುತ್ತದೆ. ಜಿಮ್ನಿ ಝೀಟಾ ಈಗ MSSF ಯೋಜನೆಯೊಂದಿಗೆ ರೂ 2.75 ಲಕ್ಷದವರೆಗೆ ಮೌಲ್ಯದ ಪ್ರಯೋಜನಗಳನ್ನು ಪಡೆಯುತ್ತದೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಜಿಮ್ನಿ ಕಾರಿನ ಬಗ್ಗೆ ನೊಡುವುದಾದರೆ ಇದು 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ . ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ. ಜೊತೆಗೆ ಇದರ ಫ್ರಂಟ್ ಲುಕ್ ನೋಡುಗರನ್ನು ಸೆಳೆಯುತ್ತದೆ. ರೇರ್ ಆಕರ್ಷವಾಗಿದ್ದು, ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ.

ಮಹೀಂದ್ರಾ ಥಾರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಇದು ಹಲವು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲಿಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಜಿಮ್ನಿ (Maruti Suzuki Jimny) 5 ಡೋರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಐಡಲ್ ಸ್ಟಾರ್ಟ್/ ಸ್ಟಾಪ್ ಬಟನ್ ವೈಶಿಷ್ಟ್ಯದೊಂದಿಗೆ 1.5L ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 6000 rpmನಲ್ಲಿ 104.8 Ps ಗರಿಷ್ಠ ಪವರ್ ಹಾಗೂ 4000 rpmನಲ್ಲಿ 134.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇದೊಂದು ಆಫ್-ರೋಡ್ ಎಸ್‌ಯುವಿಯಾಗಿದ್ದರೂ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರ 5-ಸ್ವೀಡ್ MT ರೂಪಾಂತರ, 16.94 km/l ಹಾಗೂ 4-ಸ್ವೀಡ್ AT ರೂಪಾಂತರ 16.39km/l ಮೈಲೇಜ್ ನೀಡುತ್ತದೆ. ಈ ಜಿಮ್ನಿ 5 ಡೋರ್ ಸುತ್ತಳತೆ ಬಗ್ಗೆ ಹೇಳುವುದಾದರೆ, ಇದು 3985 ಎಂಎಂ ಉದ್ದ, 1645 ಎಂಎಂ ಅಗಲ, 1720 ಎತ್ತರವಿದ್ದು, 2590 ಎಂಎಂ ಅಳತೆಯ ವೀಲ್ಸ್ ಬೇಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications