ಬೆಲೆ ಇಷ್ಟೇನಾ? 2 ಕುಟುಂಬ ಪ್ರಯಾಣಿಸಬಹುದು... 35 ಕಿ.ಮೀ ಮೈಲೇಜ್, ಮಾರುತಿಯ ಹೊಸ ಕಾರು!
ಕಾರು ತಯಾರಕರು ಸದ್ಯ ಎಸ್‌ಯವಿಗಳಿಗೆ ನೀಡುವಷ್ಟೆ ಪ್ರಾಮುಖ್ಯತೆ ಎಂಪಿವಿಗಳಿಗೂ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಹಲವು ಎಂಪಿವಿಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಅದರಲ್ಲೂ ಮಾರುತಿಯಿಂದ ಭರ್ಜರಿ ಮೈಲೇಜ್ ನೀಡುವ ಮತ್ತೊಂದು ಎಂಪಿವಿ ಬಿಡುಗಡೆಯಾಗಲಿದೆ ಎಂದು ಕೆಲ ವರದಿಗಳು ಹೇಳಿವೆ. ಮಾರುತಿ ಸುಜುಕಿ ಕಂಪನಿಯು ಈಗಾಗಲೇ ಎಂಪಿವಿ ವಿಭಾಗದಲ್ಲಿ ಎರ್ಟಿಗಾವನ್ನು ಹೊಂದಿದೆ. ಇದಕ್ಕಿಂತ ಕಡಿಮೆ ಬೆಲೆಗೆ ಹೊಸ ಎಂಪಿವಿಯನ್ನು ಪರಿಚಯಿಸಿಲಿದೆ. ಇದು ಅತಿ ಕಡಿಮೆ ಬೆಲೆಯ ಕಾಂಪ್ಯಾಕ್ಟ್ ಎಂಪಿವಿ ಆಗಿರುವುದರಿಂದ 4 ಮೀಟರ್‌ಗಿಂತ ಕಡಿಮೆ ಉದ್ದವಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಮಾರುತಿ ಸುಜುಕಿ (Maruti Suzuki) ಹೊರತರಲಿರುವ ಹೊಸ ಕಾಂಪ್ಯಾಕ್ಟ್ ಎಂಪಿವಿ, ಮೂಲಗಳ ಪ್ರಕಾರ 2026 ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದು ಅತಿ ಕಡಿಮೆ ಬೆಲೆಯ ರೆನಾಲ್ಟ್ ಟ್ರೈಬರ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ. ಹಾಗಾಗಿ 6.5 ಲಕ್ಷದಿಂದ 7 ಲಕ್ಷದೊಳಗೆ (ಎಕ್ಸ್ ಶೋರೂಂ) ಇದರ ಬೆಲೆ ಇರಲಿದೆ.

ಜಪಾನ್‌ನಲ್ಲಿ ಈಗಾಗಲೇ ಮಾರಾಟದಲ್ಲಿರುವ ಈ ಕಾರಿಗೆ ಸ್ಪೆಸಿಯಾ ಎಂದು ಕರೆಯಲಾಗುತ್ತಿದೆ. ಇದು ಭಾರತದಲ್ಲಿ ಬಿಡುಗಡೆಯಾದಲ್ಲಿ ದೇಶದ ಅತ್ಯಂತ ಅಗ್ಗದ ಎಂಪಿವಿ ಎಂದು ಜನಪ್ರಿಯತೆ ಪಡೆಯಲಿದೆ. ಪ್ರಸ್ತುತ, ಈ ಕಾರಿಗೆ 'ವೈಡಿಬಿ' ಎಂಬ ಸಂಕೇತನಾಮವನ್ನು ನೀಡಲಾಗಿದ್ದು, ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಹೆಸರನ್ನು ಬಹಿರಂಗಪಡಿಸಬಹುದು.
ಈ ಕಾರು ಭಾರತದಲ್ಲಿ ಬಿಡುಗಡೆಯಾದ್ರೆ ಜಪಾನ್ ಮಾದರಿಯಂತೆ ಎಲ್ಲಾ ಫೀಚರ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳುವುದು ಕಷ್ಟ. ಹಾಗೆಂದು ಸಂಫೂರ್ಣವಾಗಿ ಭಿನ್ನತೆಯನ್ನು ಪ್ರದರ್ಶಿಸುವುದಿಲ್ಲ, ಎರಡೂ ಮಾದರಿಗಳು ಬಹುತೇಕ ಸಾಮ್ಯತೆಗಳನ್ನು ಹೊಂದಿರುತ್ತವೆ. ಕಾರು ತಯಾರಕರು ಆಯಾ ದೇಶೀಯ ಮಾರುಕಟ್ಟೆಗಳಿಗೆ ಅನುಗುಣವಾಗಿ ಬೆಲೆಯನ್ನು ಆಧರಿಸಿ ಡಿಸೈನ್, ಫೀಚರ್‌ಗಳನ್ನು ನೀಡುತ್ತಾರೆ.

ವರದಿಗಳ ಪ್ರಕಾರ, ಹೊಸ ಮಾರುತಿ ಸುಜುಕಿ ಎಂಪಿವಿ ಮೂರು ಸಾಲಿನ ಆಸನ ವ್ಯವಸ್ಥೆಯೊಂದಿಗೆ ನೀಡಲಾಗುವುದು. ಆದ್ದರಿಂದ ಬಹಳಷ್ಟು ಜನರು ಮುಕ್ತವಾಗಿ ಪ್ರಯಾಣಿಸಬಹುದು. ಆದರೆ ಜಪಾನ್ ಮತ್ತು ಇತರ ದೇಶಗಳಲ್ಲಿ ಇದೇ ಕಾರು ಕಾಂಪ್ಯಾಕ್ಟ್ ಎಂಪಿವಿ ಆಗಿರುವುದರಿಂದ, ಇದು 4 ಮೀಟರ್ ಗಿಂತ ಕಡಿಮೆ ಉದ್ದವಿರುತ್ತದೆ.
ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದು ಹೈಬ್ರಿಡ್ ಆಗಿರುವ ಕಾರಣ ಮೈಲೇಜ್ ಕೂಡ ಹೆಚ್ಚರಿಲಿದೆ, ಒಂದು ಅಂದಾಜಿನ ಪ್ರಕಾರ ಪ್ರತಿ ಲೀಟರ್‌ಗೆ ಸುಮಾರು 35 ಕಿ.ಮೀ ನೀಡಬಹುದು. ಇದು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.2-ಲೀಟರ್ ಝಡ್ ಸಿರೀಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರಿನ ಮತ್ತೊಂದು ಹೈಲೈಟ್ ಏನೆಂದರೆ ಕಡಿಮೆ ಬೆಲೆಗೆ ಬರಲಿದೆ.

ಪ್ರಸ್ತುತ ಮಾರುತಿ ಸುಜುಕಿ ಕಂಪನಿಯು ಭಾರತದ ಎಂಪಿವಿ ವಿಭಾಗದಲ್ಲಿ ತನ್ನ ಜನಪ್ರಿಯ ಎರ್ಟಿಗಾವನ್ನು ಮುನ್ನಡೆಸುತ್ತಿದೆ. ಇದರ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ರೂ.8.69 ಲಕ್ಷಗಳಿಂದ (ಎಕ್ಸ್ ಶೂರೂಂ) ಆರಂಭವಾಗಿ ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ.13.03 ಲಕ್ಷ (ಎಕ್ಸ್ ಶೋರೂಂ) ಗಳವೆರೆಗೆ ಇದೆ. ಈಗ ಹೊಸ ಎಂಪಿವಿ ಬಿಡುಗಡೆಯಾದಲ್ಲಿ ಎರ್ಟಿಗಾ ಮಾರಾಟ ಇಳಿಕೆಯಾಗಬಹುದು.
ಎಂಪಿವಿಗಳ ಆರ್ಭಟ: ಭಾರತದಲ್ಲಿ ಮೊದಲಿನಿಂದಲು ಎಂಪಿವಿಗಳಿಗೆ ಉತ್ತಮ ಬೇಡಿಕೆ ಇದೆ, ಎಸ್‌ಯುವಿಗಳ ಆರ್ಭಟದ ನಡುವೆ ಸೆಡಾನ್ ಮಾರಾಟ ಕಡಿಮೆಯಾಗಿದೆಯಾದ್ರೂ, ಎಂಪಿವಿಗಳು ಮಾತ್ರ ಉತ್ತಮ ಮಾರಾಟ ಕಾಣುತ್ತಿವೆ. ಸದ್ಯ ಮಾರುತಿ ಎರ್ಟಿಗಾ, ರೆನಾಲ್ಟ್ ಟ್ರೈಬರ್' ಇವು ಎಂಪಿವಿ ವಿಭಾಗದಲ್ಲಿ ಅತ್ಯಂತ ಅಗ್ಗದ ಬೆಲೆಗೆ ಸಿಗುವ ಕಾರುಗಳಾಗಿರುವ ಕಾರಣ ಪ್ರತಿ ತಿಂಗಳು ಉತ್ತಮ ಮಾರಾಟ ಕಾಣುತ್ತಿವೆ.


Click it and Unblock the Notifications