ಟಾಟಾ, ಮಹೀಂದ್ರಾ ಅಲ್ಲ.. ಮಾರುತಿ 'ನೆಕ್ಸಾ' ಮೂಲಕ 9 ವರ್ಷದಲ್ಲಿ 2,700,000 ಕಾರು ಮಾರಾಟ
ಮಾರುತಿ ಸುಜುಕಿ ಇಂಡಿಯಾ (Maruti Suzuki India), ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡುವ ನೆಕ್ಸಾ (Nexa) ರಿಟೇಲ್ ಡೀಲರ್‌ಶಿಪ್ ನೆಟ್‌ವರ್ಕ್ ಯಶಸ್ವಿಯಾಗಿ 9 ವರ್ಷಗಳನ್ನು ಪೂರೈಸಿದೆ. ದೇಶಾದ್ಯಂತ ವಿವಿಧ ನಗರಗಳಲ್ಲಿ ಈ ಡೀಲರ್‌ಶಿಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬರೋಬ್ಬರಿ 27 ಲಕ್ಷ ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಸದ್ಯ, 'ನೆಕ್ಸಾ' ಮೂಲಕ ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್6, ಫ್ರಾಂಕ್ಸ್, ಜಿಮ್ನಿ, ಗ್ರ್ಯಾಂಡ್ ವಿಟಾರಾ ಹಾಗೂ ಇನ್ವಿಕ್ಟೊ ಕಾರುಗಳು ಖರೀದಿಗೆ ಲಭ್ಯವಿವೆ. ಗ್ರಾಹಕರು ಕೂಡ ಇಷ್ಟಪಟ್ಟು ತೆಗೆದುಕೊಳ್ಳುತ್ತಿದ್ದಾರೆ.
'ನೆಕ್ಸಾ' ಡೀಲರ್‌ಶಿಪ್‌ಗಳು 2024ರ ಹಣಕಾಸು ವರ್ಷದಲ್ಲಿ ಶೇಕಡ 54% ಪ್ರಗತಿ ಸಾಧಿಸಿವೆ. ಈ ಮೂಲಕ ವೇಗವಾಗಿ ಬೆಳೆಯುತ್ತಿರುವ ಆಟೋಮೋಟಿವ್ ರಿಟೇಲ್ ಶೋರೂಂ ಆಗಿ ಹೊರಹೊಮ್ಮಿವೆ. ಮಾರುತಿ ಸುಜುಕಿ ಮಾರಾಟಗೊಳಿಸುವ ಒಟ್ಟಾರೆ ಪ್ರಯಾಣಿಕ ವಾಹನ (Passenger Vehicle)ಗಳಲ್ಲಿ ನೆಕ್ಸಾ ನೆಟ್‌ವರ್ಕ್ ಪಾಲು ಶೇಕಡ 32% ಇದೆ.

2015ರಲ್ಲಿ ಬಲೆನೊ ಹಾಗೂ ಎಸ್-ಕ್ರಾಸ್ ಮಾರಾಟದೊಂದಿಗೆ ನೆಕ್ಸಾ ಡೀಲರ್‌ಶಿಪ್‌ಗಳನ್ನು ಶುರು ಮಾಡಲಾಯಿತು. ಪ್ರಸ್ತುತ ಎಸ್-ಕ್ರಾಸ್ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆ ಬಳಿಕ, 2017ರಲ್ಲಿ ಸಿಯಾಜ್ ಮತ್ತು ಇಗ್ನಿಸ್ ಮಾರಾಟ ಆರಂಭವಾಯಿತು. 2019ರಲ್ಲಿ ಎಕ್ಸ್ಎಲ್6 ಮಾರುಕಟ್ಟೆಯನ್ನು ಪ್ರವೇಶಿಸಿತು. 2022ರಲ್ಲಿ ಗ್ರ್ಯಾಂಡ್ ವಿಟಾರಾ ಕಾರನ್ನು ಪರಿಚಯಿಸಲಾಯಿತು. 2023 ಮಹತ್ವದ ವರ್ಷವಾಗಿದ್ದು, ಫ್ರಾಂಕ್ಸ್, ಜಿಮ್ನಿ ಮತ್ತು ಇನ್ವಿಕ್ಟೊ ಕಾರುಗಳು ಮಾರಾಟಕ್ಕೆ ಬಂದವು.
ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟಗೊಳಿಸುವ ಬಲೆನೊ, ಫ್ರಾಂಕ್ಸ್ ಮತ್ತು ಗ್ರ್ಯಾಂಡ್ ವಿಟಾರಾ 2024ರ ಹಣಕಾಸು ವರ್ಷದಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬಲೆನೊದ 195,607 ಯುನಿಟ್, ಫ್ರಾಂಕ್ಸ್‌ನ 134,735 ಯುನಿಟ್ ಹಾಗೂ ಗ್ರ್ಯಾಂಡ್ ವಿಟಾರಾದ 121,169 ಯುನಿಟ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

ನೂತನ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ರೂ.6.66 ಲಕ್ಷದಿಂದ ರೂ.9.83 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 22.35 ರಿಂದ 30.61 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki FRONX) ಎಸ್‌ಯುವಿ, ರೂ.7.51 ಲಕ್ಷದಿಂದ ರೂ.13.04 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಎಸ್‌ಯುವಿ, ರೂ.10.99 ಲಕ್ಷದಿಂದ ರೂ.20.09 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಹೊಂದಿದೆ. 1.5-ಲೀಟರ್ ಮೈಲ್ಡ್ ಹೈಬ್ರಿಡ್, 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಹಾಗೂ 1.5-ಲೀಟರ್ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 19.38 ರಿಂದ 26.6 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications