ದಸರಾಗೆ ಭರ್ಜರಿ ಆಫರ್ ಕೊಟ್ಟ ಮಾರುತಿ: ಪ್ರಮುಖ ಕಾರುಗಳ ಬೆಲೆ ಕಡಿತ

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಹಬ್ಬದ ಸೀಸನ್ ನಲ್ಲಿ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿರುವ ಆಲ್ಟೊ ಕೆ10 (Alto K10) ಮತ್ತು ಎಸ್-ಪ್ರೆಸ್ಸೊ (S-Presso) ಕಾರುಗಳ ಬೆಲೆಯನ್ನು ಕಡಿಮೆ ಮಾಡಿರುವುದಾಗಿ ಘೋಷಣೆ ಮಾಡಿದೆ. ಈ ಕೈಗೆಟುಕುವ ಬೆಲೆಯ ಈ ಕಾರುಗಳನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಮಾರುತಿ ಸುಜುಕಿಯು ಆಲ್ಟೊ ಕೆ10 ಹಾಗೂ ಎಸ್-ಪ್ರೆಸ್ಸೊ ಕಾರುಗಳ ಆಯ್ದ ರೂಪಾಂತರಗಳ (ವೇರಿಯೆಂಟ್) ದರವನ್ನು ಕಡಿಮೆ ಮಾಡಿರುವುದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಾರುತಿ ಸುಜುಕಿ ಕಂಪನಿಯು ಹಬ್ಬದ ಸೀಸನ್ ನಲ್ಲಿ ಜನಪ್ರಿಯ ಮಾರುತಿ ಆಲ್ಟೋ K10 (VXi) ಮಾದರಿಯ ಬೆಲೆಯನ್ನು ರೂ.6,500 ಮತ್ತು ಮಾರುತಿ ಎಸ್-ಪ್ರೆಸ್ಸೊ (LXi) ಮಾದರಿಯ ಬೆಲೆಯನ್ನು ರೂ.2,000 ವರೆಗೆ ಕಡಿತಗೊಳಿಸಿದೆ. ಇದು ಎಕ್ಸ್ ಶೋರೂಂ ಬೆಲೆಗಳ ಮೇಲೆ ಕಡಿತಗೊಳಿಸಲಾಗಿದೆ. ಈ ಬೆಲೆ ಕಡಿತವು ಎರಡು ಮಾದರಿಗಳ ಎಕ್ಸ್ ಶೋ ರೂಂ ಬೆಲೆಯನ್ನು ರೂ.5 ಲಕ್ಷದೊಳಗೆ ಮಾಡುತ್ತದೆ.

Maruti Suzuki

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‍ನ ಮಾರ್ಕೆಟಿಂಗ್ ಮತ್ತು ಸೇಲ್ಸ್ ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥೋ ಬ್ಯಾನರ್ಜಿ ಅವರು ಮಾತನಾಡಿ, ಹಬ್ಬದ ಸೀಸನ್ ನಲ್ಲಿ ನಮ್ಮ ಎಲ್ಲಾ ಗ್ರಾಹಕರಿಗೆ ನಾವು ಅತ್ಯಂತ ಸಂತೋಷದಾಯಕವಾಗಿದೆ. ಹಬ್ಬಗಳಿಗೆ ಹೆಚ್ಚುವರಿ ಸಂತೋಷವನ್ನು ಸೇರಿಸಲು, ನಾವು ನಮ್ಮ ಆಲ್ಟೋ K10 (VXi) ಮತ್ತು ಎಸ್-ಪ್ರೆಸ್ಸೊ (LXi) ಮಾದರಿಗಳ ಬೆಲೆಗಳನ್ನು ಕಡಿಮೆ ಮಾಡಿದ್ದೇವೆ ಎಂದರು

ಮಾತನ್ನು ಮುಂದುವರೆಸಿ, ಈ ಬೆಲೆ ಕಡಿತವು ರಸ್ತೆ ತೆರಿಗೆ ಸ್ಲ್ಯಾಬ್ ಅನ್ನು ಕಡಿಮೆ ಮಾಡುವ ಮೂಲಕ ಕರ್ನಾಟಕದಲ್ಲಿನ ನಮ್ಮ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ತರುತ್ತದೆ ಮತ್ತು ಅವರಿಗೆ ಹೆಚ್ಚು ಉಳಿತಾಯವನ್ನು ನೀಡುತ್ತದೆ. ಈ ಹೆಚ್ಚುವರಿ ಪ್ರಯೋಜನವು ಈ ಹಬ್ಬದ ಸೀಸನ್ ನಲ್ಲಿ ವಿಶೇಷವಾಗಿ ಸಣ್ಣ ಕಾರನ್ನು ಹೊಂದಲು ಯೋಜಿಸುವ ಗ್ರಾಹಕರಿಗೆ ಸುಲಭವಾಗಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಹೇಳಿದರು.

Maruti Suzuki

ಕರ್ನಾಟಕದಲ್ಲಿ, ಹೆಚ್ಚಿನ ಬೆಲೆಯ ವಾಹನಗಳ 15.54% ರಸ್ತೆ ತೆರಿಗೆ ಹೋಲಿಸಿದರೆ, 5 ಲಕ್ಷಕ್ಕಿಂತ ಕಡಿಮೆ ಎಕ್ಸ್ ಶೋರೂಂ ಬೆಲೆಯ ಕಾರುಗಳು 14.43% ರಸ್ತೆ ತೆರಿಗೆಯನ್ನು ಹೊಂದಿದೆ. ಕಡಿಮೆ ರಸ್ತೆ ತೆರಿಗೆಯಿಂದಾಗಿ ಹೆಚ್ಚುವರಿ ಪ್ರಯೋಜನವು ಆಲ್ಟೋ K10 (VXi) ಮೇಲೆ ರೂ.13,207 ಮತ್ತು ಎಸ್-ಪ್ರೆಸ್ಸೊ (LXi) ಮೇಲೆ ರೂ.7,887 ಆಗಿದೆ.

ಮಾರುತಿ ಆಲ್ಟೊ ಕೆ10 ಎಲ್ಎಕ್ಸ್ಐ ಹಾಗೂ ವಿಎಕ್ಸ್ಐ ಸೇರಿದಂತೆ 4 ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. ಮೆಟಾಲಿಕ್ ಸಿಜ್ಲಿಂಗ್ ರೆಡ್, ಮೆಟಾಲಿಕ್ ಸಿಲ್ಕಿ ಸಿಲ್ವರ್, ಮೆಟಾಲಿಕ್ ಗ್ರಾನೈಟ್ ಗ್ರೇ ಒಳಗೊಂಡಂತೆ ಹಲವು ಬಣ್ಣಗಳನ್ನು ಒಳಗೊಂಡಿದೆ. ಈ ಆಲ್ಟೊ ಕೆ10 ಕಾರು 1-ಲೀಟರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

Maruti Suzuki

ಇನ್ನು ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಕಾರು ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 1-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಪಡೆದಿದೆ. 24.12 ರಿಂದ 32.73 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇದರಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಮಾರುತಿ ಎಸ್-ಪ್ರೆಸ್ಸೊ ಹ್ಯಾಚ್‌ಬ್ಯಾಕ್ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಡಿ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ.

Article Published On: Wednesday, September 25, 2024, 18:39 [IST]
English summary
Maruti suzuki offers big price cut for alto k10 s presso
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+