Maruti Suzuki: ಯಾರಿಗೂ ಗೊತ್ತಿಲ್ಲಾ... ಬೈಕ್ ಬೆಲೆಗೆ ಕಾರು ಖರೀದಿಸಿ: 32.73 ಕಿ.ಮೀ ಮೈಲೇಜ್!

ಸಾಮಾನ್ಯರ ಕಾರು ಖರೀದಿಸುವ ಕನಸು ನನಸು ಮಾಡಿರುವ ಮಾರುತಿ ಸುಜುಕಿ, ಅತ್ಯಂತ ಅಗ್ಗದ ಬೆಲೆಯಲ್ಲಿ ನೀಡುವ ಕಾರುಗಳಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಕೂಡ ಒಂದು. ಈ ಕಾರು ಸಣ್ಣ ಕುಟುಂಬಗಳಿಗೆ ಕೈಟುಕುವ ಬೆಲೆಯಲ್ಲಿ ಸಿಗುವುದರಿಂದ ಭಾರೀ ಬೇಡಿಕೆ ಇದೆ. ಅಲ್ಲದೇ ಈ ಕಾರು ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿರುವುದರಿಂದ ಮೈಲೇಜ್ ವಿಷಯದಲ್ಲಿ ಬೈಕ್‌ಗಳಿಗೆ ಪೈಪೋಟಿ ನೀಡುವಂತೆ ಪ್ರತಿ ಕೆ.ಜಿಗೆ ಬರೋಬ್ಬರಿ 32.73 ಕಿ.ಮೀ ಮೈಲೇಜ್ ನೀಡುತ್ತದೆ. ಈ ಪುಟ್ಟ ಕಾರಿನ ಕುರಿತ ಹಲವು ವಿಶೇಷತೆಗಳನ್ನು ಇಲ್ಲಿ ನೋಡೋಣ.

ಬೈಕ್ ಬೆಲೆಗೆ ಲಭ್ಯ: ಭಾರತದಲ್ಲಿ 450cc-650cc ಹೊಂದಿರುವ ಬೈಕ್‌ಗಳ ಬೆಲೆಯು ಸುಮಾರು 3.5 ಲಕ್ಷ ರೂ.ನಿಂದ 4.5 ಲಕ್ಷ ರೂ.ವರೆಗೆ ಬೆಲೆಯಿದೆ. ಇದೇ ಆಸುಪಾಸಿನಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊವನ್ನು ಕೂಡ ಖರೀದಿಸಬಹುದು. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ಬೇಸ್ ವೇರಿಯೆಂಟ್ ರೂ.4.27 ಲಕ್ಷದಿಂದ ಟಾಪ್ ವೇರಿಯೆಂಟ್ ರೂ.6.12 ಲಕ್ಷಗಳಾಗಿದೆ.

maruti-suzuki-s-presso-price-features-engine-mileage-details

ವೇರಿಯೆಂಟ್‌ಗಳು: ಎಸ್-ಪ್ರೆಸ್ಸೊ ಕಾರು ಎಸ್‌ಟಿಡಿ, ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ವಿಎಕ್ಸ್ಐ-ಪ್ಲಸ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಸಿಎನ್‌ಜಿ ಕಿಟ್ ಆಯ್ಕೆಯು ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಟ್ರಿಮ್‌ಗಳಲ್ಲಿ ಲಭ್ಯವಿದೆ. ಸಾಲಿಡ್ ಸಿಜ್ಲ್ ಆರೆಂಜ್, ಸಾಲಿಡ್ ಫೈರ್ ರೆಡ್, ಮೆಟಾಲಿಕ್ ಗ್ರಾನೈಟ್ ಗ್ರೇ, ಮೆಟಾಲಿಕ್ ಸಿಲ್ಕಿ ಸಿಲ್ವರ್, ಪರ್ಲ್ ಸ್ಟಾರ್ರಿ ಬ್ಲೂ, ಬ್ಲೂ ಬ್ಲ್ಯಾಕ್ ಮತ್ತು ಸಾಲಿಡ್ ವೈಟ್ ಎಂಬ ಏಳು ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ.

ಎಂಜಿನ್ & ಮೈಲೇಜ್: ಎಸ್-ಪ್ರೆಸ್ಸೊ 1 - ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ 5 - ಸ್ಪೀಡ್ ಮ್ಯಾನುವಲ್ ಅಥವಾ 5 - ಸ್ಪೀಡ್ ಎಎಂಟಿಯೊಂದಿಗೆ ಲಭ್ಯವಿದೆ. ಹಾಗೆಯೇ ಸಿಎನ್‌ಜಿ ವೇರಿಯೆಂಟ್‌ಗಳು ಕೇವಲ 5 - ಸ್ಪೀಡ್ ಮ್ಯಾನುವಲ್‌ನೊಂದಿಗೆ ಮಾತ್ರ ಬರುತ್ತವೆ. ಪೆಟ್ರೋಲ್ ಮ್ಯಾನುವಲ್‌ನಲ್ಲಿ 24.12 ಕಿ.ಮೀ, ಪೆಟ್ರೋಲ್ ಆಟೋಮ್ಯಾಟಿಕ್‌ನಲ್ಲಿ 25.30 ಕಿ.ಮೀ ಹಾಗೂ ಸಿಎನ್‌ಜಿನಲ್ಲಿ 32.73 ಕಿ.ಮೀ ಮೈಲೇಜ್ ನೀಡುತ್ತದೆ.

maruti-suzuki-s-presso-price-features-engine-mileage-details

ವೈಶಿಷ್ಟ್ಯಗಳು: ಈ ಪುಟ್ಟ ಕಾರಿನಲ್ಲಿ ಕಾರಿನಲ್ಲಿ ಬೆಲೆಗೆ ತಕ್ಕಂತೆ ಉತ್ತಮ ಫೀಚರ್ಸ್ ಕೂಡ ನೀಡಲಾಗಿದೆ. ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಫ್ರಂಟ್ ಪವರ್ಡ್ ವಿಂಡೋಸ್, 7 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಮತ್ತು ಕೀಲೆಸ್ ಎಂಟ್ರಿಯನ್ನು ಹೊಂದಿದೆ. ಡ್ರೀಮ್ ಎಡಿಷನ್ ವೇರಿಯೆಂಟ್ ಹೆಚ್ಚುವರಿ ಸ್ಪೀಕರ್‌ಗಳನ್ನು ಸಹ ಪಡೆಯುತ್ತದೆ.

ಸುರಕ್ಷತೆ: ಸುರಕ್ಷತೆ ವಿಷಯದಲ್ಲಿ ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ಮತ್ತು ಎಬಿಎಸ್ ಜೊತೆಗೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಹೋಲ್ಡ್ ಅಸಿಸ್ಟ್ ಒಳಗೊಂಡಿದೆ. ಡ್ರೀಮ್ ಎಡಿಷನ್ ವೇರಿಯೆಂಟ್‌ನೊಂದಿಗೆ, ನೀವು ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಪಡೆಯಬಹುದು.

maruti-suzuki-s-presso-price-features-engine-mileage-details

ಪ್ರತಿಸ್ಪರ್ಧಿಗಳು: ಭಾರತದಲ್ಲಿ ಕೇವಲ ಮಾರುತಿ ಮಾತ್ರವಲ್ಲದೇ ಹಲವು ಬ್ರಾಂಡ್‌ಗಳು ಅಗ್ಗದ ಬೆಲೆಯ ಕಾರುಗಳನ್ನು ನೀಡುತ್ತಿವೆ. ಅದರಲ್ಲಿ ಮುಖ್ಯವಾಗಿ ಎಸ್-ಪ್ರೆಸ್ಸೊಗೆ ರೆನಾಲ್ಟ್ ಕ್ವಿಡ್ ನೇರ ಪ್ರತಿಸ್ಪರ್ಧಿಯಾಗಿದೆ. ಅದರ ಬೆಲೆ ಶ್ರೇಣಿಯಿಂದಾಗಿ, ಮಾರುತಿ ವ್ಯಾಗನ್ ಆರ್ ಮತ್ತು ಆಲ್ಟೋ ಕೆ 10 ಕೂಡ ಪರ್ಯಾಯವೆಂದು ಪರಿಗಣಿಸಬಹುದು. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, November 1, 2024, 10:34 [IST]
English summary
Maruti suzuki s presso price features engine mileage details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+