ಭಾರತದಲ್ಲಿ ಮಾರುತಿ ಕಾರುಗಳ ಮಾರಾಟದಲ್ಲಿ ಕುಸಿತ: ಕಾರಣವೇನು?

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (Maruti Suzuki India Limited) ತನ್ನ 2024ರ ಆಗಸ್ಟ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟದ ವರದಿಯ ಪ್ರಕಾರ, ಕಳೆದ ತಿಂಗಳು ಮಾರುತಿ ಸುಜುಕಿ ಕಂಪನಿಯು ಒಟ್ಟು 1,43,075 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು 1,56,114 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಮಾರುತಿ ಸುಜುಕಿ ಕಂಪನಿಯು ಶೇ.8 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

2024ರ ಆಗಸ್ಟ್ ತಿಂಗಳಿನಲ್ಲಿ ಆಲ್ಟೊ ಮತ್ತು ಎಸ್-ಪ್ರೆಸ್ಸೊವನ್ನು ಒಳಗೊಂಡಿರುವ ಮಿನಿ ವಿಭಾಗದಲ್ಲಿ ಮಾರುತಿ ಸುಜುಕಿ ((Maruti Suzuki) ಮಾರಾಟವು 10,648 ಯುನಿಟ್‌ಗಳಿಗೆ ಇಳಿದಿದೆ. 2023ರ ಆಗಸ್ಟ್ ತಿಂಗಳಿನಲ್ಲಿ ಇವುಗಳು 12,209 ಯುನಿಟ್‌ಗಳು ಕಡಿಮೆಯಾಗಿದೆ. ಮಾರುತಿ ಸುಜುಕಿ ಕಂಪನಿಯು ತನ್ನ ಕಾಂಪ್ಯಾಕ್ಟ್ ವಿಭಾಗದಲ್ಲಿ ಕಡಿಮೆ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಕಳೆದ ತಿಂಗಳು ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನ್ಆರ್ ಮಾದರಿಗಳು ಒಟ್ಟು 58,051 ಯುನಿಟ್‌ಗಳು ಮಾರಾಟವಾಗಿವೆ.

Maruti Suzuki

ಇನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 72,451 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಕಾಂಪ್ಯಾಕ್ಟ್ ವಿಭಾಗದಲ್ಲಿ ಇಳಿಕೆಯನ್ನು ಕಂಡಿದೆ. ಸಿಯಾಜ್ ಅನ್ನು ಒಳಗೊಂಡಿರುವ ಮಿಡ್ ಸೈಕ್ ವಿಭಾಗದಲ್ಲಿ ಕುಸಿತವನ್ನು ಕಂಡಿದ್ದು, ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 849 ಯುನಿಟ್‌ಗಳು ಮಾರಾಟವಾಗಿದ್ರೆ, ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 707 ಯುನಿಟ್‌ಗಳಿಗೆ ಇಳಿದಿದೆ.

ಮಾರುತಿ ಸುಜುಕಿ ಯುಟಿಲಿಟಿ ವೆಹಿಕಲ್‌ಗಳ ಸರಣಿಯಲ್ಲಿ ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಜಿ ವಿಟಾರಾ, ಇನ್ವಿಕ್ಟೊ, ಜಿಮ್ನಿ ಮತ್ತು ಎಕ್ಸ್‌ಎಲ್ 6 ಸೇರಿವೆ .2024ರ ಆಗಸ್ಟ್ ತಿಂಗಳಿನಲ್ಲಿ 62,684 ಯುನಿಟ್‌ಗಳು ಮಾರಾಟವಾಗಿದ್ದು, ಇನ್ನು ಕಳೆದ ವರ್ಷದ ಇದೇ ತಿಂಗಳಲ್ಲಿ ಮಾರಾಟವಾದ 58,746 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ನೋಡಿದಾಗ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

ಇತರ OEM ಗಳಿಗೆ ಮಾರಾಟವು 5,790 ಯುನಿಟ್‌ಗಳಿಂದ 10,209 ಯುನಿಟ್‌ಗಳಿಗೆ ಬೆಳೆದಿದೆ. ಒಟ್ಟು ದೇಶೀಯ ಮಾರಾಟ (PV+LCV+OEM) ಹೀಗೆ ವರ್ಷಕ್ಕೆ 1,64,468 ಯುನಿಟ್‌ಗಳಿಂದ 1,55,779 ಯುನಿಟ್‌ಗಳಿಗೆ ಇಳಿದಿದೆ. ಒಟ್ಟು ರಫ್ತುಗಳು ಆಗಸ್ಟ್ 2024 ರಲ್ಲಿ 26,003 ಯೂನಿಟ್‌ಗಳಲ್ಲಿ ಹೆಚ್ಚಾಗಿದ್ದು, ಆಗಸ್ಟ್ 2023 ರಲ್ಲಿ ಮಾರಾಟವಾದ 24,614 ಯುನಿಟ್‌ಗಳಿಂದ 5.64% ಹೆಚ್ಚಾಗಿದೆ.

ವಿಶ್ವದಲ್ಲಿಯೇ ಭಾರತವು ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಎಸ್‌ಯುವಿ ವಿಭಾಗದಲ್ಲಿ ಟಾಟಾ ನೆಕ್ಸಾನ್‌, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಹಾಗೂ ಮಹೀಂದ್ರಾ ಸ್ಕಾರ್ಪಿಯೋಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಆದಾಗ್ಯೂ ಈ ಎಲ್ಲ ಕಾರುಗಳಿಗೆ ಮಾರುತಿ ಸುಜುಕಿ ಬ್ರೆಝಾ ಪ್ರಬಲವಾದ ಸ್ಪರ್ಧೆಯೊಡ್ಡುತ್ತಿದೆ. 2016ರ ಮಾರ್ಚ್‌ನಲ್ಲಿ ಬಿಡುಗಡೆಯಾದಾಗಿನಿಂದಲೂ ಈವರೆಗೆ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿ ಹೊರಹೊಮ್ಮಿದೆ.

ಬರೋಬ್ಬರಿ 1,000,000 ಯುನಿಟ್ ಮಾರಾಟ ಮಾಡಲಾಗಿದೆ. ಈ ಆಗಸ್ಟ್​ನಲ್ಲಿಯೂ ಗರಿಷ್ಠ ಸಂಖ್ಯೆಯಲ್ಲಿ ಮಾರಾಟವಾಗಿದೆ. ಮಾರುತಿ ಸುಜುಕಿಯು ಕಳೆದ ತಿಂಗಳು (ಆಗಸ್ಟ್​ 2024) 19,190 ಯುನಿಟ್ ಬ್ರೆಝಾ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. ಇದರಿಂದಲೇ ಈ ಕಾರಿನ ಖ್ಯಾತಿ ಎಷ್ಟಿದೆ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. 2022ರ ಹಣಕಾಸು ವರ್ಷದಲ್ಲಿ 113,751 ಯುನಿಟ್, 2023 ಹಣಕಾಸು ವರ್ಷದಲ್ಲಿ145,665 ಯುನಿಟ್ ಹಾಗೂ 2024ರ ಹಣಕಾಸು ವರ್ಷದಲ್ಲಿ 169,897 ಯುನಿಟ್ ಬ್ರೆಝಾ ಮಾರಾಟ ಮಾಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 4, 2024, 11:52 [IST]
English summary
Maruti suzuki sales in aug 2024 details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+