Maruti Suzuki: ಮಾರುತಿ ಸುಜುಕಿಗೆ ಅದೃಷ್ಟ ತಂದ ಬ್ರೆಝಾ, ಫ್ರಾಂಕ್ಸ್.. ನೂತನ 'ಡಿಜೈರ್' ಬುಕ್ಕಿಂಗ್‌ನಲ್ಲಿ ಸುನಾಮಿ!

ಮಾರುತಿ ಸುಜುಕಿ (Maruti Suzuki) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಕಾರುಗಳನ್ನು ಮಾರಾಟಗೊಳಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯ ನವೆಂಬರ್ ತಿಂಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಗೊಂಡಿದ್ದು, ದೊಡ್ಡ ಮಟ್ಟದ ಪ್ರಗತಿಯನ್ನು ಸಾಧಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಕಳೆದ ತಿಂಗಳು (ನವೆಂಬರ್ - 2024) 'ಮಾರುತಿ ಸುಜುಕಿ' ಒಟ್ಟು 1,81,531 ಯುನಿಟ್ (ದೇಶೀಯ ಮಾರಾಟ - ವಿದೇಶಕ್ಕೆ ರಫ್ತು) ಕಾರು ಸೇರಿದಂತೆ ಇತರೆ ವಾಹನಗಳನ್ನು ಮಾರಾಟಗೊಳಿಸಿದೆ. 2023ರ ಇದೇ ಅವಧಿಯಲ್ಲಿ ಮಾರಲ್ಪಟ್ಟ 1,64,439 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 10.39% ಬೆಳವಣಿಗೆಯಾಗಿದೆ.

Maruti Suzuki Sold 1 81 Lakh Vehicles In November 2024 Brezza Fronx Grand Vitara Top Selling Cars

ಮಾರುತಿ ಸುಜುಕಿಯು ಆಲ್ಟೊ ಮತ್ತು ಎಸ್-ಪ್ರೆಸ್ಸೊ ಒಳಗೊಂಡಂತೆ ಸಣ್ಣ ಕಾರಿನ ವಿಭಾಗದಲ್ಲಿ (Small Car Segment) ಸ್ವಲ್ಪ ಮಟ್ಟಿನ ಹಿನ್ನೆಡೆ ಅನುಭವಿಸಿದೆ. ಈ ನವೆಂಬರ್‌ನಲ್ಲಿ 9,750 ಯುನಿಟ್ ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗಿದೆ. 2023ರಲ್ಲಿ ನವೆಂಬರ್‌ ತಿಂಗಳಲ್ಲಿ 9,959 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು.

ಕಾಂಪ್ಯಾಕ್ಟ್ ಕಾರು ವಿಭಾಗದಲ್ಲಿ (Compact Car Segment) ಮಾರುತಿ ಸುಜುಕಿ ಭಾರಿ ನಷ್ಟವನ್ನು ಅನುಭವಿಸಿದೆ. ಹೋದ ತಿಂಗಳು (ನವೆಂಬರ್ - 2024) 61,373 ಯುನಿಟ್ ಕಾರುಗಳನ್ನು ಮಾತ್ರ ಮಾರಾಟಗೊಳಿಸಿದೆ. ಅದೇ 2023ರಲ್ಲಿ ನವೆಂಬರ್‌ನಲ್ಲಿ 74,638 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಕಾಂಪ್ಯಾಕ್ಟ್ ವಿಭಾಗದಲ್ಲಿ ಬಲೆನೊ, ಸೆಲೆರಿಯೊ, ಡಿಜೈರ್, ಇಗ್ನಿಸ್, ಸ್ವಿಫ್ಟ್ ಮತ್ತು ವ್ಯಾಗನ್ ಆರ್ ಜನಪ್ರಿಯ ಕಾರುಗಳಾಗಿ ಹೊರಹೊಮ್ಮಿವೆ.

Maruti Suzuki Sold 1 81 Lakh Vehicles In November 2024 Brezza Fronx Grand Vitara Top Selling Cars

ಪ್ರೀಮಿಯಂ ಸೆಡಾನ್ ಸಿಯಾಜ್ (Ciaz) ಮಾರಾಟ ಸದ್ದಿಲ್ಲದೇ ದ್ವಿಗುಣಗೊಂಡಿದೆ. ಈ ನವೆಂಬರ್‌ನಲ್ಲಿ 597 ಯುನಿಟ್ ಸಿಯಾಜ್ ಕಾರುಗಳನ್ನು ಮಾರಾಟ ಮಾಡಲಾಗಿದೆ. 2023ರ ನವೆಂಬರ್‌ನಲ್ಲಿ 278 ಯುನಿಟ್‌ಗಳು ಮಾರಾಟವಾಗಿದ್ದವು. ವ್ಯಾನ್ ವಿಭಾಗದಲ್ಲಿ (Van Segment) ಮಾರುತಿ ಸುಜುಕಿ ಕಂಪನಿಯು ಇಕೋ (Eeco) ಕಾರನ್ನು ಮಾರಾಟ ಮಾಡುತ್ತಿದೆ. ಇದರ ಮಾರಾಟ ಪ್ರಮಾಣವು ಸ್ಪರ್ಧಾತ್ಮಕವಾಗಿ ಏರಿಕೆ ಕಂಡಿದೆ. ಕಳೆದ ತಿಂಗಳು 10,589 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

ಎಸ್‌ಯುವಿ & ಎಂಪಿವಿ ವಿಭಾಗದಲ್ಲಿ (SUV & MPV Segment) ಮಾರುತಿ ಸುಜುಕಿ ಉತ್ತಮವಾದ ಪ್ರಗತಿ ಸಾಧಿಸಿದೆ. ಈ ನವೆಂಬರ್‌ನಲ್ಲಿ ಒಟ್ಟು 59,003 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ಇದೇ ಅವಧಿಯಲ್ಲಿ 49,016 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಎಸ್‌ಯುವಿ & ಎಂಪಿವಿ ವಿಭಾಗದಲ್ಲಿ ಬ್ರೆಝಾ, ಎರ್ಟಿಗಾ, ಫ್ರಾಂಕ್ಸ್, ಗ್ರ್ಯಾಂಡ್ ವಿಟಾರಾ, ಇನ್ವಿಕ್ಟೊ ಮತ್ತು ಜಿಮ್ನಿ ಪ್ರಖ್ಯಾತ ಕಾರುಗಳಾಗಿವೆ.

Maruti Suzuki Sold 1 81 Lakh Vehicles In November 2024 Brezza Fronx Grand Vitara Top Selling Cars

ಮಾರುತಿ ಸುಜುಕಿ ವಿದೇಶಗಳಿಗೂ ಉತ್ತಮ ಸಂಖ್ಯೆಯಲ್ಲಿ ಕಾರುಗಳನ್ನು ರಫ್ತು ಮಾಡಿದೆ. ಕಳೆದ ತಿಂಗಳು (ನವೆಂಬರ್ - 2024) 28,633 ಯುನಿಟ್‌ಗಳನ್ನು ವಿದೇಶಕ್ಕೆ ರವಾನಿಸಿದೆ. 2023ರ ನವೆಂಬರ್‌ನಲ್ಲಿ 22,950 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಪಿಕ್ಅಪ್ ಟ್ರಕ್‌ಗಳ ಮಾರಾಟವು ಹೆಚ್ಚಳವಾಗಿದ್ದು, ಈ ನವೆಂಬರ್‌ನಲ್ಲಿ 2,926 ಯುನಿಟ್‌ಗಳು ಮಾರಾಟವಾಗಿವೆ.

ಇನ್ನು, ನ.11 ರಂದು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ನೂತನ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್‌ ಸಹ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಕಾರು ಪ್ರತಿದಿನ 1,000 ಬುಕ್ಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದೆ. ಒಟ್ಟು 30,000ಕ್ಕೂ ಅಧಿಕ ಮಂದಿ ಡಿಜೈರ್ ಸೆಡಾನ್‌ಗಾಗಿ ಆರ್ಡರ್ ಮಾಡಿದ್ದು, 5,000 ಕಾರುಗಳನ್ನು ವಿತರಣೆ ಮಾಡಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, December 3, 2024, 10:31 [IST]
English summary
Maruti suzuki sold 1 81 lakh vehicles in november 2024 brezza fronx grand vitara top selling cars
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+