ಭಾರತಕ್ಕೂ ಬರದೆ ಜರ್ಮನಿಗೆ ಕಾಲಿಟ್ಟ ಹೊಸ ಸ್ವಿಫ್ಟ್ 2024: ಶಬರಿಯಂತೆ ಕಾಯುತ್ತಿರುವ ಭಾರತೀಯರ ಕಥೆ?
ಭಾರತದ ಬಹು ನಿರೀಕ್ಷಿತ ಕಾರು ಮಾದರಿಯಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ 2024 ಇದೀಗ ಜರ್ಮನಿಯಲ್ಲಿ ಅನಾವರಣವಾಗಿದೆ. ಈಗಾಗಲೇ ಜಪಾನ್ ಮತ್ತು ಯುಕೆ ನಲ್ಲಿ ಅನಾವರಣ ಮಾಡಿದ ಅದೇ ಮಾದರಿಯನ್ನು ಇದೀಗ ಮಾರುತಿ ಸುಜುಕಿ ಜರ್ಮನಿಯಲ್ಲೂ ರಿವೀಲ್ ಮಾಡಿದ್ದು, ಕಾರು ಪ್ರೀಯರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದೇ ಮಾದರಿಯು ಇನ್ನು ಕೆಲವೇ ತಿಂಗಳಲ್ಲಿ ಭಾರತಕ್ಕೂ ಕಾಲಿಡಲಿದ್ದು, ಈಗಾಗಲೇ ಎಲ್ಲರಿಗೂ ತಿಳಿದಂತೆ ಭಾರತೀಯ ಕಾರು ಪ್ರೇಮಿಗಳು ಈಗಾಗಲೇ ಈ ಮಾರುತಿ ಸುಜುಕಿ ಸ್ವಿಫ್ಟ್ 2024 (Maruti Suzuki Swift 2024) ಭಾರತಕ್ಕೆ ಕಾಲಿಡುವುದನ್ನೇ ಕಾಯುತ್ತಿದ್ದು, ಈ ಬಾರಿ ಹೈಬ್ರಿಡ್ ಎಂಜಿನ್ ಜೊತೆಗೂ ಬರಲಿದೆ. ಇದರಿಂದ ಕಾರಿನ ಮೇಲಿನ ನಿರೀಕ್ಷೆ ಹೆಚ್ಚಿದೆ.

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿಯು ಹೊಸ ಸ್ವಿಫ್ಟ್ ಕಾರನ್ನು ಈ ವರ್ಷದ ಮಾರ್ಚ್ ಅಥವಾ ಎಪ್ರಿಲ್ ತಿಂಗಳ ಕಾಲಾವಧಿಯಲ್ಲಿ ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಲಿದ್ದು, ಈ ಬಾರಿಯ ಸ್ವಿಫ್ಟ್ ಕಳೆದ ಬಾರಿಯ ಸ್ವಿಫ್ಟ್ ಡಿಸೈನ್‌ಗಿಂತಲೂ ಹಲವಾರು ಬದಲಾವಣೆಗಳನ್ನು ಹೊಂದಲಿದೆ. ಕಾರಿನ ಒಳಭಾಗ ಮತ್ತು ಹೊರಭಾಗ ಎರಡೂ ಕಡೆಯು ಹೊಸ ಹೊಸ ಡಿಸೈನ್ ಟಚ್‌ಗಳನ್ನು ನಾವು ಈ ಬಾರಿ ನಿರೀಕ್ಷಿಸಬಹುದಾಗಿದೆ.
ಹೊಸ ಸ್ವಿಫ್ಟ್ 1.2-ಲೀಟರ್, Z-ಸಿರೀಸ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 82bhp ಪವರ್ ಮತ್ತು 108Nm ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ. 5-ಸ್ಪೀಡ್ ಮ್ಯಾನುವಲ್, ಹೊಸ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು ಲಭ್ಯವಿರುತ್ತದೆ. ಕಾರಿನ ಹೈಬ್ರಿಡ್ ಮಾದರಿಯು 25.5 ಕಿ.ಮೀ ಮೈಲೇಜ್ ನೀಡಬಲ್ಲದು. ಸಾಮಾನ್ಯ ಮಾದರಿಯು 23.4 kmpl ಮೈಲೇಜ್ ನೀಡಬಲ್ಲದು.

ಇದರ ಜೊತೆಗೆ ಈ ಬಾರಿಯ ಕಾರಿನ ಎಂಜಿನ್‌ನಲ್ಲಿ 12V ನ ಮೈಲ್ಡ್ ಹೈಬ್ರಿಡ್ ಸಹ ಇರಲಿದ್ದು, ಇದರಿಂದ ಈ ಕಾರಿನ ಮೈಲೇಜ್ ೩೫ ಕಿಮೀ ವರೆಗೂ ಸಿಗಲಿದೆ ಎಂದು ಹೇಳಲಾಗುತ್ತಿದೆ. ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಂ ಈ ಕಾರಿನ ಒಳಭಾಗದ ಹೈಲೈಟ್ ಆಗಿದ್ದು, ನೆಕ್ಸಾನ್ ಮತ್ತು ಬಲೇನೊ ಕಾರುಗಳಲ್ಲಿ ಇದ್ದ ಅದೇ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಸಹ ಇದಕ್ಕೆ ಬಳಸಲಾಗಿದೆಯೇ ಎಂಬುದು ಎಲ್ಲರ ಪ್ರಶ್ನೆ.
ಇನ್ನು ಇದರ ಜೊತೆಗೆ, ಕ್ಲೈಮೆಟ್ ಕಂಟ್ರೋಲ್‌ಗಾಗಿ ಟಾಗಲ್, ಪುಶ್ ಬಟನ್ ಸ್ಟಾರ್ಟ್-ಸ್ಟಾಪ್, ಅನಲಾಗ್ ಡಯಲ್, ಎಂಐಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಕೀಲೆಸ್ ಎಂಟ್ರಿ, ರಿಮೋಟ್ ಸ್ಟೋರೇಜ್ ಡೋರ್ ಮಿರರ್, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಸೆಂಟರ್ ಕನ್ಸೋಲ್ ಟ್ರೇ, ಡ್ರಿಂಕ್ ಹೋಲ್ಡರ್‌ಗಳು, ಬಾಗಿಲಿನ ಪಾಕೆಟ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.

ಹೊಸ ಸ್ವಿಫ್ಟ್ ಗ್ರ್ಯಾಂಡ್ ಫ್ರಂಟ್ ವಿನ್ಯಾಸ, ಆಕರ್ಷಕ ಗ್ರಿಲ್, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬಂದಿದೆ. ಪ್ರಸ್ತುತ ಮಾದರಿಯಂತೆ ಡೋರ್ ಹ್ಯಾಂಡಲ್‌ಗಳನ್ನು ಹೊಂದಿರುವುದಿಲ್ಲ. ಸ್ವಲ್ಪ ಉತ್ತಮ ಶೈಲಿಯನ್ನು ಪಡೆದಿದ್ದು, ಸ್ಪೋರ್ಟಿ ಅಲಾಯ್ ವೀಲ್‌ಗಳು, ಟೈಲ್‌ಗೇಟ್, ಸಿ-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ. ಬಲೆನೋ ರೀತಿಯ ಡ್ಯುಯಲ್-ಟೋನ್ ಇಂಟೀರಿಯರ್ ಕಲರ್ ಸ್ಕೀಮ್‌ನಲ್ಲಿ ಹೊಸ ಡ್ಯಾಶ್‌ಬೋರ್ಡ್ ಲೇಔಟ್ ನೀಡಲಾಗುವುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications