ಭರ್ಜರಿ ಮೈಲೇಜ್‌ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
ಮಾರುತಿ ಸುಜುಕಿ ಕಾರುಗಳೆಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ಕಾರಣಗಳು ಹಲವು, ಕೆಲವರಿಗೆ ಮಾರುತಿ ಸುಜುಕಿ ಕಾರಿನ ಫೀಚರ್‌ಗಳು ಇಷ್ಟವಾದರೆ, ಇನ್ನು ಕೆಲವರಿಗೆ ಈ ಕಾರಿನ ಬಜೆಟ್ ಒಕೆ ಎನಿಸುತ್ತದೆ. ಮಾರುತಿ ಸುಜುಕಿ ಕಾರುಗಳು ಮಧ್ಯಮ ಮತ್ತು ಕೆಳ ವರ್ಗದ ಜನರ ಬಜೆಟ್‌ಗೆ ಹೊಂದಿಕೊಳ್ಳುವುದು ಸಹ ಪ್ರಮುಖ ಕಾರಣ.
ಮಾರುತಿ ಸುಜುಕಿಯ ಪ್ರಮುಖ ಮತ್ತು ಪ್ರಸಿದ್ದ ಕಾರು ಮಾದರಿಯಾದ ಮಾರುತಿ ಸುಜುಕಿ ಸ್ವಿಫ್ಟ್, 2024 ರಲ್ಲಿ ಹಲವು ಫೀಚರ್ ಮತ್ತು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಸದ್ಯದಲ್ಲೇ ಬರಲಿದೆ. ಎಲ್ಲರೂ ನಿರೀಕ್ಷಿಸುತ್ತಿರುವಂತೆ, ಹಲವು ಬದಲಾವಣೆಗಳೊಂದಿಗೆ ಈ ಕಾರು ಬರುತ್ತಿದೆಯಾದರೂ, ಪ್ರಮುಖವಾಗಿ ಎದುರು ನೋಡುತ್ತಿರುವ ವಿಷಯ ಈ ಕಾರಿನ ಎಂಜಿನ್.

ಹೌದು, ಮಾರುತಿ ಸುಜುಕಿ 2024, ಹೈಬ್ರಿಡ್ ಎಂಜಿನ್ ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಮೂಲಕ ಈಗಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗಿಂತಲೂ, ಅಧಿಕ ಮೈಲೇಜ್ ಮತ್ತು ಹೆಚ್ಚು ರಿಫೈನ್ ಆಗಿರುವ ಎಂಜಿನ್ ಈ ಕಾರಿನಲ್ಲಿ ಸಿಗಲಿದೆ ಎನ್ನಲಾಗುತ್ತಿದೆ. ಸಾಧಾರಣವಾಗಿ ಸ್ವಿಫ್ಟ್ ಉತ್ತಮ ಮೈಲೇಜ್ ನೀಡುತ್ತಿದೆಯಾದರೂ, ಹೈಬ್ರಿಡ್ ಎಂಜಿನ್ ಬಂದರೆ ಈ ಕಾರು ಏನಿಲ್ಲವೆಂದರೂ ಸುಮಾರು 35 ಕಿಮೀ ಮೈಲೇಜ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ಈ ಮೂಲಕ ಇದೇ ಸೆಗ್ಮೆಂಟ್‌ನ ಇತರ ಕಾರುಗಳಿಗೆ ನಡುಕ ಶುರುವಾಗಿದ್ದು ಈ ಸಾಲಿಗೆ ಇದೀಗ ಎಲೆಕ್ಟ್ರಿಕ್ ಕಾರು ಕಂಪನಿಗಳೂ ಸೇರಿಕೊಳ್ಳುತ್ತಿದೆ. ಪ್ರತೀ ಲೀಟರ್‌ಗೆ ಸ್ವಿಫ್ಟ್ ಹೈಬ್ರಿಡ್ ಅತ್ಯಧಿಕ ಮೈಲೇಜ್ ನೀಡಲು ಆರಂಭಿಸಿದರೆ ಎಲೆಕ್ಟ್ರಿಕ್ ಕಾರುಗಳ ಮಾರಾಟ ಕಮ್ಮಿಯಾಗಬಹುದೇನೋ ಎಂಬ ಆತಂಕ ಇದೀಗ ಎಲೆಕ್ಟ್ರಿಕ್ ಕಾರು ಕಂಪನಿಗಳ ಮನದಲ್ಲಿ ಮನೆ ಮಾಡಿದೆ.

ಸದ್ಯಕ್ಕೆ ಎಲೆಕ್ಟ್ರಿಕ್ ಕಾರು ನಿರ್ಮಾಣ ಕಂಪನಿಗಳಿಗೆ ಈ ಭಯ ಮೂಡಿರುವುದಂತೂ ಖಂಡಿತಾ. ಯಾಕೆಂದರೆ ಸುಮಾರು 12 ಲಕ್ಷ ರೂ ಆಸುಪಾಸಿನ ಪೆಟ್ರೋಲ್ ಎಂಜಿನ್ ಕಾರಿನಲ್ಲಿ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ 35 ಕಿಮೀ ಮೈಲೇಜ್ ದೊರೆತರೆ ಖಂಡಿತವಾಗಿಯೂ ಪ್ರತಿಯೊಬ್ಬ ಮಧ್ಯಮ ಕುಟುಂಬದ ಗ್ರಾಹಕನೂ, ಎಲೆಕ್ಟ್ರಿಕ್ ಬದಲಾಗಿ ಈ ಕಾರನ್ನು ಆಯ್ಕೆ ಮಾಡುವುದಂತೂ ಖಂಡಿತ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 - 22.56 kmpl ಮೈಲೇಜ್ ನೀಡುತ್ತದೆ.

ಮುಂಬರಲಿವ ಈ ಕಾರು, 1.2 - ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ - ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಯಿದ್ದು, 30 - 35 kmpl ಮೈಲೇಜ್ ನೀಡಬಹುದು ಎನ್ನಲಾಗಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 - ಲೀಟರ್ 3 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು.
ಅಲ್ಲದೆ, ನೂತನ ಸ್ವಿಫ್ಟ್, ಮರು - ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್, ಡ್ಯುಯಲ್ - ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಜಾಗತಿಕವಾಗಿ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದು. ಸುರಕ್ಷತೆಯ ಸಲುವಾಗಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯದೊಂದಿಗೆ ಲಾಂಚ್ ಆಗಬಹುದು ಎಂದು ಹೇಳಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications