Maruti Suzuki: ಕೇವಲ 6.49 ಲಕ್ಷಕ್ಕೆ ಬಿಡುಗಡೆಯಾದ ಮಾರುತಿ ಹೊಸ ಕಾರಿನ ವಿಶೇಷತೆಗಳು!

ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಮಾರುತಿ ಸುಜುಕಿಯ ಸ್ವಿಫ್ಟ್ ಕಾರು, ತನ್ನ ಹೊಸ ಎಡಿಷನ್‌ನೊಂದಿಗೆ ಇತ್ತೀಚೆಗೆ ಬಿಡುಗಡೆಯಾಗಿದೆ. ಮಾರುತಿ ಸುಜುಕಿಯು ಹಬ್ಬದ ಸೀಸನ್‌ನಲ್ಲಿ ಮಾರಾಟ ಹೆಚ್ಚಿಸಲು ಈಗಾಗಲೇ ಗ್ರ್ಯಾಂಡ್ ವಿಟಾರಾ, ಇಗ್ನಿಸ್, ಬಲೆನೊ, ವ್ಯಾಗನ್ ಆರ್ ಹಾಗೂ ಇದೀಗ ಸ್ವಿಫ್ಟ್ ಬ್ಲಿಟ್ಜ್ ಅನ್ನು ಕೂಡ ಬಿಡುಗಡೆ ಮಾಡಿದೆ. ಮಾರುತಿ ಅರೆನಾ ಡೀಲರ್‌ಗಳು ಸ್ವಿಫ್ಟ್ ಬ್ಲಿಟ್ಜ್ ಅನ್ನು ಸೀಮಿತ ಅವಧಿಗೆ ಮಾರಾಟ ಮಾಡಲಿದ್ದಾರೆ. ಹೊಸ ಎಡಿಷನ್ ಕಾರಿನಲ್ಲಿ ಹೆಚ್ಚುವರಿ ಅಕ್ಸೊಸರಿಗಳನ್ನು ಉಚಿತವಾಗಿ ನೀಡಲಾಗಿದೆ.

ಮಾರುತಿ ಸ್ವಿಫ್ಟ್ ಬ್ಲಿಟ್ಜ್ ಬೆಲೆಯು ಹಬ್ಬದ ಸೀಸನ್‌ನಲ್ಲಿ ಕೇವಲ ರೂ. 6.49 ಲಕ್ಷದಿಂದ 8.02 ಲಕ್ಷ ರೂ. (ಎಕ್ಸ್‌ ಶೂರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಪೆಷಲ್ ಎಡಿಷನ್, ಸ್ಟ್ಯಾಂಡರ್ಡ್‌ ಫೀಚರ್ಸ್ ಜೊತೆಗೆ ಹಿಂಭಾಗದ ಅಂಡರ್‌ ಬಾಡಿ ಸ್ಪಾಯ್ಲರ್, ಬೂಟ್‌ನ ಮೇಲ್ಭಾಗದಲ್ಲಿ ಸ್ಪಾಯ್ಲರ್, ಶೈನಿಂಗ್ ಡೋರ್ ಸಿಲ್‌ಗಳು, ಡೋರ್ ವೈಸರ್‌ಗಳು, ಫಾಗ್ ಲ್ಯಾಂಪ್‌ಗಳು ಮತ್ತು ಬದಿಗಳಲ್ಲಿ ಮೌಲ್ಡಿಂಗ್ ಅಕ್ಸೆಸೊರಿಗಳನ್ನು ಹೊಂದಿದೆ.

maruti-suzuki-swift-blitz-edition-price-features-details

ಈ ಸ್ಪೆಷಲ್ ಸ್ವಿಫ್ಟ್ ಬ್ಲಿಟ್ಜ್ ಎಡಿಷನ್ ಅನ್ನು ಎಲ್ಎಕ್ಸ್ಐ, ವಿಎಕ್ಸ್ಐ (ಒ), ವಿಎಕ್ಸ್ಐ, ವಿಎಕ್ಸ್ಐ ಎಎಂಟಿ ಮತ್ತು ವಿಎಕ್ಸ್ಐ (ಒ) ಎಎಂಟಿ ಎಂಬ ಐದು ವೇರಿಯೆಂಟ್‌ಗಳಲ್ಲಿ ನೀಡಲಾಗುವುದು. ಎಂಜಿನ್ ಹಾಗೂ ಪರ್ಫಾಮೆನ್ಸ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಒಟ್ಟಾರೆ ಸ್ವಿಫ್ಟ್ ಬ್ಲಿಟ್ಜ್ ವಿಶೇಷ ಆವೃತ್ತಿಯನ್ನು ಖರೀದಿಸುವವರಿಗೆ 49,848 ರೂ.ಗಳ ಮೌಲ್ಯದ ಅಕ್ಸೆಸೊರಿ ಕಿಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ.

ಹೊಸ ಸ್ವಿಫ್ಟ್ ಬ್ಲಿಟ್ಞ್ ಎಡಿಷನ್‌ನಲ್ಲಿ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಯುನಿಟ್ ಆಯ್ಕೆಯೊಂದಿಗೆ ಸಿಗುವ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಆಟೋಮ್ಯಾಟಿಕ್‌ನಲ್ಲಿ 25.75 ಕಿ.ಮೀ ಮೈಲೇಜ್ ಹಾಗೂ ಮ್ಯಾನುವಲ್ನಲ್ಲಿ 24.80km ಮೈಲೇಜ್ ನೀಡುತ್ತದೆ. ಹಾಗೆಯೇ ಈ ಎಂಜಿನ್ 80.46 bhp ಪವರ್ ಮತ್ತು 111.7 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

maruti-suzuki-swift-blitz-edition-price-features-details

ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, 3 - ಪಾಯಿಂಟ್ ಸೀಟ್‌ಬೆಲ್ಟ್‌ಗಳು, TCS (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಸೀಟ್ ಬೆಲ್ಟ್ ರಿಮೈಂಡರ್‌ ಒಳಗೊಂಡಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳೊಂದಿಗೆ ಸುರಕ್ಷತೆಯಲ್ಲಿ ರಾಜಿಯಾಗದೇ ಉತ್ತಮ ಸೇಫ್ಟಿ ಫೀಚರ್‌ಗಳನ್ನು ನೀಡಲಾಗಿದೆ.

ಕಳೆದ ಎರಡು ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ವ್ಯಾಗನ್ ಆರ್ ವಾಲ್ಟ್ಜ್ ಎಡಿಷನ್, ಇಗ್ನಿಸ್ ರೇಡಿಯನ್ಸ್ ಎಡಿಷನ್, ಗ್ರ್ಯಾಂಡ್ ವಿಟಾರಾ ಡೊಮಿನಿಯನ್ ಎಡಿಷನ್, ಬಲೆನೊ ರೀಗಲ್ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆಯಾಗಿರುವ ಸ್ವಿಫ್ಟ್ ಬ್ಲಿಟ್ಜ್ ವಿಶೇಷ ಆವೃತ್ತಿಯು ಉತ್ತಮ ಬುಕಿಂಗ್‌ಗಳೊಂದಿಗೆ ಮುನ್ನುಗ್ಗುತ್ತಿದೆ.

maruti-suzuki-swift-blitz-edition-price-features-details

ಹೊಸ ಸ್ವಿಫ್ಟ್ ಸಿಎನ್‌ಜಿ ಇತ್ತೀಚೆಗೆ ಬಿಡುಗಡೆ: ಮಾರುತಿ ಸುಜುಕಿ ಕಳೆದ ತಿಂಗಳು ಸಿಎನ್‌ಜಿ ವೇರಿಯೆಂಟ್ ಕೂಡ ಪರಿಚಯಿಸಿದ್ದು, ಇದು ಬರೋಬ್ಬರಿ 32.85 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ 1.2-ಲೀಟರ್ ಮೂರು ಸಿಲಿಂಡರ್ ಎಂಜಿನ್, 70 ಬಿಹೆಚ್ ಪವರ್ ಮತ್ತು 112 ಎನ್ಎಂ ಟಾರ್ಕ್‌ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 25, 2024, 4:00 [IST]
English summary
Maruti suzuki swift blitz edition price features details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+