ಸ್ವಿಫ್ಟ್‌ ಕಾರನ್ನು ಕ್ಯಾರವಾನ್ ಮಾಡಿದ ಗಟ್ಟಿಗಿತ್ತಿ: ಮಹಿಳೆ ಮಾಡಿದ ಕೆಲಸಕ್ಕೆ ಮಾರುತಿ ಸುಜುಕಿಯೇ ಶಾಕ್‌!

ಅಷ್ಟಕ್ಕೂ ಮನಸಿದ್ದರೆ ಮಾರ್ಗ ಎಂಬ ಮಾತನ್ನು ಸುಮ್ನೆ ಹೇಳಿದ್ದಾರಾ? ಯಾರಿಗೆ ಒಂದು ವಿಷಯವನ್ನು, ಗುರಿಯನ್ನು ತಲುಪಬೇಕು ಎಂಬ ಆಸೆ ಮತ್ತು ಛಲ ಇರುತ್ತದೋ? ಅಂತಹ ವ್ಯಕ್ತಿಗಳು ಸತತ ಪರಿಶ್ರಮದ ಮೂಲಕ ಗುರಿ ಸೇರುತ್ತಾರೆ. ಇದಕ್ಕೆ ನಮ್ಮ ಮುಂದೆ ಹಲವಾರು ನಿದರ್ಶನಗಳಿದೆ. ಅದೇ ರೀತಿಯ ಮತ್ತೊಂದು ಉದಾಹರಣೆ ನಮ್ಮ ಮುಂದಿದೆ.

ಇತ್ತೀಚಿನ ದಿನಗಳಲ್ಲಿ ಕಾರು ಅಥವಾ ಬೈಕ್‌ ತೆಗೆದುಕೊಂಡು ಟ್ರಿಪ್‌ ಹೋಗುವುದು ಒಂದು ಟ್ರೆಂಡ್‌ ಆಗಿದೆ. ಹಲವು ಜನ ಬೈಕ್‌ನಲ್ಲಿ ಹೋದರೆ ಇನ್ನು ಕೆಲವರು ಕಾರು, ಎಂಪಿವಿ ಮುಂತಾದ ದೊಡ್ಡ ದೊಡ್ಡ ವಾಹನಗಳಲ್ಲೂ ಹೋಗುತ್ತಾರೆ. ಇಲ್ಲೊಂದು ಮಹಿಳೆ ತನ್ನ ಮಾರುತಿ ಸ್ವಿಫ್ಟ್‌ ಕಾರೊಂದನ್ನು ಕ್ಯಾರವಾನ್‌ ರೀತಿಯಲ್ಲಿ ಮಾಡಿಕೊಂಡು ಅದರಲ್ಲಿ ಪ್ರವಾಸ ಹೋಗುತ್ತಿದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಕುರಿತಾಗಿ ಇಂದಿನ ಲೇಖನದಲ್ಲಿ ನೋಡೋಣ ಬನ್ನಿ.

Maruti Suzuki Swift Converted Into Caravan

ಯ್ಯೂಟ್ಯೂಬ್‌ ಚಾನಲ್‌ ಒಂದರಲ್ಲಿ ಈ ಕುರಿತಾದ ವಿಡಿಯೋ ಅಪ್‌ಲೋಡ್‌ ಆಗಿದ್ದು ಎಲ್ಲರು ಇದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಕುಟುಂಬದ ಮೂಲಕ ಈಗ ಮಹಿಳೆ ಸಣ್ಣ ಸಣ್ಣ ಟ್ರಿಪ್‌ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಪ್ರವಾಸಗಳನ್ನು ಮಾಡುವ ಯೋಜನೆಯಲ್ಲಿದ್ದಾರೆ. ಮಾರುತಿ ಸುಜುಕಿಯಂತಹ ಚಿಕ್ಕ ಕಾರನ್ನೂ ಸಹ ಈ ರೀತಿ ಕ್ಯಾರವಾನ್‌ ಮಾಡಿಕೊಂಡು ಅದರಲ್ಲಿ ಪ್ರವಾಸಗಳನ್ನು ಮಾಡಬಹುದು ಎಂದು ಈ ಮಹಿಳೆ ತೋರಿಸಿಕೊಟ್ಟಿದ್ದಾರೆ.

ಕಾರಿನ ಹಿಂಭಾಗದ ಸೀಟ್‌ಗಳನ್ನು ಕಳಚಿಟ್ಟು ಅದರಲ್ಲಿ ಮಲಗುವ ಹಾಗೆ ಹಾಸಿಗೆಯನ್ನು ಹಾಕಿ ಸಿದ್ದ ಮಾಡಿದ್ದಾರೆ. ಇನ್ನು ಕಾರಿನ ಬೆಡ್‌ ಕೆಳಗಡೆ ಸ್ಟೋರೇಜ್‌ ಸ್ಪೇಸ್ ಮಾಡಿಕೊಂಡು ಅಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೂಡಿಟ್ಟುಕೊಂಡಿದ್ದು ಅದನ್ನು ಬಳಸುತ್ತಿದ್ದಾರೆ. ಈ ಕಾರಿನಲ್ಲಿ ಅಡುಗೆ ಮಾಡುವ ಎಲ್ಲಾ ವಸ್ತುಗಳನ್ನು ಸಹ ಇಟ್ಟುಕೊಂಡಿದ್ದು, ತಾವು ಎಲ್ಲಿ ಕ್ಯಾಂಪ್‌ ಹಾಕುತ್ತಾರೋ? ಅಲ್ಲಿ ತಮಗೆ ಬೇಕಾದ ಆಹಾರವನ್ನು ಇವರೇ ತಯಾರಿಸಿಕೊಳ್ಳುತ್ತಿರುವುದು ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿಯಾಗಿದೆ.

Maruti Suzuki Swift Converted Into Caravan

ಇನ್ನು ಈ ಕಾರಿನ ಕುರಿತಾಗಿ ವಿಡಿಯೋ ಮಾಡಿರುವ ಯ್ಯೂಟ್ಯೂಬರ್‌ ಒಬ್ಬರೂ ಈ ಕಾರನ್ನು ಇಷ್ಟು ವಿಧದಲ್ಲಿ ಸೆಟ್‌ಅಪ್‌ ಮಾಡಿರುವುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವೇನೆಂದರೆ ಮಾರುತಿ ಸುಜುಕಿ ಸ್ವಿಫ್ಟ್‌ ಎಂಬುದು ಒಂದು ಸಾಧಾರಣ ಗಾತ್ರದ ಕಾರಾಗಿದ್ದು, ಇದನ್ನು ಒಂದು ಕ್ಯಾರವಾನ್‌ ರೀತಿಯಲ್ಲಿ ಸಿದ್ದಪಡಿಸಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ. ಆದರೆ ಈ ಮಹಿಳೆ ಅದನ್ನು ಮಾಡಿ ತೋರಿಸಿರುವುದು ಹಲವರು ಬೆರಗು ಕಣ್ಗಳಿಂದ ನೊಡುತ್ತಿದ್ದಾರೆ.

ಇಷ್ಟೆಲ್ಲಾ ಚರ್ಚೆಗೆ ಕಾರಣವಾದ ಮಾರುತಿ ಸುಜುಕಿ ಸ್ವಿಫ್ಟ್‌ ಬಗ್ಗೆ ನೋಡುವುದಾದರೆ, ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ . ರೂಪಾಂತರಗಳಿಗೆ ಅನುಗುಣವಾಗಿ 22.38 ರಿಂದ 22.56 kmpl ಮೈಲೇಜ್ ನೀಡುತ್ತದೆ.

Maruti Suzuki Swift Converted Into Caravan

ಈ ಕಾರು, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಸಿ ಸೇರಿದಂತೆ ನಾನಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಿಲ್ ಹೋಲ್ಡ್ ಕಂಟ್ರೋಲ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ರೇರ್ ಪಾರ್ಕಿಂಗ್ ಸೇನಾರ್ಸ್ ಸೇರಿದಂತೆ ವಿವಿಧ ಸೇಫ್ಟಿ ಫೀಚರ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 8, 2024, 17:32 [IST]
English summary
Maruti suzuki swift converted into caravan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+