32 Km ಮೈಲೇಜ್, 6 ಏರ್‌ಬ್ಯಾಗ್, ಪ್ರೀಮಿಯಂ ಫೀಚರ್ಸ್: ಸಾಮಾನ್ಯ ಜನರ ಅಂಬಾರಿಗೆ ಭಾರೀ ಡಿಸ್ಕೌಂಟ್

ದೇಶದಲ್ಲಿ ಎಷ್ಟೇ ಅತ್ಯಾಧುನಿಕ ಕಾರುಗಳು ಮಾರುಕಟ್ಟೆಗೆ ಬಂದರೂ ಮಾರುತಿ ಸುಜುಕಿಯ ಸ್ವಿಫ್ಟ್ ಕಾರಿಗೆ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದೆ. ಈ ಸ್ವಿಫ್ಟ್ ದೀರ್ಘಕಾಲದಿಂದಲೇ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಈ ಬಹುಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift ) ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 2005 ರಲ್ಲಿ ಬಿಡುಗಡೆಯಾಗಿತ್ತು. ಮಾರುತಿ ಸುಜುಕಿ ಭಾರತದಲ್ಲಿ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು.

ಜನಪ್ರಿಯ ಮತ್ತು ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ನವೆಂಬರ್‌ ತಿಂಗಳಿನಲ್ಲಿ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ಅರೆನಾ (Arena) ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸುವ ಆಲ್ಟೊ ಕೆ10, ಸೆಲರಿಯೊ, ಸ್ವಿಫ್ಟ್, ಡಿಸೈರ್ ಹಾಗೂ ಬ್ರೆಜಾ ಸೇರಿದಂತೆ ವಿವಿಧ ಕಾರುಗಳ ಖರೀದಿ ಮೇಲೆ ಭಾರೀ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಸ್ವಿಫ್ಟ್ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Maruti Suzuki Swift

ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಮಾದರಿಯು ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದೆ. ಇದರ ವಿವಿಧ ರೂಪಾಂತರಗಳು, ರೂ.15,000 ರಿಂದ ರೂ.65,000 ವರೆಗೆ ರಿಯಾಯಿತಿ ಹೊಂದಿವೆ. ಹೊಚ್ಚ ಹೊಸ ಸ್ವಿಫ್ಟ್ ಕಾರು, ರೂ.6.49 ರಿಂದ ರೂ.9.60 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತವೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರು ಆಕರ್ಷಕ ವಿನ್ಯಾಸ, ಸುಧಾರಿತ ವೈಶಿಷ್ಟ್ಯಗಳು ಮತ್ತು ಗಮನಾರ್ಹ ಮೈಲೇಜ್ ಅನ್ನು ಹೊಂದಿದೆ. ಈ ಮಾರುತಿ ಸ್ವಿಫ್ಟ್ ಕಾರು LXi, VXi, VXi (O), ZXi, ಮತ್ತು ZXi+ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ನೂತನ ಸ್ವಿಫ್ಟ್ ಭರಪೂರ ವೈಶಿಷ್ಟ್ಯಗಳೊಂದಿಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹಲವರ ಕುಟುಂಬದ ಆಯ್ಕೆಯ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.

Maruti Suzuki Swift

ಈ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ನೀಡಿದೆ. ಈ ಎಂಜಿನ್ 80.46 bhp ಪವರ್ ಮತ್ತು 111.7 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ AMT ಯುನಿಟ್ (AGS) ಜೋಡಿಸಲಾಗಿದೆ. ಈ ಸ್ವಿಫ್ಟ್ ಕಾರಿನ ಮ್ಯಾನುವಲ್ ರೂಪಾಂತರವು 24.80km ಮೈಲೇಜ್ ನೀಡಿದರೆ, AGS ರೂಪಾಂತ25.75 ಕಿ.ಮೀ ಮೈಲೇಜ್ ನೀಡುತ್ತದೆ.

ಈ ಸ್ವಿಫ್ಟ್ ಸಿಎನ್‌ಜಿ (Maruti Swift CNG) ಕಾರು 1.2-ಲೀಟರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಅನ್ನು ಹೊಂದಿದೆ.ಈ ಎಂಜಿನ್ 69 ಪಿಎಸ್ ಪವರ್ ಹಾಗೂ 102 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಈ ಸಿಎನ್‌ಜಿ ಮಾದರಿಯು 32.85 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಸ್ವಿಫ್ಟ್ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ ಅನ್ನು ನೀಡಲಾಗಿದೆ.

Maruti Suzuki Swift

ಈ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ಗೆ ಹ್ಯುಂಡೈ ಗ್ರಾಂಡ್ ಐ10 ನಿಯೋಸ್, ಹ್ಯುಂಡೈ ಎಕ್ಸ್‌ಟರ್ ಮತ್ತು ಟಾಟಾ ಪಂಚ್ ಕಾರುಗಳು ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ 9 - ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಅರ್ಕಾಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ಫೀಚರ್ಸ್ ಗಳನ್ನು ಹೊಂದಿವೆ.

ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಸಿಜ್ಲಿಂಗ್ ರೆಡ್, ಲುಸ್ಟರ್ ಬ್ಲೂ, ನಾವೆಲ್ ಆರೆಂಜ್, ಮ್ಯಾಗ್ಮಾ ಗ್ರೇ, ಸ್ಪ್ಲೆಂಡಿಡ್ ಸಿಲ್ವರ್ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಆರು ಮೊನೊಟೋನ್ ಪೇಂಟ್ ಸ್ಕೀಮ್‌ಗಳಲ್ಲಿ ಲಭ್ಯವಿದೆ. ಇನ್ನು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಸಿಜ್ಲಿಂಗ್ ರೆಡ್, ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಲುಸ್ಟರ್ ಬ್ಲೂ ಮತ್ತು ಮಿಡ್ನೈಟ್ ಬ್ಲ್ಯಾಕ್ ರೂಫ್ನೊಂದಿಗೆ ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳನ್ನು ಹೊಂದಿವೆ.

Article Published On: Monday, November 11, 2024, 11:21 [IST]
English summary
Maruti suzuki swift discount in november 2024 details
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+